Moradabad ರಕ್ತದಾನಿಯಂತೆ ಪೋಸ್ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬಿಜೆಪಿ ಮೇಯರ್!
ಪ್ರಧಾನಿ ಮೋದಿ ಜನ್ಮ ದಿನದಂದು ಘಟನೆ; ವಿಡಿಯೋ ವೈರಲ್
Team Udayavani, Sep 20, 2024, 3:49 PM IST
ಮೊರಾದಾಬಾದ್ (ಉತ್ತರಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ರಕ್ತದಾನಿಯಂತೆ ಪೋಸ್ ನೀಡಿದ ಮೊರಾದಾಬಾದ್ ನ ಮೇಯರ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಟೀಕೆಯೂ ವ್ಯಕ್ತವಾಗಿದೆ.
ಮೊರಾದಾಬಾದ್‌ನಲ್ಲಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ( ಸೆಪ್ಟೆಂಬರ್17) ಮೇಯರ್ ವಿನೋದ್ ಅಗರ್ವಾಲ್ ಅವರು ಭಾಗವಹಿಸಿದ್ದರು. ರಕ್ತದಾನ ಮಾಡಲೆಂದು ಬೆಡ್ ಮೇಲೆ ಮಲಗಿದ್ದು ವೈದ್ಯರು ರಕ್ತ ತೆಗೆಯಲು ಸೂಜಿಯನ್ನು ಹಾಕಲು ಮುಂದಾಗುತ್ತಿದ್ದಂತೆಯೇ ಕೊನೆಯ ಕ್ಷಣದಲ್ಲಿ ಮೇಲಕ್ಕೆದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಒಂದೇ ಒಂದು ಹನಿ ರಕ್ತವನ್ನೂ ನೀಡದೆ ತೆರಳಿರುವ ಬಗ್ಗೆ ಟೀಕೆ ವ್ಯಕ್ತವಾಗಿದೆ.
ये मुरादाबाद BJP मेयर विनोद अग्रवाल हैं PM के जन्मदिन पर रक्तदान करने गए थे। खून देने के लिए मेयर साहब बेड पर तो लेटे लेकिन जैसे ही डॉक्टर ने खून निकालने का प्रयास किया, नेता जी हाथ खड़े कर दिये। बोले हम सिर्फ़ फ़ोटो खिंचाने आये थे। मोदी जी इन्हें दिल माफ नहीं करेंगे #Moradabad pic.twitter.com/RISqTfMIuU
— Arun (आज़ाद) Chahal 🇮🇳 (@arunchahalitv) September 20, 2024
ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತ್ವರಿತವಾಗಿ ಹರಿದಾಡಿದೆ. ಅನೇಕರು ಮೇಯರ್ ಅವರನ್ನು ಅಪಹಾಸ್ಯ ಗುರಿ ಮಾಡಿದ್ದಾರೆ. ಕೇವಲ ಫೋಟೋ ಮತ್ತು ವಿಡಿಯೋ ಗಾಗಿ ಅಮೂಲ್ಯವಾದ ರಕ್ತದಾನವನ್ನು ಬಳಸಿಕೊಂಡದ್ದಕ್ಕಾಗಿ ಟೀಕಾ ಪ್ರಹಾರ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ
J-K Election: ಚುನಾವಣೆ ಫಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್ ಆಕ್ಷೇಪ
Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ
Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Ullal: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ
Blind Chess World C’ships: ವಿಶ್ವ ಅಂಧರ ಚೆಸ್: ಪ್ರಶಸ್ತಿ ಸನಿಹಕ್ಕೆ ಲುಬೋವ್
Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ
Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.