ಶಂಕಿತ ಗೋ ರಕ್ಷಕರ ವಿರುದ್ಧ ಕಠಿನ ಕ್ರಮ: ಮ.ಪ್ರ. ಸರಕಾರಕ್ಕೆ ಮೆಹಬೂಬ ಆಗ್ರಹ

Team Udayavani, May 25, 2019, 4:05 PM IST

ಶ್ರೀನಗರ : ಮಧ್ಯ ಪ್ರದೇಶ ಸರಕಾರ ಶಂಕಿತ ಗೋ ರಕ್ಷಕರ ವಿರುದ್ದ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಆಗ್ರಹಿಸಿದ್ದಾರೆ.

ಮಧ್ಯಪ್ರದೇಶದ ಸಿಯೋನಿ ಯಲ್ಲಿ ಶಂಕಿತ ಗೋ ರಕ್ಷಕರು ಇಬ್ಬರು ವ್ಯಕ್ತಿಗಳಿಗೆ ದೊಣ್ಣೆಯಿಂದ ಅಮಾನುಷವಾಗಿ ಹೊಡೆಯುತ್ತಿರುವ ವಿಡಿಯೋ ಚಿತ್ರಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಸುತ್ತಾಡುತ್ತಿರುವುದನ್ನು ಆತಂಕದಿಂದ ಗಮನಿಸಿರುವ ಮೆಹಬೂಬ, ಶಂಕಿತ ಗೋ ರಕ್ಷಕರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಮಧ್ಯ ಪ್ರದೇಶ ಸರಕಾರವನ್ನು ಟ್ವಿಟರ್‌ ಮೂಲಕ ಒತ್ತಾಯಿಸಿದ್ದಾರೆ.

ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಐವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ