ಗುರ್ಮೀತ್ನ ಡೇರಾ ಸಚ್ಚಾ ಸೌದಾ ಆಸ್ತಿ ಮೌಲ್ಯ 1,600 ಕೋಟಿ ರೂ.
Team Udayavani, Sep 28, 2017, 7:10 AM IST
ಚಂಡೀಗಢ: ಅತ್ಯಾಚಾರ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಕಂಬಿ ಎಣಿಸುತ್ತಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್, ಕೇವಲ ಸ್ವಯಂ ಘೋಷಿತ ದೇವಮಾನವನಲ್ಲ, ಆತ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಆಗರ್ಭ ಶ್ರೀಮಂತ!
ಸ್ವತಃ ಹರ್ಯಾಣ ಸರಕಾರವೇ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಸಂಬಂಧ ಬುಧವಾರ ಹರ್ಯಾಣ- ಪಂಜಾಬ್ ಹೈಕೋರ್ಟ್ಗೆ ಹರ್ಯಾಣ ಸರಕಾರ ವರದಿ ಸಲ್ಲಿಸಿದೆ. ಡೇರಾ ಸಚ್ಚಾ ಸೌದಾದ ಒಟ್ಟು ಮೌಲ್ಯ 1,453 ಕೋಟಿ ರೂ. ಎಂದು ಹೇಳಿದೆ. ಅಲ್ಲದೆ ಈಗ ತಾನು ನೀಡಿರುವುದು ಸಿರ್ಸಾದಲ್ಲಿರುವ ಡೇರಾ ಒಂದರ ಮೌಲ್ಯವಾಗಿದ್ದು, ಗುರ್ಮೀತ್ ರಾಮ್ ರಹೀಮ್ ಸಿಂಗ್ ಒಡೆತನದ ಸಂಸ್ಥೆಯು ಹರ್ಯಾಣ ರಾಜ್ಯದಾದ್ಯಂತ ಒಟ್ಟು 1600 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದೆ ಎಂದು ಸರಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಹಾಗೇ ಹರ್ಯಾಣ ರಾಜ್ಯದ ಹೊರಗೆ ಡೇರಾ ಹೊಂದಿರುವ ಆಸ್ತಿಗಳ ಮೌಲ್ಯ ಎಷ್ಟು ಎಂಬುದನ್ನು ಸರಕಾರ ತನ್ನ ವರದಿಯಲ್ಲಿ ಉಲ್ಲೇಖೀಸಿಲ್ಲ. ಪ್ರಸ್ತುತ ಸರಕಾರ ಸಲ್ಲಿಸಿರುವ ವರದಿಯಲ್ಲಿ ಹರ್ಯಾಣದಲ್ಲಿ ಚಾಲ್ತಿಯಲ್ಲಿರುವ ಸರ್ಕಾರಿ ಬೆಲೆಗೆ ಅನುಗುಣವಾಗಿ ಆಸ್ತಿ ಮೌಲ್ಯವನ್ನು ಅಂದಾಜು ಮಾಡಲಾಗಿದ್ದು, ವಾಸ್ತವ ಬೆಲೆಯನ್ನು ಲೆಕ್ಕ ಹಾಕಿದರೆ ಡೇರಾದ ಆಸ್ತಿ ಮೌಲ್ಯ 4 ಸಾವಿರ ಕೋಟಿ ಅಥವಾ ಈಗಿನ ಮೌಲ್ಯಕ್ಕಿಂತ ಒಂದೂವರೆ ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಗುರ್ಮೀತ್ ವಿರುದ್ಧ ತೀರ್ಪು ಬಂದ ನಂತರ ಉಂಟಾದ ಗಲಭೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಅನುಭವಿಸಿದವರಿಗೆ ಡೇರಾದ ಹಣದಲ್ಲೇ ಪರಿಹಾರ ಒದಗಿ ಸುವ ಕುರಿತ ಸಾಧ್ಯತೆಗಳನ್ನು ಪರಿಶೀಲಿಸು ವಂತೆ ನ್ಯಾಯಾಲಯ ಸೂಚಿಸಿದ್ದ ಹಿನ್ನೆಲೆಯಲ್ಲಿ ಈ ವರದಿ ಸಲ್ಲಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ