ಚೆನ್ನೈನಲ್ಲಿ ನೀರಿಗಾಗಿ ಹವನ
Team Udayavani, Jun 23, 2019, 5:00 AM IST
ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ನೀರು ಪೂರೈಕೆಯಲ್ಲೂ ವ್ಯತ್ಯಯವಾಗಿದೆ. ಇದರ ನಡುವೆಯೇ ರಾಜ್ಯ ಸರಕಾರ ಮಳೆಗಾಗಿ ದೇಗುಲಗಳಲ್ಲಿ ಪೂಜೆ, ಹವನಗಳನ್ನು ನಡೆಸಲು ಆದೇಶ ನೀಡಿದೆ. ಅದರಂತೆ, ದೇಗುಲಗಳಲ್ಲಿ ಹವನ ನಡೆಯುತ್ತಿದ್ದರೆ, ವಿಪಕ್ಷ ಡಿಎಂಕೆ ನೀರು ಪೂರೈಸಲು ವಿಫಲವಾಗಿರುವ ಕೆ. ಪಳನಿಸ್ವಾಮಿ ನೇತೃತ್ವದ ಸರಕಾರದ ವಿರುದ್ಧ ಖಾಲಿ ಕೊಡಪಾನ ಪ್ರದರ್ಶಿಸಿ ಪ್ರತಿಭಟನೆ ನಡೆಸಿದೆ.
ಮಳೆಗಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಚಿವರು ಭಾಗವಹಿಸಿರುವಂತೆಯೇ ವಿಪಕ್ಷ ಡಿಎಂಕೆ ನಾಯಕರು ವಿವಿಧ ಸ್ಥಳಗಳಲ್ಲಿ ರಾಜ್ಯದ ಜನರಿಗೆ ಸರಿಯಾದ ರೀತಿಯಲ್ಲಿ ಶುದ್ಧ ಕುಡಿವ ನೀರು ಪೂರೈಸಲು ಎಐಎಡಿಎಂಕೆ ಸರಕಾರ ವಿಫಲವಾಗಿದೆ ಎಂದು ದೂರಿ, ಪ್ರತಿಭಟನೆ ನಡೆಸಿದರು.
ಚೆನ್ನೈನಲ್ಲಿ ಮಾತನಾಡಿದ ಸಚಿವ ಡಿ.ಜಯಕುಮಾರ್, ಯಜ್ಞ ಎನ್ನುವುದು ಧಾರ್ಮಿಕ ನಂಬಿಕೆ. ನಾವು ನಂಬಿದ ದೇವರು ಮಳೆ ಸುರಿಸಲಿದ್ದಾರೆ ಎಂಬ ನಂಬಿಕೆ ನಮ್ಮದು ಎಂದಿದ್ದಾರೆ. ಡಿಎಂಕೆ ನಾಯಕ ಮತ್ತು ಚೆನ್ನೈನ ಮಾಜಿ ಮೇಯರ್ ಮಾ.ಸುಬ್ರಮಣಿಯನ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಏನೂ ಪ್ರಯೋಜನವಿಲ್ಲ. ಅದರ ಬದಲಾಗಿ ನೀರು ಪೂರೈಕೆಗೆ ಸೂಕ್ತ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿ ಎಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಡಿಶಾದಲ್ಲಿ ರಸ್ತೆ ಅಪಘಾತ: ಪಶ್ಚಿಮ ಬಂಗಾಳದ 6 ಮಂದಿ ಸಾವು
ಪತ್ನಿಗಾಗಿ 90,000 ರೂ. ಬೆಲೆಯ ಬೈಕ್ ಖರೀದಿಸಿದ ಭಿಕ್ಷುಕ!
ಆರ್ಮಿ ಏವಿಯೇಷನ್ಗೆ ಮೊದಲ ಮಹಿಳಾ ಪೈಲೆಟ್; ಹೊಸ ಇತಿಹಾಸ ಬರೆದ ಕ್ಯಾಪ್ಟನ್ ಅಭಿಲಾಷಾ ಬರಕ್
ಗಂಡು, ಗಂಡನ್ನೇ ಮದುವೆಯಾದರೆ ಮಕ್ಕಳಾಗುತ್ತವೆಯೇ?: ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಶ್ನೆ
ಲಖೀಂಪುರ ಖೇರಿ ಪ್ರಕರಣ: ಮೇ 30ಕ್ಕೆ ಆಶಿಶ್ ಮಿಶ್ರಾ ಜಾಮೀನು ವಿಚಾರಣೆ
MUST WATCH
ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ
IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್
Wheel Chair Romeo actor exclusive interview | RELEASING ON MAY 27TH
ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?
ಹೊಸ ಸೇರ್ಪಡೆ
ಬೆಳ್ತಂಗಡಿ ತಾಲೂಕಿಗೆ ಜಿಲ್ಲಾಧಿಕಾರಿ ಭೇಟಿ: ಚಾರ್ಮಾಡಿ ಘಾಟಿ, ಭೂಕುಸಿತ ಪ್ರದೇಶ ಪರಿಶೀಲನೆ
ಈಡನ್ನಲ್ಲಿ ಆರ್ಸಿಬಿ ರಜತ ವೈಭವ; ಹೊರಬಿದ್ದ ಲಕ್ನೋ ಸೂಪರ್ ಜೈಂಟ್ಸ್
ಸಿಎಂ ದಾವೋಸ್ ಆರ್ಥಿಕ ಶೃಂಗಸಭೆ ಭೇಟಿ ಯಶಸ್ವಿ; 52 ಸಾವಿರ ಕೋ. ರೂ.ಬಂಡವಾಳ ಹೂಡಿಕೆಗೆ ಒಪ್ಪಂದ
ತಪ್ಪುಗಳನ್ನು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ
ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು; 91.07 ಲಕ್ಷ ಕೆ.ಜಿ. ಹಾಲು ಶೇಖರಣೆ