ನೇಪಾಳಿಗರ ಥರ ಕಾಣಿಸ್ತೀರಿ…ಇಬ್ಬರು ಯುವತಿಯರಿಗೆ ಪಾಸ್ ಪೋರ್ಟ್ ಕೊಡಲು ನಕಾರ!

ಅಧಿಕಾರಿ ಸಹದೇವ್ ಕೌಶಿಕ್ ಅವರು, ತಮ್ಮ ದಾಖಲೆಯನ್ನು ಸರಿಯಾಗಿ ನೋಡಲೇ ಇಲ್ಲ.

Team Udayavani, Jan 2, 2020, 7:17 PM IST

ಚಂಡೀಗಢ್: ನೇಪಾಳಿಗರಂತೆ ಕಾಣಿಸುತ್ತಿದ್ದೀರಿ ಎಂದು ಆರೋಪಿಸಿ ಇಬ್ಬರು ಯುವತಿಯರಿಗೆ ಪಾಸ್ ಪೋರ್ಟ್ ನೀಡಲು ಚಂಡೀಗಢದ ಅಧಿಕಾರಿಗಳು ನಿರಾಕರಿಸಿರುವ ಘಟನೆ ವರದಿಯಾಗಿದೆ. ಚಂಡೀಗಢದ ಹೀನಾ(26ವರ್ಷ) ಮತ್ತು ಸಂತೋಷ್ (29) ಸಹೋದರಿಯರು ಎಲ್ಲಾ ಅಗತ್ಯ ದಾಖಲೆಗಳನ್ನು ನೀಡಿದ್ದರೂ ತಮ್ಮ ಮಾತನ್ನು ಕೇಳಿಸಿಕೊಳ್ಳಲು ನಿರಾಕರಿಸಿರುವುದಾಗಿ ಆರೋಪಿಸಿದ್ದಾರೆ.

ಪೊಲೀಸರ ಪರಿಶೀಲನೆಯ ನಂತರ ಸಹೋದರಿಯರಿಗೆ ಅಂಬಾಲಾ ಪಾಸ್ ಪೋರ್ಟ್ ಕಚೇರಿ ಅಧಿಕಾರಿಗಳು, ಚಂಡೀಗಢದಲ್ಲಿರುವ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಗೆ ಹೋಗುವಂತೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಕಚೇರಿಗೆ ಆಗಮಿಸಿದ್ದ ಯುವತಿಯರಿಗೆ ನೀವು ನೇಪಾಳಿಯಂತೆ ಕಾಣಿಸುತ್ತಿದ್ದೀರಿ ಎಂದು ಚಂಡೀಗಢದ ಅಧಿಕಾರಿಗಳು ದೂರಿರುವುದಾಗಿ ವರದಿ ವಿವರಿಸಿದೆ.

ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯ ಅಧಿಕಾರಿ ಸಹದೇವ್ ಕೌಶಿಕ್ ಅವರು, ತಮ್ಮ ದಾಖಲೆಯನ್ನು ಸರಿಯಾಗಿ ನೋಡಲೇ ಇಲ್ಲ. ಪೌರತ್ವ ದಾಖಲೆಗಾಗಿ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಿದ್ದರು. ಏತನ್ಮಧ್ಯೆ ಸಂತೋಷ್ ತನ್ನ ಆಧಾರ್ ನಂಬರ್ ಮತ್ತು ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ಕೊಟ್ಟಿದ್ದರೆ, ತಂಗಿ ಹೀನಾ ವೋಟರ್ ಐಡಿ ಮತ್ತು ಎಸ್ಸೆಸ್ಸೆಲ್ಸಿ ಅಂಕ ಪಟ್ಟಿ ದಾಖಲೆಗಾಗಿ ನೀಡಿರುವುದಾಗಿ ತಿಳಿಸಿದ್ದಾರೆ.

ಆದರೆ ಪಾಸ್ ಪೋರ್ಟ್ ಅಧಿಕಾರಿ ತಮ್ಮ ದಾಖಲೆಯಲ್ಲಿ ಇಬ್ಬರು ನೇಪಾಳಿಯಂತೆ ಕಾಣಿಸುತ್ತಿದ್ದಾರೆ ಎಂದು ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ. ನನ್ನ ಅಜ್ಜ ನೇಪಾಳದಿಂದ ಬಂದವರು. ನನ್ನ ತಂದೆ ಹುಟ್ಟಿದ ಬಳಿಕ ಅಜ್ಜ ಭಾರತಕ್ಕೆ ಬಂದು ನೆಲೆಸಿದ್ದರು. ನಾವು ಹರ್ಯಾಣ ಸಚಿವ ಅನಿಲ್ ವಿಜಿ ಅವರನ್ನು ಡಿಸೆಂಬರ್ 29ರಂದು ಭೇಟಿಯಾಗಿ ವಿಷಯ ತಿಳಿಸಿದ್ದೇವು. ಎರಡು ದಿನದ ನಂತರ ನಮಗೆ ಚಂಡೀಗಢ್ ಪಾಸ್ ಪೋರ್ಟ್ ಕಚೇರಿಯಿಂದ ಕರೆ ಬಂದಿದ್ದು, ವಾರದೊಳಗೆ ಪಾಸ್ ಪೋರ್ಟ್ ಸಿಗಲಿದೆ ಎಂದು ತಿಳಿಸಿರುವುದಾಗಿ ಹೀನಾ ಮಾಧ್ಯಮವೊಂದಕ್ಕೆ ತಿಳಿಸಿರುವುದಾಗಿ ವರದಿ ಹೇಳಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ