ಅತ್ಯಾಚಾರಿಗಳ ಗಲ್ಲಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ: ಸ್ವಾತಿ ಮಲಿವಾಲ್ ಆಸ್ಪತ್ರೆಗೆ ದಾಖಲು

Team Udayavani, Dec 15, 2019, 8:49 AM IST

ಹೊಸದಿಲ್ಲಿ: ಅತ್ಯಾಚಾರ ಅಪರಾಧಿಗಳಿಗೆ ಆರು ತಿಂಗಳ ಒಳಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ವಾತಿ ಮಲಿವಾಲ್ ಕಳೆದ ಹತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಂದು ಮುಂಜಾನೆ ಸ್ವಾತಿ ಮಲಿವಾಲ್ ಪ್ರಜ್ಞೆ ತಪ್ಪಿ ಬಿದ್ದ ಕಾರಣ ಅವರನ್ನು ಲೋಕ ನಾಯಕ್ ಜಯ ಪ್ರಕಾಶ್ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆಯಾಗಿರುವ ಸ್ವಾತಿ ಮಲಿವಾಲ್ ಶನಿವಾರ ಪ್ರಧಾನಿಗೆ ಪತ್ರ ಬರೆದಿದ್ದು, ಆಂಧ್ರ ಪ್ರದೇಶ ರಾಜ್ಯದಲ್ಲಿ ಜಾರಿಗೆ ತಂದ ‘ ದಿಶಾ’ ಕಾನೂನು ದೇಶದಾದ್ಯಂತ ಜಾರಿಗೆ ಬರುವ ತನಕ ಉಪವಾಸ ಸತ್ಯಾಗ್ರಹ ಕೊನೆಗೊಳಿಸುವುದಿಲ್ಲ ಎಂದಿದ್ದಾರೆ.

ಆಂಧ್ರ ಪ್ರದೇಶ ದಿಶಾ ಕ್ರಿಮಿನಲ್ ಕಾನೂನು ಪ್ರಕಾರ ಅತ್ಯಾಚಾರ ಮತ್ತು ಮಕ್ಕಳ ದೌರ್ಜನ್ಯ ಪ್ರಕರಣದಲ್ಲಿ 21 ದಿನದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಮೇಲ್ಮನವಿ ಸಲ್ಲಿಸಿದರೆ ಅದು ಆರು ತಿಂಗಳೊಳಗೆ ವಿಚಾರಣೆ ಅಂತ್ಯವಾಗಬೇಕು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ