ಉಗ್ರರಿಗೆ ನೆರವು: ಪಾಕ್‌ ಕಪ್ಪು ಪಟ್ಟಿಗೆ?

40 ನಿಯಮಗಳಲ್ಲಿ ಒಂದರಲ್ಲಿ ಮಾತ್ರ ಪಾಸ್‌ ಆದ ಪಾಕ್‌

Team Udayavani, Oct 9, 2019, 5:45 AM IST

ಇಸ್ಲಾಮಾಬಾದ್‌: ಉಗ್ರ ನಿಗ್ರಹಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೊರ ಪ್ರಪಂಚದೆದುರು ಬಡ ಬಡಾಯಿಸುತ್ತಾ, ಒಳಗೊಳಗೇ ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ಒದಗಿಸುತ್ತಿರುವ ಪಾಕಿಸ್ಥಾನವು ಈ ಬಾರಿಯೂ ಹಣಕಾಸು ಕಾರ್ಯ ಚಟುವಟಿಕೆ ನಿಯಂತ್ರಣ ಕಾರ್ಯಪಡೆ(ಎಫ್ಎಟಿಎಫ್)ಯ ಕಪ್ಪು ಪಟ್ಟಿಗೆ ಸೇರುವ ಅಥವಾ ಗ್ರೇ ಲಿಸ್ಟ್‌ (ಬೂದು ಬಣ್ಣದ ಪಟ್ಟಿ)ನಲ್ಲಿಯೇ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.

ಕಾರ್ಯಪಡೆ ಸೂಚಿಸಿರುವ 40 ನಿಯಮಗಳಲ್ಲಿ ಪಾಕಿಸ್ಥಾನ ಕಾರ್ಯಗತಗೊಳಿಸಿದ್ದು ಕೇವಲ ಒಂದು ನಿಯಮವನ್ನು ಮಾತ್ರ! ಹೀಗಾಗಿ ನಿಯಮದಂತೆ ಪಾಕಿಸ್ಥಾನವನ್ನು ಎಫ್ಎಟಿಎಫ್ ಕಪ್ಪು ಪಟ್ಟಿಗೆ ಸೇರಿಸಬೇಕು. ಆದರೆ ಪಾಕ್‌ ಸರಕಾರವು ಈಗಾಗಲೇ ಮಿತ್ರರಾಷ್ಟ್ರಗಳಾದ ಚೀನ, ಮಲೇಷ್ಯಾ ಮತ್ತು ಟರ್ಕಿಯೊಂದಿಗೆ ಮಾತುಕತೆ ನಡೆಸಿ ಕಪ್ಪು ಪಟ್ಟಿಗೆ ಸೇರಿಸದಂತೆ ಲಾಬಿ ಮಾಡಿದೆ. ಅಲ್ಲದೆ, ಎಫ್ಎಟಿಎಫ್ಗೆ ಈಗ ಚೀನದ ಕ್ಸಿಯಾನ್‌ಜಿಮ್‌ ಲಿಯು ಅವರೇ ಅಧ್ಯಕ್ಷರಾಗಿರುವ ಕಾರಣ ಅವರು ಪಾಕ್‌ ಪರ ಮೃದು ಧೋರಣೆ ತೋರುವ ಸಾಧ್ಯತೆ ಇದೆ.

ನಿಯಮಗಳ ಪಾಲನೆಯೇ ಇಲ್ಲ
ಉಗ್ರ ನಿಗ್ರಹಗಳಿಗೆ ಸಂಬಂಧಿಸಿ ಪಾಕ್‌ಗೆ ಹಲವು ಕಠಿನ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿತ್ತು. ಆದರೆ ಪಾಕ್‌ ಹೆಚ್ಚಿನದನ್ನು ಪಾಲಿಸಿಲ್ಲ.

ನಿಲುವು ಬದಲಿಸಿದ ಚೀನ!
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಗೊಳಿಸಿದ ಭಾರತದ ನಿಲುವನ್ನು ವಿಶ್ವಸಂಸ್ಥೆಯ ವೇದಿಕೆ ಯಲ್ಲಿ ಪ್ರಸ್ತಾವಿಸಲು ಪಾಕ್‌ಗೆ ರಾಜಕೀಯ ನೆರವನ್ನು ಪರೋಕ್ಷ ವಾಗಿ ನೀಡಿದ್ದ ಚೀನ, ಈಗ ಆ ವಿಚಾರದಲ್ಲಿ ಉಲ್ಟಾ ಹೊಡೆದಿದೆ. ಈ ವಿಚಾರವನ್ನು ಭಾರತ ಮತ್ತು ಪಾಕ್‌ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದಿದೆ. ಈ ವಾರ ಚೀನ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಹಾಗೂ ಮೋದಿ ಭೇಟಿ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ