ಉಗ್ರರಿಗೆ ನೆರವು; ಸರ್ಕಾರಿ ಕೆಲಸದಿಂದ ಉಗ್ರ ಸೈಯದ್ ಪುತ್ರ ಅಮಾನತು!

Team Udayavani, Nov 3, 2017, 12:24 PM IST

ಶ್ರೀನಗರ್: ಹಿಜ್ಬುಲ್ ಮುಜಾಹಿದೀನ್ ಉಗ್ರ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಪುತ್ರ ಸೈಯದ್ ಶಾಹಿದ್ ಯೂಸೂಫ್ ನನ್ನು ಜಮ್ಮು ಕಾಶ್ಮೀರ ಸರ್ಕಾರ ಗುರುವಾರ ಕೃಷಿ ಇಲಾಖೆ ಕೆಲಸದಿಂದ ಅಮಾನತು ಮಾಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಉಗ್ರರಿಗೆ ಹಣ ದೇಣಿಗೆ ಸಂಗ್ರಹ ವಿಷಯಕ್ಕೆ ಸಂಬಂಧಿಸಿದಂತೆ ಹಿಜ್ಬುಲ್​ ಮುಜಾಹಿದ್ದೀನ್​ ಮುಖ್ಯಸ್ಥ ಸೈಯ್ಯದ್​ ಸಲಾವುದ್ದೀನ್​ ಮಗ ಶಾಹೀದ್​ ಯೂಸುಫ್​ನನ್ನು ರಾಷ್ಟ್ರೀಯ ತನಿಖಾ ದಳ ಕಳೆದ ತಿಂಗಳು ಬಂಧಿಸಿತ್ತು.

ಯೂಸೂಫ್ ಹಣವನ್ನು ಪಡೆದಿರುವುದು ಪತ್ತೆಯಾಗಿತ್ತು, ಅಲ್ಲದೇ ಅಂತಾರಾಷ್ಟ್ರೀಯ ಹವಾಲಾ ಜಾಲದ ಮೂಲಕ ಹಣವನ್ನು ಸಂಗ್ರಹಿಸಿ, ಆ ಹಣವನ್ನು ಸೌದಿ ಅರೇಬಿಯಾ ಮೂಲದ ಹಿಜ್ಬುಲ್ ಮುಜಾಹಿದೀನ್ ಸದಸ್ಯ ಐಜಾಜ್ ಅಹ್ಮದ್ ಭಟ್ ಗೆ ಹಣವನ್ನು ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಬಟ್ ಹಣಕಾಸು ನೆರವು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಉಗ್ರ ಬಟ್ ಭಾರತದ ವಾಂಟೆಡ್ ಲಿಸ್ಟ್ ನಲ್ಲಿದ್ದಾನೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ