ಮದುವೆಗೆ ಜಾತಕ ನೋಡುವ ಹಾಗೆ ವರ್ಷಕ್ಕೊಮ್ಮೆ ಆರೋಗ್ಯ ಪರೀಕ್ಷಿಸಿ : ಸಾವಂತ್
Team Udayavani, Jul 3, 2022, 6:36 PM IST
ಪಣಜಿ: ಮದುವೆಯ ಜಾತಕ ನೋಡುವ ಹಾಗೆ ವರ್ಷಕ್ಕೊಮ್ಮೆಯಾದರೂ ನಮ್ಮ ಆರೋಗ್ಯ ಕುಂಡಲಿ ನೋಡಬೇಕು ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ಹೇಳಿದ್ದಾರೆ.
ಬಿಜೆಪಿ ಹಾಗೂ ಗೋವಾ ಮೆಡಿಕಲ್ ಸೆಲ್ ಸಹಯೋಗದಲ್ಲಿ ಸಾಖಳಿಯ ರವೀಂದ್ರ ಭವನದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ,ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿದೆ. ಇದರಿಂದಾಗಿ ನಮ್ಮ ಆರೋಗ್ಯದ ಕಾಳಜಿಯನ್ನು ನಾವೇ ತೆಗೆದುಕೊಳ್ಳಬೇಕು. ಮದುವೆಗೆ ಹೇಗೆ ಜಾತಕ ನೋಡುತ್ತೇವೆಯೋ ಹಾಗೆಯೇ ವರ್ಷಕೊಮ್ಮೆಯಾದರೂ ನಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಧುಮೇಹ ತಜ್ಞ ಡಾ.ತೇಜಸ್ ಕಾಮತ್, ಡಾ. ಸ್ನೇಹಾ ಭಾಗವತ್, ಮತ್ತಿತರರು ಉಪಸ್ಥಿತರಿದ್ದರು.