ದೇಶದ ಮಣ್ಣಿನಲ್ಲಿ ಹಿಂದುತ್ವದ DNA ಇದೆ:ಸ್ವಾಮಿ

Team Udayavani, Nov 14, 2017, 12:28 PM IST

13-Isckon-Event.jpg

ನಾಸಿಕ್‌: ಹಿಂದೂಸ್ಥಾನ ಹಿಂದೂ ರಾಷ್ಟ್ರ ವಾಗಿದ್ದು, ಈ ದೇಶದ ಮಣ್ಣಿನಲ್ಲಿ ಹಿಂದುತ್ವದ ಡಿಎನ್‌ಎ ಇದೆ ಎಂದು ಇಲ್ಲಿ ಬಿಜೆಪಿಯ ಹಿರಿಯ ನಾಯಕ ಸುಬ್ರಹ್ಮಣ್ಯನ್‌ ಸ್ವಾಮಿ ಅವರು ಹೇಳಿದ್ದಾರೆ.

ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಮುಸಲ್ಮಾನರು ಸಹಕರಿಸಬೇಕೇ ಹೊರತೂ ಅದಕ್ಕೆ ಅಡ್ಡಿಪಡಿಸಬಾರದು ಎಂದು ಕರೆ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯಕಾರಿಣಿಯ ಎಲ್ಲ ಸದಸ್ಯರಿಗೆ ತಿಹಾರ್‌ ಜೈಲಿನ ಪ್ರವಾಸವನ್ನು ಮಾಡಿಸಲಾಗುವುದು ಎಂದೂ ಅವರು ಈ ಸಂದರ್ಭದಲ್ಲಿ ಅಣಕವಾಡಿದ್ದಾರೆ.

ಸ್ವಾಮಿ ಅವರು ನಾಸಿಕ್‌ನ ಶ್ರೀ ರಾಧಾ ಮದನ್‌ ಗೋಪಾಲ ಇಸ್ಕಾನ್‌ ದೇವಾಲಯದಲ್ಲಿ ಭಗವದ್ಗೀತಾ ಪ್ರಜ್ಞಾಶೋಧ್‌ ಪರೀಕ್ಷಾ ಪುರಸ್ಕಾರ ವಿತರಣೆ ಸಮಾರಂಭದಲ್ಲಿ  ಮಾತನಾಡಿದರು. ವೇದಿಕೆಯಲ್ಲಿ ಶಾಸಕ ದೇವಯಾನಿ ಫರಾಂದೆ, ಮಂದಿರದ ವಿಶ್ವಶ§ ಶಿಕ್ಷಾಷ್ಟಕಮ್‌ ಪ್ರಭು ಅವರು ಉಪಸ್ಥಿತರಿದ್ದರು.

ಹಿಂದಿಯಲ್ಲಿ ತಮ್ಮ ಭಾಷಣವನ್ನು ಆರಂಭಿಸಿದ ಸುಬ್ರಹ್ಮಣ್ಯನ್‌ ಸ್ವಾಮಿ ಅವರು ಅಯೋಧ್ಯೆ ಸೇರಿದಂತೆ ಮಥುರಾ ಮತ್ತು ವಾರಾಣಸಿಯಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ  ಶೀಘ್ರ ಹೈಕೋರ್ಟ್‌ ತನ್ನ 
ತೀರ್ಪು ಪ್ರಕಟಿಸಲಿದೆ. ಈ ಕೆಲಸದಲ್ಲಿ ಮುಸ್ಲಿಮರು ಕೂಡ ಸಹಕರಿಸ ಬೇಕು ಹಾಗೂ ಮಂದಿರ ನಿರ್ಮಾಣದ ಹಾದಿಯನ್ನು ಸುಗಮಗೊಳಿಸಬೇಕು ಎಂದರು.

ಮೊಘಲರು  ಸುಮಾರು 750 ವರ್ಷಗಳಿಗೂ ಹೆಚ್ಚು ಕಾಲ ದೇಶದಲ್ಲಿ ಆಳ್ವಿಕೆ ನಡೆಸಿದ್ದರು. ಇದರ ಹೊರತಾಗಿಯೂ ದೇಶದಲ್ಲಿ ಹಿಂದೂ ಧರ್ಮದ ಅಸ್ತಿತ್ವವು ದೃಢವಾಗಿ ನಿಂತಿದ್ದು, ಛತ್ರಪತಿ ಶಿವಾಜಿ ಮಹಾರಾಜರಿಂದ ಹಿಡಿದು ರಾಜಸ್ಥಾನದ ಮಹಾರಾಣಾ ಪ್ರತಾಪ್‌ ಅವರಂಥ  ವಿವಿಧ ಯೋಧರ ಮೂಲಕ ಮಾಡಲಾದ ಯುದ್ಧಗಳು ಇದಕ್ಕೆ ಏಕಮಾತ್ರ ಕಾರಣವಾಗಿದೆ ಎಂದವರು ಹೇಳಿದರು.

ಹಿಂದೂ ಭಯೋತ್ಪಾದನೆ ಸೃಷ್ಟಿಯಾಗಲು ಸಾಧ್ಯವೇ ಇಲ್ಲ. ಯಾಕೆಂದರೆ, ಈ ಧರ್ಮದ ಧರ್ಮಗ್ರಂಥ ಭಗವದ್ದೀತೆ ಆಗಿದ್ದು, ಗೀತೆಯು ಭಯೋತ್ಪಾದನೆಯನ್ನು ಕಲಿಸುವುದಿಲ್ಲ. ಆದರೆ,  ನಿಜವಾದ ಹಿಂದೂ ಭಯೋತ್ಪಾದನೆ ಏನೆಂಬುದು, ಚಿದಂಬರಂ ಜೈಲಿಗೆ ಹೋದ ಬಳಿಕ ಅನುಭವವಾಗಲಿದೆ ಎಂದು ಅವರು ಕಿಡಿಕಾರಿದರು.

ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಕಾರ್ಯಕಾರಿಣಿಯ ಎಲ್ಲಾ ಸದಸ್ಯರಿಗೆ ತಿಹಾರ್‌ ಜೈಲಿನ ಪ್ರವಾಸವನ್ನು ಮಾಡಿಸಲಾಗುವುದು. ಪಿ. ಚಿದಂಬರಂಗೆ ಹಿಂದೂ ಭಯೋತ್ಪಾದನೆ ಹೇಳಲು ಹಕ್ಕಿಲ್ಲ. ನಾನು ಧರ್ಮ-ಸಂಸ್ಕೃತಿಯ ರಕ್ಷಕನಾಗಿದ್ದೇನೆ ಮತ್ತು ಸತ್ಯವನ್ನು ಹೇಳುತ್ತೇನೆ. ದೇಶದಲ್ಲಿರುವ ಎಲ್ಲಾ ಭ್ರಷ್ಟಾಚಾರಿಗಳು ಹಾಗೂ ಜಾತ್ಯತೀತರಿಗೆ ಜೈಲಿನಲ್ಲಿ ವ್ಯವಸ್ಥೆ ಮಾಡಬೇಕಾದ ಆವಶ್ಯಕತೆಯಿದೆ ಎಂದು ಸ್ವಾಮಿ ಅವರು ನುಡಿದರು.

ಟಾಪ್ ನ್ಯೂಸ್

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

Untitled-1

ಕಾಪು: ಗೆಳೆಯರೆ ಶಾಲೆಗೆ ಹೊರಡೋಣ ಬನ್ನಿ ಕಾರ್ಯಕ್ರಮಕ್ಕೆ ಶಾಸಕ ಲಾಲಾಜಿ‌ ಮೆಂಡನ್ ಚಾಲನೆ

1-rt

ದಾದಾ ಸಾಹೇಬ್‌ ಫಾಲ್ಕೆ ಜೊತೆ ಸೂಪರ್‌ ಸ್ಟಾರ್‌ ರಜನಿಕಾಂತ್‌ಗೆ ಡಬಲ್ ಸಂಭ್ರಮ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

ದೇಶಕ್ಕೂ ಬಂತು ಎವೈ.4.2; ಇಬ್ಬರು ಯೋಧರು ಸೇರಿ 7 ಮಂದಿಯಲ್ಲಿ ಪತ್ತೆ

ದೇಶಕ್ಕೂ ಬಂತು ಎವೈ.4.2; ಇಬ್ಬರು ಯೋಧರು ಸೇರಿ 7 ಮಂದಿಯಲ್ಲಿ ಪತ್ತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

ಸಿಒಪಿ26 ಶೃಂಗ, ಏನು ಎತ್ತ?

ಸಿಒಪಿ26 ಶೃಂಗ, ಏನು ಎತ್ತ?

ಡ್ರಗ್ಸ್‌ ಕೇಸಿಗೆ ಲಂಚದ ಟ್ವಿಸ್ಟ್‌

ಡ್ರಗ್ಸ್‌ ಕೇಸಿಗೆ ಲಂಚದ ಟ್ವಿಸ್ಟ್‌

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

collision

ಖಾಸಗಿ ಬಸ್‌ ಪಲ್ಟಿ: ಇಬ್ಬರ ಸಾವು

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

Untitled-1

ಕಾಪು: ಗೆಳೆಯರೆ ಶಾಲೆಗೆ ಹೊರಡೋಣ ಬನ್ನಿ ಕಾರ್ಯಕ್ರಮಕ್ಕೆ ಶಾಸಕ ಲಾಲಾಜಿ‌ ಮೆಂಡನ್ ಚಾಲನೆ

1-rt

ದಾದಾ ಸಾಹೇಬ್‌ ಫಾಲ್ಕೆ ಜೊತೆ ಸೂಪರ್‌ ಸ್ಟಾರ್‌ ರಜನಿಕಾಂತ್‌ಗೆ ಡಬಲ್ ಸಂಭ್ರಮ

breast cancer

ಪ್ರತಿ 4 ನಿಮಿಷಕ್ಕೆ ಓರ್ವ ಮಹಿಳೆಯಲ್ಲಿ ಸ್ತನ ಕ್ಯಾನ್ಸರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.