11 ಮತ್ತು 12ನೇ ತರಗತಿ: ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್
Team Udayavani, Jun 4, 2020, 9:15 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್, 11 ಮತ್ತು 12ನೇ ತರಗತಿಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದಾರೆ. ಈ ಕ್ಯಾಲೆಂಡರನ್ನು ಎನ್ಸಿಇಆರ್ಟಿ ಅಭಿವೃದ್ಧಿಪಡಿಸಿದೆ.
“ವಿದ್ಯಾರ್ಥಿಗಳಿಗೆ ಮನೆಯಲ್ಲಿದ್ದುಕೊಂಡೇ ವಿವಿಧ ತಾಂತ್ರಿಕ ಪರಿಕರಗಳು, ಸಾಮಾಜಿಕ ಜಾಲತಾಣಗಳ ಮೂಲಕ ಶಿಕ್ಷಣ ಪಡೆಯಲು ಕ್ಯಾಲೆಂಡರ್ ನೆರವಾಗಲಿದೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಇದರಲ್ಲಿ ಹಲವು ನಿರ್ದೇಶನಗಳನ್ನು ನೀಡಲಾಗಿದೆ’ ಎಂದು ಸಚಿವರು ಟ್ವಿಟ್ಟರಿನಲ್ಲಿ ಹೇಳಿದ್ದಾರೆ. ದಿವ್ಯಾಂಗ ವಿದ್ಯಾರ್ಥಿಗಳಿಗೆ ಆಡಿಯೊ ಬುಕ್, ರೇಡಿಯೊ ಕಾರ್ಯಕ್ರಮ, ವಿಡಿಯೊ ಪ್ರೋಗ್ರಾಂ ಇತ್ಯಾದಿಗಳ ಲಿಂಕ್ ಅನ್ನು ಪಠ್ಯಕ್ರಮದಲ್ಲಿ ಸೇರಿಸಲಾಗುತ್ತದೆ. “ಕೊರೊನಾದ ಈ ಸಂದಿಗ್ಧತೆಯಲ್ಲಿ ಆನ್ಲೈನ್ ಶಿಕ್ಷಣ ಮೂಲಕವೇ ಧನಾತ್ಮಕ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಹೊಸ ರೂಪದ ಈ ಶಿಕ್ಷಣ ಕ್ರಮಕ್ಕೆ ಕ್ಯಾಲೆಂಡರ್ ಎಲ್ಲ ರೀತಿಯಲ್ಲೂ ಮಾರ್ಗದರ್ಶನ ನೀಡಲಿದೆ’ ಎಂದು ಸಚಿವಾಲಯ ಹೇಳಿದೆ.
“ಪ್ರತಿ ವಿಷಯಗಳ ವಾರದ ಯೋಜನೆಗಳೂ ಕ್ಯಾಲೆಂಡರ್ ಆಧರಿಸಿಯೇ ನಡೆಯುತ್ತವೆ. ಡಿಟಿಎಚ್ ಚಾನೆಲ್ಗಳ ಮೂಲ ಕವೂ ಕ್ಯಾಲೆಂಡರ್ನ ಮಾಹಿತಿಗಳು ಪ್ರಸಾರಗೊಳ್ಳವೆ. ಎಸ್ಸಿಇ ಆರ್ಟಿ, ಕೇಂದ್ರೀಯ ವಿದ್ಯಾಲಯ ಸಂಘಟನ್, ನವೋದಯ ವಿದ್ಯಾಲಯ ಸಮಿತಿ, ಸಿಬಿಎಸ್ಇ, ಎಸ್ಎಸ್ಇಬಿಗಳ ಜತೆಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಶೈಕ್ಷಣಿಕ ಕ್ರಮಗಳ ಅನುಷ್ಠಾನದ ಕುರಿತು ಚರ್ಚಿಸಲಾಗುವುದು’ ಎಂದು ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ