ಪಿಐಎ ಶಾಖೆ ಕ್ರಮಬದ್ಧ ಕೋರಿಕೆ ತಿರಸ್ಕರಿಸಿದ ಆರ್ಬಿಐ: ಕೋರ್ಟ್ ತಡೆ
Team Udayavani, May 31, 2018, 3:55 PM IST
ಹೊಸದಿಲ್ಲಿ : ಪಾಕಿಸ್ಥಾನ್ ಇಂಟರ್ ನ್ಯಾಶನಲ್ ಏರ್ ಲೈನ್ಸ್ ನ ಭಾರತದಲ್ಲಿರುವ ಶಾಖೆಗಳನ್ನು ಕ್ರಮಬದ್ಧಗೊಳಿಸುವ ಪಿಐಎ ಕೋರಿಕೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ತಿರಸ್ಕರಿಸಿರುವ ಆದೇಶಕ್ಕೆ ದಿಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಭಾರತದಲ್ಲಿನ ಪಿಐಎ ಶಾಖೆಗಳನ್ನು ಕ್ರಮಬದ್ಧ ಗೊಳಿಸಬೇಕೆಂಬ ಕೋರಿಕೆಯನ್ನು ಯಾವ ಕಾರಣಗಳಿಗಾಗಿ ತಿರಸ್ಕರಿಸಲಾಗಿದೆ ಎಂಬುದನ್ನು ಆರ್ಬಿಐ ತಿಳಿಸಿಲ್ಲವಾದ್ದರಿಂದ ಅದರ ಈ ಕ್ರಮಕ್ಕೆ ಜಸ್ಟಿಸ್ ರಾಜೀವ್ ಶಕ್ಧರ್ ಅವರು ತಡೆಯಾಜ್ಞೆ ನೀಡಿದರು.
ಪಿಐಎ ಕೋರಿಕೆಯನ್ನು ತಿರಸ್ಕರಿಸಲಾಗಿದೆ ಎಂದು ಹೇಳುವ ಹಣಕಾಸು ಸಚಿವಾಲಯದ ಪತ್ರದ ನೆಲೆಯಲ್ಲಿ ಆರ್ಬಿಐ ತನ್ನ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅದರ ವಕೀಲರು ಕೋರ್ಟಿಗೆ ಮೌಖೀಕವಾಗಿ ತಿಳಿಸಿದರು.
“ಹಾಗಿದ್ದರೂ ಯಾವ ಕಾರಣಗಳಿಗೆ ಪಿಐಎ ಕೋರಿಕೆಯನ್ನು ತಿರಸ್ಕರಿಸಲಾಗಿದೆ ಎಂಬುದು ಹಣಕಾಸು ಸಚಿವಾಲಯದ ಪತ್ರದಲ್ಲಿ ಸ್ಪಷ್ಟವಾಗಿಲ್ಲ’ ಎಂದು ನ್ಯಾಯಾಧೀಶರು ಆರ್ಬಿಐ ಕ್ರಮಕ್ಕೆ ತಡೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
MUST WATCH
ಹೊಸ ಸೇರ್ಪಡೆ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ