ಪಾಕ್ ನ ಪಂಜಾಬ್ ಪ್ರಾಂತ್ಯದಲ್ಲಿನ ಐತಿಹಾಸಿಕ ಗುರು ನಾನಕ್ ಅರಮನೆ ಧ್ವಂಸ

Team Udayavani, May 27, 2019, 6:35 PM IST

ನಾರೋವಾಲ್(ಪಾಕಿಸ್ತಾನ/ಪಂಜಾಬ್):ಹಲವು ಶತಮಾನಗಳಷ್ಟು ಹಳೆಯದಾದ ಐತಿಹಾಸಿಕ ಗುರುನಾನಕ್ ಅರಮನೆಯನ್ನು ಧ್ವಂಸಗೊಳಿಸಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಮಾಧ್ಯಮಗಳ ವರದಿ ಪ್ರಕಾರ, ಸಿಖ್ ಧರ್ಮದವರ ಪವಿತ್ರ ಸ್ಥಳವಾದ ನಾಲ್ಕು ಅಂತಸ್ತುಗಳ ಕಟ್ಟಡವನ್ನು ಕೆಲವು ಪ್ರಭಾವಿ ಸ್ಥಳೀಯರು ಭಾಗಶಃ ಧ್ವಂಸಗೊಳಿಸಿರುವುದಾಗಿ ತಿಳಿಸಿದೆ.

ಐತಿಹಾಸಿಕ ಸಿಖ್ ಅರಮನೆಯನ್ನು ಧ್ವಂಸಗೊಳಿಸಿದ ನಂತರ ಅರಮನೆಯಲ್ಲಿನ ಬೆಲೆಬಾಳುವ ಕಿಟಕಿಗಳು, ಬಾಗಿಲುಗಳು ಮತ್ತು ವೆಂಟಿಲೇಟರ್ ಗಳನ್ನು ಮಾರಾಟ ಮಾಡಿರುವುದಾಗಿ ವರದಿ ವಿವರಿಸಿದೆ.   ಸಿಖ್ಖ್ ರ ಪವಿತ್ರ ಈ ಅರಮನೆಯನ್ನು ಸುಮಾರು ನಾಲ್ಕು ಶತಮಾನಕ್ಕಿಂತಲೂ ಹಿಂದೆಯೇ ನ್ಯೂ ಲಾಹೋರ್ ರಸ್ತೆಯ ಬಥನ್ ವಾಲಾ ಗ್ರಾಮದಲ್ಲಿ ಕಟ್ಟಲಾಗಿತ್ತು.

ಶತಮಾನಗಳಷ್ಟು ಹಳೆಯದಾದ ಈ ಕಟ್ಟಡವನ್ನು ಪ್ಯಾಲೇಸ್ ಆಫ್ ಬಾಬಾ ಗುರು ನಾನಕ್ “ ಎಂದೇ ಕರೆಯಲಾಗುತ್ತಿತ್ತು. ಭಾರತ ಸೇರಿದಂತೆ ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಸಿಖ್ಖ್ ರು ಇಲ್ಲಿಗೆ ಭೇಟಿ ನೀಡುತ್ತಿದ್ದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ