ನಿಮ್ಮ ಬಳಿ ದಾಖಲೆ ಇದ್ರೆ ಕೋರ್ಟ್ ಗೆ ಹೋಗಿ; ಅಮಿತ್ ಶಾ ಸವಾಲು
Team Udayavani, Oct 13, 2017, 3:47 PM IST
ನವದೆಹಲಿ: ಪುತ್ರ ಜಯ್ ಶಾ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಜ್ ತಕ್ ನ್ಯೂಸ್ ಚಾನೆಲ್ ನಡೆಸಿದ ಮಾತುಕತೆಯಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ.
ಜಯ್ ಶಾ ಮಾಲಿಕತ್ವದ ಸಂಸ್ಥೆಯೊಂದು ಒಂದೇ ವರ್ಷದಲ್ಲಿ 16 ಸಾವಿರ ಪಟ್ಟು ವ್ಯವಹಾರ ವೃದ್ಧಿಸಿಕೊಂಡಿದೆ ಎಂದು ದ ವೈರ್ ಇಂಗ್ಲೀಷ್ ಜಾಲತಾಣವು ವಿಸ್ತೃತ ವರದಿ ಪ್ರಕಟಿಸಿತ್ತು. ಕಾಂಗ್ರೆಸ್ ಪಕ್ಷವು ಈ ಪ್ರಕರಣವನ್ನು ಕೈಗೆತ್ತಿಕೊಂಡು ಬಿಜೆಪಿ ವಿರುದ್ಧ ವಾಕ್’ಪ್ರಹಾರ ನಡೆಸಿತ್ತು.
‘ಒಂದು ವೇಳೆ ನಿಮ್ಮ ಬಳಿ ದಾಖಲೆ ಇದ್ದರೆ ನಿಮ್ಮ ಆರೋಪವನ್ನು ಸಾಬೀತುಪಡಿಸಿ, ಕೋರ್ಟ್ ಕಟಕಟೆಗೆ ಹತ್ತಿಸಿ. ಕೇವಲ ನನ್ನ ಮಗನ ಕಂಪನಿ ಅಲ್ಲ, ಸರ್ಕಾರದಿಂದಾಗಲಿ ಅಥವಾ ಬೋಪೋರ್ಸ್ ನಂತಹ ಪ್ರಕರಣಗಳಲ್ಲಿ ಒಂದೇ ಒಂದು ರೂಪಾಯಿ ಕಿಕ್ ಬ್ಯಾಕ್ ಪಡೆದುಕೊಂಡಿದಿದ್ದರೂ ಕೂಡಾ ಸಾಬೀತುಪಡಿಸಿ ಎಂದು ಶಾ ಸವಾಲು ಹಾಕಿದ್ದಾರೆ.
ಶಾ ಪುತ್ರನ ವಿರುದ್ಧ ಸುದ್ದಿ ಪ್ರಕಟಿಸಿದ ಇಂಗ್ಲಿಷ್ ಜಾಲತಾಣದ ವಿರುದ್ಧ ಜಯ್ ಶಾ ನೂರು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ