ತನಗೆಂದು ತಂದ ಊಟವನ್ನು ಭಿಕ್ಷೆ ಬೇಡುತ್ತಿದ್ದ ಮಕ್ಕಳಿಗೆ ನೀಡಿ ಮಾನವೀಯತೆ ಮೆರೆದ ಕಾನ್ಸ್ಟೇಬಲ್

ಕಾನ್‌ ಸ್ಟೆಬಲ್ ಮಾನವೀಯತೆಗೆ ಭಾರಿ ಮೆಚ್ಚುಗೆ

ಶ್ರೀರಾಜ್ ವಕ್ವಾಡಿ, May 18, 2021, 8:12 PM IST

Hyderabad: Police constable feeds child beggars from his own tiffin box

ಹೈದರಾಬಾದ್ : ಲಾಕ್ ಡೌನ್ ಸಂದರ್ಭದಲ್ಲಿ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ಹೈದರಾಬಾದ್ ಪೊಲೀಸ್ ಕಾನ್‌ ಸ್ಟೆಬಲ್ ಎಸ್.ಮಹೇಶ್ ಕುಮಾರ್ ಅವರು ತಮ್ಮ ಬುತ್ತಿಯಲ್ಲಿದ್ದ ಊಟವನ್ನು ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಭಾರಿ ಮೆಚ್ಚುಗೆಗೆ ಕಾರಣವಾಗಿದೆ.

ಈ ಮಾನವೀಯ ಕೆಲಸಕ್ಕೆ ಕಾನ್ ಸ್ಟೇಬಲ್ ಮಹೇಶ್ ಕುಮಾರ್  ಅವರಿಗೆ ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಅವರು ಕೂಡ ಭೇಷ್ ಅಂದಿದ್ದಾರೆ.

ಇದನ್ನೂ ಓದಿ : ಬೆಡ್‌ ಸಿಗದೆ ಪರೆದಾಡಿದ ಸೋಂಕಿತನಿಗೆ ಆ್ಯಂಬುಲೆನ್ಸ್‌ನಲ್ಲೇ ಆಕ್ಸಿಜನ್‌ ವ್ಯವಸ್ಥೆ

ನಿನ್ನೆ(ಸೋಮವಾರ, ಮೇ 17) ರಾತ್ರಿ 8 ಗಂಟೆ ಸುಮಾರಿಗೆ ವಿ.ವಿ.ಐ.ಪಿ ವಲಯದ ಸೋಮಜಿಗುಡ ರಸ್ತೆಯಲ್ಲಿ ಎಸ್.ಮಹೇಶ್ ಕುಮಾರ್ ಕರ್ತವ್ಯದಲ್ಲಿದ್ದಾಗ, ನಾಲ್ಕು  ಐದು ವರ್ಷ ವಯಸ್ಸಿನ ಇಬ್ಬರು ಸಣ್ಣ ಹುಡುಗಿಯರು ಮತ್ತು ಅವರ ತಂದೆಯೊಂದಿಗೆ ಯಶೋದಾ ಆಸ್ಪತ್ರೆಯ ಬಳಿ ಆಹಾರಕ್ಕಾಗಿ ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿ ತಮ್ಮ ಊಟಕ್ಕೆಂದು  ತಂದಿದ್ದ  ಆಹಾರವನ್ನು ಆ ಹಸಿದ ಮಕ್ಕಳಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಹೇಶ್, ನಾನು ಕರ್ತವ್ಯದಲ್ಲಿದ್ದೆ, ಯಶೋದಾ ಆಸ್ಪತ್ರೆಯ ಬಳಿ ಈ ಇಬ್ಬರು ಹೆಣ್ಣು ಮಕ್ಕಳ ಆಹಾರಕ್ಕಾಗಿ ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿದೆ. ಕೆಲವರು ಅವರಿಗೆ ಹಣ ನೀಡಿದರು. ಒಬ್ಬರು 100 ರೂಪಾಯಿಯನ್ನು ಕೊಟ್ಟು ಹೋದರು. ಆದರೇ,ಆ ಸಣ್ಣ ಮಕ್ಕಳಿಗೆ ಹೊಟ್ಟೆ ಹಸಿದಿತ್ತು, ತಿನ್ನಲು ಆಹಾರ ಬೇಕಿತ್ತು. ಲಾಕ್ ಡೌನ್ ಇದ್ದ ಕಾರಣ ಎಲ್ಲಾ ಅಂಗಡಿಗಳು ಮುಚ್ಚಿದ್ದವು. ಅವರಿಗೆ ಎಲ್ಲಿಯೂ ಹಸಿವು ತಣಿಸಲು ಆಹಾರ ಸಿಕ್ಕಿರಲಿಲ್ಲ. ನನಗೆ  ಹಸಿವಿನಿಂದಿದ್ದ ಆ ಮಕ್ಕಳನ್ನು ನೋಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ನನ್ನ ಬುತ್ತಿಯಲ್ಲಿದ್ದ ಆಹಾರವನ್ನು  ನೀಡಿದೆ. ಅವರು ಆಹಾರವನ್ನು ನೋಡಿದ ತಕ್ಷಣ ಖುಷಿ ಪಟ್ಟಿದ್ದು, ಅದನ್ನು ತಿನ್ನುವುದರಲ್ಲಿ ಆ ಮಕ್ಕಳು ಸಂತೋಷ ಪಟ್ಟಿದ್ದು ನನಗೆ ಮನಸ್ಸು ತುಂಬಿ ಬಂತು ಎಂದರು.

ಎಸ್. ಮಹೇಶ್ ಕುಮಾರ್ ಪಂಜಗುಟ್ಟಾ ಸಂಚಾರ ಪೊಲೀಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ಮಧ್ಯಾಹ್ನ 2.00 ರಿಂದ ರಾತ್ರಿ 11.00 ರವರೆಗೆ ಅವರ ಕರ್ತವ್ಯವಾಗಿತ್ತು. “ನನ್ನ ಕರ್ತವ್ಯ ಮುಗಿಸಿ ಮನೆಗೆ ಹೋಗುವಾಗ ತಡವಾಗುವ ಕಾರಣದಿಂದ ನಾನು ರಾತ್ರಿ ಊಟಕ್ಕೆಂದು ಮನೆಯಿಂದ ಬುತ್ತಿ ತಂದಿದ್ದೆ. ನಿನ್ನೆ ನಾನು ಈ ಮಕ್ಕಳಿಗೆ ಆಹಾರವನ್ನು ನೀಡಿದ್ದೇನೆ ಎಂದು ನನ್ನ ಹೆಂಡತಿಗೆ ಹೇಳಿದಾಗ, ಅವಳು ತುಂಬಾ ಸಂತೋಷಗೊಂಡಳು ಮತ್ತು ನನಗೆ ತಡ ರಾತ್ರಿ 11.45 ರ ಸುಮಾರಿಗೆ ನಾನು ಮನೆಗೆ ತಲುಪುತ್ತಿದ್ದಂತೆ ವಿಶೇಷ ಅಡುಗೆ ಬಡಿಸಿ ಖುಷಿ ಪಟ್ಟಳು ಎನ್ನುತ್ತಾರೆ ಎಸ್.ಮಹೇಶ್ ಕುಮಾರ್.

ಬುತ್ತಿಯಲ್ಲಿ ಏನಿತ್ತು ಎಂದು ಕೇಳಿದ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಮಹೇಶ್, “ಅನ್ನ, ನುಗ್ಗೆಕಾಯಿ ಸಾಂಬಾರ್ ಮತ್ತು ಚಿಕನ್ ಫ್ರೈ. ಆ ಮಕ್ಕಳು ಅದನ್ನು ಇಷ್ಟಪಟ್ಟರು” ಎಂದು ಸಂತೋಷದಿಂದ ಹೇಳಿದರು.

ಇನ್ನು, ಎಸ್.ಮಹೇಶ್ ಕುಮಾರ್ ಅವರ ಈ ಮಾನವೀಯ ಕಳಕಳಿಯನ್ನು ಮೆಚ್ಚಿದ ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದ್ದಾರೆ.

ಇದನ್ನೂ ಓದಿ : ಐ.ಎಸ್.ಪಿ.ಆರ್.ಎಲ್ ಖಾಸಗೀಕರಣ ವಿರೋಧಿಸಿ ಜನಾಂದೋಲನ‌ ಯಾತ್ರೆ : ವಿನಯ್ ಕುಮಾರ್ ಸೊರಕೆ

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

1-asasa

Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.