ಕಾಂಕ್ರೀಟ್ ಗೋಡೆ ಕಟ್ಟುವುದರಿಂದ ರೈತರ ಸಮಸ್ಯೆ ಪರಿಹಾರವಾಗಲ್ಲ :ಮಾತುಕತೆಯಿಂದ ಪರಿಹರಿಸಿ;HDD
ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರಿಂದ ಸಲಹೆ
Team Udayavani, Feb 4, 2021, 9:25 PM IST
ನವದೆಹಲಿ: ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಬೇಕು. ಈ ಮೂಲಕವೇ ವಿವಾದ ಇತ್ಯರ್ಥ ಮಾಡಿಕೊಳ್ಳಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಪ್ರತಿಭಟನಾಕಾರರು ಬರದಂತೆ ಅಡ್ಡಲಾಗಿ ಗೋಡೆ ಕಟ್ಟುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಪ್ರತಿಪಾದಿಸಿದರು. ಜತೆಗೆ, ಗಣರಾಜ್ಯೋತ್ಸವ ದಿನ ನಡೆದ ಹಿಂಸಾಚಾರವನ್ನೂ ಖಂಡಿಸಿದ ಅವರು, ಇದರಲ್ಲಿ ರೈತರ ಪಾತ್ರವಿಲ್ಲ ಎಂದರು. ಹೀಗಾಗಿ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು. ಅಲ್ಲದೆ, ಅಂದಿನ ಘಟನೆಗೆ ಸಮಾಜ ದ್ರೋಹಿ ಸಂಘಟನೆಗಳ ಪಾತ್ರವಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ವಸತಿ ನಿಲಯ ಕಾರ್ಮಿಕರಿಗೆ ಇಪಿಎಫ್ ಸೌಕರ್ಯಕ್ಕೆ ಆಗ್ರಹಿಸಿ ಅಹೋರಾತ್ರಿ ಹೋರಾಟ
ಕೃಷಿ ಕಾಯ್ದೆಗಳ ಬಗ್ಗೆ ಮಾತನಾಡಿದ ಅವರು, ಇವು ರಾಜ್ಯ ಸರ್ಕಾರಗಳ ಪಾಲಿಗೆ ಬರುವ ವಿಚಾರಗಳು. ಇಂಥ ಕಾಯ್ದೆಗಳನ್ನು ತರುವ ಮುನ್ನ ಎಲ್ಲ ರಾಜ್ಯ ಸರ್ಕಾರಗಳ ಜತೆ ಮಾತುಕತೆ ನಡೆಸಬೇಕಿತ್ತು ಎಂದೂ ಹೇಳಿದರು.