ಮಲ್ಟಿಪ್ಲೆಕ್ಸ್ ದಬ್ಟಾಳಿಕೆಗೆ ಹೈಕೋರ್ಟ್ ಕೆಂಗಣ್ಣು
Team Udayavani, Jan 5, 2018, 7:15 AM IST
ಮುಂಬೈ: ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳಿಗೆ ಬರುವ ಜನರಿಗೆ ಅವರು ತರುವ ಹೊರಗಡೆಯ ತಿಂಡಿಯನ್ನು ಒಳಗೆ ಕೊಂಡೊಯ್ಯದಂತೆ ನಿಷೇಧಿಸುವ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ಗಳ ನಡೆಯನ್ನು ಬಾಂಬೆ ಹೈಕೋರ್ಟ್ ಪ್ರಶ್ನೆ ಮಾಡಿದೆ. ಈ ಬಗ್ಗೆ ಸೂಕ್ತ ಉತ್ತರ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.
ಜೈನೇಂದ್ರಬಾಕ್ಸಿ ಎಂಬುವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಪೀಠ, ಅನೇಕ ಚಿತ್ರಮಂದಿರಗಳಲ್ಲಿ, ಮಲ್ಟಿಪ್ಲೆಕ್ಸ್ಗಳಲ್ಲಿ ಹೊರಗಿನ ತಿಂಡಿಗಳನ್ನು ನಿರ್ಬಧಿಸಲಾಗುತ್ತದೆ. ಇದರ ಉದ್ದೇಶವೇನು? ಜನ ಮಲ್ಟಿಪ್ಲೆಕ್ಸ್ಗಳಲ್ಲಿರುವ ತಿಂಡಿಗಳನ್ನೇ ತಿನ್ನಬೇಕೆಂದು ಪರೋಕ್ಷವಾಗಿ ಏಕೆ ಬಲವಂತಪಡಿಸಲಾಗುತ್ತಿದೆ ಎಂದು ಕೇಳಿದೆ.