ಹಿಂದೂ ಸಮಾಜ,ಶಬರಿಮಲೆ ರಕ್ಷಣೆಯ ನಿಲುವಳಿ ಮಂಡನೆ

Team Udayavani, Mar 11, 2019, 12:30 AM IST

ssaa.jpg

ಗ್ವಾಲಿಯರ್‌: ಹಿಂದೂ ಸಮಾಜದ ನಂಬಿಕೆಗಳು ಹಾಗೂ ಸಂಪ್ರದಾಯವನ್ನು ರಕ್ಷಿಸುವ ಅಗತ್ಯಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖೀಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಒತ್ತು ನೀಡಲಾಗಿದೆ. 

ಗ್ವಾಲಿಯರ್‌ನಲ್ಲಿ ನಡೆದ ಮೂರು ದಿನಗಳ ಸಭೆಯಲ್ಲಿ ಈ ಮಹತ್ವದ ನಿಲುವಳಿ ಮಂಡಿಸಲಾಗಿದೆ. ಅಷ್ಟೇ ಅಲ್ಲ, ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿರುವ ಸುಪ್ರೀಂಕೋರ್ಟ್‌ ತೀರ್ಪು ದುರದೃಷ್ಟಕರ ಎಂದು ನಿಲುವಳಿಯಲ್ಲಿ ಹೇಳಲಾಗಿದೆ. ಸಂಪ್ರದಾಯವನ್ನು ಗಣನೆಗೆ ತೆಗೆದುಕೊಳ್ಳದೇ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಹಿಂದೂ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಘಾಸಿಗೊಳಿಸುವ ವ್ಯವಸ್ಥಿತ ತಂತ್ರ ನಡೆಯುತ್ತಿದೆ. ಇದನ್ನು ದೇಶದ ಹೊರಗಿನ ಹಿತಾಸಕ್ತಿಗೆ ಅನುಗುಣವಾಗಿ ಮಾಡಲಾಗುತ್ತಿದೆ. ಶಬರಿಮಲೆ ಪ್ರಕರಣ ಈ ನಿಟ್ಟಿನಲ್ಲಿ ಇತ್ತೀಚಿನ ಉದಾಹರಣೆ ಎಂದು ನಿಲುವಳಿಯಲ್ಲಿ ವಿವರಿಸಲಾಗಿದೆ.

ಧಾರ್ಮಿಕ ಮುಖಂಡರ ಅಭಿಪ್ರಾಯಗಳನ್ನು ಹಾಗೂ ಮಹಿಳಾ ಭಕ್ತರ ಭಾವನೆಗಳನ್ನೂ ಈ ತೀರ್ಪು ನೀಡುವಾಗ ಪರಿಗಣಿಸಲಾಗಿಲ್ಲ. ಮರುಪರಿಶೀಲನೆ ಹಾಗೂ ಇತರ ದಾವೆಗಳ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಈ ಎಲ್ಲರ ಅಭಿಪ್ರಾಯ, ಭಾವನೆಗಳನ್ನೂ ಪರಿಗಣಿಸುತ್ತದೆ ಎಂದು ಪ್ರತಿನಿಧಿ ಸಭೆ ಆಶಾಭಾವ ಹೊಂದಿದೆ. ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದಾಗಿ ಭಕ್ತರ ಭಾವನೆಗಳಿಗೆ ಘಾಸಿ ಉಂಟಾಗಿದೆ ಎಂದು ನಿಲುವಳಿಯಲ್ಲಿ ವಿವರಿಸಲಾಗಿದೆ.

ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ: ಇದೇ ವೇಳೆ, ಸಿದ್ಧ ಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಸ್ವಾಮಿ ಜಗದಾತ್ಮಾನಂದ, ಕೇಂದ್ರ ಸಚಿವ ಅನಂತ್‌ಕುಮಾರ್‌, ಸಿ.ಕೆ. ಜಾಫ‌ರ್‌ ಷರೀಫ್, ಅಂಬರೀಷ್‌, ಜಾರ್ಜ್‌ ಫೆರ್ನಾಂಡಿಸ್‌ಸೇರಿ ಇತ್ತೀಚೆಗೆ ಅಗಲಿದ ಪ್ರಮುಖ ಗಣ್ಯರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 1400ಕ್ಕೂ ಹೆಚ್ಚು ಕಾರ್ಯಕರ್ತರು, ಆರೆಸ್ಸೆಸ್‌ನ ಹಲವು ಮುಖಂಡರು ಈ ಸಭೆಗೆ ಹಾಜರಾಗಿದ್ದರು. ಶುಕ್ರವಾರ ಆರಂಭವಾದ 3 ದಿನಗಳ ಸಭೆ ಭಾನುವಾರ ಮುಕ್ತಾಯ ಕಂಡಿದೆ.
 
ಲೋಕಸಭೆ ಚುನಾವಣೆಗೂ ಮುನ್ನ ಈ ಮಹತ್ವದ ಸಭೆ ನಡೆದಿದ್ದು, 2014ರ ಲೋಕಸಭೆ ಚುನಾವಣೆಗಿಂತ ಹೆಚ್ಚಿನ ಮತದಾರರನ್ನು ಬಿಜೆಪಿ ಯತ್ತ ಸೆಳೆಯಲು ಅಗತ್ಯ ಸಹಕಾರವನ್ನು ಸಂಘ ನೀಡಲು ಯೋಜಿಸಿದೆ ಎಂದೂ ಹೇಳಲಾಗಿದೆ.ರವಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೂಡ ಪ್ರತಿನಿಧಿ ಸಭೆಗೆ ಹಾಜರಾಗಿದ್ದರು. ಸಂಘದ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದರು ಎಂದು ಹೇಳಲಾಗಿದೆ. ಆದರೆ ಪ್ರತಿನಿಧಿ ಸಭೆಯು ಯಾವುದೇ ರಾಜಕೀಯ ವಿಚಾರಗಳ ಚರ್ಚೆ ನಡೆಸಿಲ್ಲ ಎಂದು ಆರೆಸ್ಸೆಸ್‌ ಮುಖಂಡರು ಹೇಳಿದ್ದಾರೆ.

ಟಾಪ್ ನ್ಯೂಸ್

71aaa

ಅಲ್ಪಸಂಖ್ಯಾತ ಬಾಂಧವರೇ ಕಾಂಗ್ರೆಸ್ ಗೆ ಒಮ್ಮೆ ಪಾಠ ಕಲಿಸಿ:ಹಾನಗಲ್ ನಲ್ಲಿ ಸಿಎಂ

1-wqq

ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬ ಪತ್ತೆಗಾಗಿ 8 ಪೊಲೀಸ್ ತಂಡ

ಶಾಲಾ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು

ಶಾಲಾ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು

ಎತ್ತಿನಭುಜದ ಬಳಿ ಕಾಡಾನೆಗಳ ಹಿಂಡು : ಕಾಡು ಪ್ರಾಣಿಗಳ ಹಾವಳಿಗೆ ಬೆಚ್ಚಿದ ಗ್ರಾಮಸ್ಥರು

ಎತ್ತಿನಭುಜದ ಬಳಿ ಕಾಡಾನೆಗಳ ಹಿಂಡು : ಕಾಡು ಪ್ರಾಣಿಗಳ ಹಾವಳಿಗೆ ಬೆಚ್ಚಿದ ಗ್ರಾಮಸ್ಥರು

ತಿಪಟೂರು: ಬಳುವನೇರಲು ಗೇಟ್ ಬಳಿ ಬೈಕಿಗೆ ಜೀಪು ಡಿಕ್ಕಿ : ಬೈಕ್ ಸವಾರರು ಸ್ಥಳದಲ್ಲೇ ಸಾವು

ಬಳುವನೇರಲು ಗೇಟ್ ಬಳಿ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು ;ಗ್ರಾಮಸ್ಥರ ಪ್ರತಿಭಟನೆ

730

ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವನು: ಸಚಿವ ವಿ.ಸೋಮಣ್ಣ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸಂಪುಟ ರಾಜಿನಾಮೆಗೆ ಪ್ರತಿಪಕ್ಷಗಳ ಆಗ್ರಹ

ಪೆಗಾಸಸ್ ಗೂಢಚರ್ಯೆ; ಸ್ವತಂತ್ರ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್

ಪೆಗಾಸಸ್ ಗೂಢಚರ್ಯೆ; ಸ್ವತಂತ್ರ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್

ಕೋವಿಡ್ 19 ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಳ; ಬಂಗಾಳ ನಗರದಲ್ಲಿ ಲಾಕ್ ಡೌನ್ ಜಾರಿ

ಕೋವಿಡ್ 19 ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಳ; ಬಂಗಾಳ ನಗರದಲ್ಲಿ ಲಾಕ್ ಡೌನ್ ಜಾರಿ

safty belt

ಬೈಕಲ್ಲಿ ಮಕ್ಕಳ ಬೆಲ್ಟ್ ಕಡ್ಡಾಯ?

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ವ್ಯಕ್ತಿಯಲ್ಲ, ಸರ್ವಶಕ್ತನ ಅವತಾರ: ಸಚಿವ ತಿವಾರಿ

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ವ್ಯಕ್ತಿಯಲ್ಲ, ಸರ್ವಶಕ್ತನ ಅವತಾರ: ಸಚಿವ ತಿವಾರಿ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

16school

ಫಲಿತಾಂಶ ಸುಧಾರಣೆಗೆ ಹೊಸ ಯೋಜನೆ

71aaa

ಅಲ್ಪಸಂಖ್ಯಾತ ಬಾಂಧವರೇ ಕಾಂಗ್ರೆಸ್ ಗೆ ಒಮ್ಮೆ ಪಾಠ ಕಲಿಸಿ:ಹಾನಗಲ್ ನಲ್ಲಿ ಸಿಎಂ

1-wqq

ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬ ಪತ್ತೆಗಾಗಿ 8 ಪೊಲೀಸ್ ತಂಡ

ಶಾಲಾ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು

ಶಾಲಾ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರರು ಸ್ಥಳದಲ್ಲೇ ಸಾವು

ಎತ್ತಿನಭುಜದ ಬಳಿ ಕಾಡಾನೆಗಳ ಹಿಂಡು : ಕಾಡು ಪ್ರಾಣಿಗಳ ಹಾವಳಿಗೆ ಬೆಚ್ಚಿದ ಗ್ರಾಮಸ್ಥರು

ಎತ್ತಿನಭುಜದ ಬಳಿ ಕಾಡಾನೆಗಳ ಹಿಂಡು : ಕಾಡು ಪ್ರಾಣಿಗಳ ಹಾವಳಿಗೆ ಬೆಚ್ಚಿದ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.