ನಾನು ರಿಮೋಟ್ ಕಂಟ್ರೋಲ್ಡ್ ಪ್ರಧಾನಿ ಅಲ್ಲ : ಮೋದಿಗೆ ಡಾ. ಸಿಂಗ್
Team Udayavani, Nov 21, 2018, 7:41 PM IST
ಹೊಸದಿಲ್ಲಿ : ನಾನು ರಿಮೋಟ್ ಕಂಟ್ರೋಲ್ಡ್ ಪ್ರಧಾನಿ ಅಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದು ಬುಧವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರದೇಶದ ಇಂದೋರ್ ಜಿಲ್ಲೆಯ ರೇವಾ ದಲ್ಲಿ ಮಾಡಿದ ಚುನಾವಣಾ ಪ್ರಚಾರ ಭಾಷಣದಲ್ಲಿ “ಮನಮೋಹನ್ ಸಿಂಗ್ ಸರಕಾರ ಸೋನಿಯಾ ಗಾಂಧಿಯವರ ಕೈಯಲ್ಲಿ ರಿಮೋಟ್ ಕಂಟ್ರೋಲ್ಡ್ ಆಗಿತ್ತು’ ಎಂದು ಹೇಳಿರುವುದಕ್ಕೆ ಉತ್ತರವಾಗಿ ಮನಮೋಹನ್ ಸಿಂಗ್ ಈ ಮಾತನ್ನು ಹೇಳಿದ್ದಾರೆ.
ಡಾ. ಸಿಂಗ್ ತಮ್ಮ ಈ ಮಾತಿಗೆ ಸಮರ್ಥನೆಯಾಗಿ, “ಕಾಂಗ್ರೆಸ್ ಸರಕಾರ ಮತ್ತು ಪಕ್ಷ ಪರಸ್ಪರ ಹೊಂದಾಣಿಕೆ ಮತ್ತು ಸಹಕಾರವನ್ನು ಹೊಂದಿದ್ದವು. ಹಾಗೆಯೇ ಸರಕಾರ ಮತ್ತು ಪಕ್ಷದ ನಡುವೆ ಯಾವುದೇ ಭಿನ್ನಾಭಿಪ್ರಾಯ, ಅಸಮಾದಾನಗಳಿರಲಿಲ್ಲ; ಆದುದರಿಂದಲೇ ನನ್ನ ಸರಕಾರ ಯಶಸ್ವಿಯಾಗಿತ್ತು’ ಎಂದು ಹೇಳಿದರು.
ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಕಟು ಟೀಕೆ ಮಾಡಿದ ಮನಮೋಹನ್ ಸಿಂಗ್ ಅವರು, “ರಫೇಲ್ ಫೈಟರ್ ಜೆಟ್ ಖರೀದಿ ವ್ಯವಹಾರದಲ್ಲಿ ಭ್ರಷ್ಟಾಚಾರ ಅಡಗಿರುವಂತಿದೆ’ ಎಂದು ದೂರಿದರು.