ಶತಮಾನದ ಹಿಂದೆಯೇ ಇಲ್ಲಿತ್ತು ಮುಟ್ಟಿನ ರಜೆ
Team Udayavani, Aug 21, 2017, 8:30 AM IST
ತಿರುವನಂತಪುರ: ಶಾಲೆ, ಕಾಲೇಜು ವಿದ್ಯಾರ್ಥಿನಿಯರಿಗೆ “ಮುಟ್ಟಿನ ರಜೆ’ ನೀಡುವ ಕುರಿತಂತೆ ದೇಶಾದ್ಯಂತ ತೀವ್ರ ಚರ್ಚೆ ನಡೆಯುತ್ತಿದೆ. ಆಧುನಿಕ ಭಾರತದಲ್ಲಿ ಮಹಿಳಾ ಪರ ಧ್ವನಿ ಕೇಳಿಬರುತ್ತಿರುವುದು ಆಶಾದಾಯಕ ಬೆಳವಣಿಗೆಯೇ. ಆದರೆ ಕೇರಳದ ಸರಕಾರಿ ತಿರುವನಂತಪುರದ ಶಾಲೆಗೆ ಹೋಲಿಸಿದರೆ ಈ ಚರ್ಚೆ ಔಟ್ ಡೇಟೆಡ್ ಅನಿಸದೇ ಇರದು. ಏಕೆಂದರೆ ಕೇರಳದ ಸರಕಾರಿ ಶಾಲೆಯೊಂದು ಶತಮಾನದ ಹಿಂದೆಯೇ ವಿದ್ಯಾರ್ಥಿನಿಯರಿಗೆ “ಮುಟ್ಟಿನ ರಜೆ’ ನೀಡಿತ್ತು!
ಹಿಂದೆ ಕೇರಳದ ಕೊಚ್ಚಿ ಜಿಲ್ಲೆಗೆ ಸೇರಿದ್ದ ಹಾಗೂ ಪ್ರಸ್ತುತ ಎರ್ನಾಕುಲಂ ಜಿಲ್ಲೆಗೆ ಒಳಪಟ್ಟಿರುವ ತಿರುವನಂತಪುರದ ಬಾಲಕಿಯರ ಸರಕಾರಿ ಶಾಲೆ 1912ರಲ್ಲೇ ತನ್ನ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಿತ್ತು. ವಾರ್ಷಿಕ ಪರೀಕ್ಷೆ ವೇಳೆ ಮುಟ್ಟಾಗುವ ವಿದ್ಯಾರ್ಥಿನಿಯರು ರಜೆ ಪಡೆಯಲು ಅವ ಕಾಶವಿದ್ದು, ಅನಂತರ ಅವರಿಂದ ಪರೀಕ್ಷೆ ಬರೆಸಲಾಗುತ್ತದೆ.
ಇತಿಹಾಸಕಾರ ಪಿ.ಭಾಸ್ಕರನ್ಉನ್ನಿ ಎಂಬವರು ರಚಿಸಿ ರುವ ಹಾಗೂ ಕೇರಳ ಸಾಹಿತ್ಯ ಅಕಾಡೆಮಿ 1988ರಲ್ಲಿ ಹೊರತಂದಿರುವ “ಕೇರಳ ಇನ್ ನೈನ್ಟೀನ್¤ ಸೆಂಚೂÂರಿ’ ಎಂಬ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್