ಕಾರ್ಡಿನಲ್ ಹುದ್ದೆಗೇರಿದ ಮೊದಲ ದಲಿತ ಡಾ.ಪೂಲಾ ಆಂಥೋನಿ!
Team Udayavani, Aug 29, 2022, 6:50 AM IST
ಹೈದರಾಬಾದ್: ಹೈದರಾಬಾದ್ನ ಆರ್ಚ್ಬಿಷಪ್ ಡಾ.ಪೂಲಾ ಆಂಥೋನಿ ಶನಿವಾರ ಅಧಿಕೃತವಾಗಿ ಕ್ಯಾಥೋಲಿಕ್ ಚರ್ಚ್ನ ಕಾರ್ಡಿನಲ್ ಆಗಿ ಆಯ್ಕೆಯಾದರು. ಇದರೊಂದಿಗೆ ಈ ಶ್ರೇಷ್ಠ ಸ್ಥಾನಕ್ಕೇರಿದ ಮೊದಲ ದಲಿತ ಎನ್ನುವ ಗೌರವ ಪಡೆದರು.
ಅವರನ್ನು ಸ್ವತಃ ಕ್ರೈಸ್ತರ ಪರಮಗುರು, ಪೋಪ್ ಫ್ರಾನ್ಸಿಸ್ ಅವರೇ ಈ ಸ್ಥಾನಕ್ಕೇರಿಸಿದರು. ತಲೆಗೆ ಕೆಂಪು ತುರಾಯಿ (ಬಿರೆಟ್ಟಾ), ಕೈಗೆ ಬಳೆ ತೊಡಿಸಿದರು. ಇಟಲಿಯ ವ್ಯಾಟಿಕನ್ನಲ್ಲಿರುವ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಶನಿವಾರ ರಾತ್ರಿ 7.30ಕ್ಕೆ ಈ ಕಾರ್ಯಕ್ರಮ ನಡೆಯಿತು.
ಆಂಥೋನಿಯವರೊಂದಿಗೆ ಗೋವಾದ ಫಿಲಿಪ್ ನೆರಿ ಫೆರಾವೊ ಕೂಡ ಕಾರ್ಡಿನಲ್ ಸ್ಥಾನಕ್ಕೇರಿದರು. ವ್ಯಾಟಿಕನ್ನಿಂದ ನೇಮಕಗೊಂಡಿರುವ 20 ಕಾರ್ಡಿನಲ್ಗಳ ಪೈಕಿ ಸದ್ಯ 6 ಮಂದಿ ಭಾರತೀಯರೇ ಆಗಿದ್ದಾರೆ ಎನ್ನುವುದು ಮಹತ್ವದ ಸಂಗತಿ. ಕ್ರೈಸ್ತರಲ್ಲಿ ಕಾರ್ಡಿನಲ್ಗಳಿಗೆ ಬಹಳ ಉನ್ನತ ಸ್ಥಾನವಿದೆ.
ಕ್ರೈಸ್ತ ಮತಾಧಿಕಾರಿಗಳಾಗಿರುವ ಇವರಿಗೆ ಮುಂದಿನ ಪೋಪ್ ಅನ್ನು ಆಯ್ಕೆ ಮಾಡುವ ಅಧಿಕಾರವಿರುತ್ತದೆ. ಸದ್ಯದ ಪೋಪ್ ನಿವೃತ್ತರಾದ ಮೇಲೆ ಇವರೆಲ್ಲ ಸಭೆ ಸೇರಿ ಮುಂದಿನ ಪೋಪ್ ಅನ್ನು ಆಯ್ಕೆ ಮಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು