ನಾನು ಈಗಲೂ ಮುಸ್ಲಿಂ: ನುಸ್ರತ್‌

Team Udayavani, Jul 1, 2019, 5:39 AM IST

ಹೊಸದಿಲ್ಲಿ: ನಾನು ಈಗಲೂ ಮುಸ್ಲಿಂ ಆಗಿದ್ದೇನೆ. ನಾನು ಧರಿಸಿರುವುದರ ಬಗ್ಗೆ ಯಾರೂ ಮಾತನಾಡುವ ಅಗತ್ಯವಿಲ್ಲ. ನಂಬಿಕೆ ಎಂಬುದು ಉಡುಪಿನಲ್ಲಿ ಇಲ್ಲ ಎಂದು ಪಶ್ಚಿಮ ಬಂಗಾಲದ ಬಸಿರ್‌ಹಾತ್‌ನ ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌ ಹೇಳಿದ್ದಾರೆ.

ಸಂಸತ್ತಿಗೆ ಸಿಂಧೂರ ಹಾಗೂ ಮಂಗಳಸೂತ್ರ ಧರಿಸಿ ತೆರಳಿದ್ದಕ್ಕೆ ದೇವ್‌ಬಂದ್‌ ಮೌಲ್ವಿಗಳು ನುಸ್ರತ್‌ ವಿರುದ್ಧ ಫ‌ತ್ವಾ ಹೊರಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನುಸ್ರತ್‌ ಈ ಹೇಳಿಕೆ ನೀಡಿದ್ದು, ಯಾವುದೇ ಧರ್ಮದ ಮೂಲ ಭೂತ ವಾದಿಗಳ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದರೆ ಸಮಾಜದಲ್ಲಿ ಇನ್ನಷ್ಟು ದ್ವೇಷ ಭಾವನೆ ಉಂಟಾಗುತ್ತದೆ.

ಇದಕ್ಕೆ ಇತಿಹಾಸವೇ ಸಾಕ್ಷಿ ಎಂದಿದ್ದಾರೆ. ಕಳೆದ ಕೆಲವೇ ದಿನಗಳ ಹಿಂದೆ ಉದ್ಯಮಿ ನಿಖೀಲ್‌ ಜೈನ್‌ ಅವರನ್ನು ಟರ್ಕಿಯಲ್ಲಿ ನುಸ್ರತ್‌ ವಿವಾಹವಾಗಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ