ಐಎಎಫ್ 2 ಯೋಜನೆ ಅಂತಿಮ
ಸಿ-295 ವಿಮಾನಗಳ ತಯಾರಿಕೆ ಯೋಜನೆ ಶೀಘ್ರ ಅನುಷ್ಠಾನ
Team Udayavani, Jul 9, 2019, 5:55 AM IST
ಹೊಸದಿಲ್ಲಿ: “ಮೇಕ್ ಇನ್ ಇಂಡಿಯಾ’ ದಡಿ ವಾಯುಪಡೆಗಾಗಿ (ಐಎಎಫ್) ಅನುಷ್ಠಾನಗೊಳ್ಳಬೇಕಿರುವ 1.50 ಲಕ್ಷ ಕೋಟಿ ರೂ.ಮೌಲ್ಯದ ಎರಡು ಮಹತ್ವದ ಯೋಜನೆಗಳಿಗೆ ಐಎಎಫ್ ಈಗ ಅಂತಿಮ ಸ್ಪರ್ಶ ನೀಡಲಾರಂಭಿಸಿದೆ.
ಇದರಲ್ಲೊಂದು, ಜಗತ್ತಿನಲ್ಲೇ ಅತಿ ದೊಡ್ಡ ರಕ್ಷಣಾ ಖರೀದಿ ಎಂದೆನಿಸಿರುವ 114 ಯುದ್ಧ ವಿಮಾನಗಳ ತಯಾರಿಕೆ. ಮತ್ತೂಂದು, ಟಾಟಾ-ಏರ್ ಬಸ್ ಕಂಪೆನಿಗಳ ಸಹಯೋಗದಲ್ಲಿ ಸಿದ್ಧಗೊಳ್ಳಲಿರುವ ಸಿ-295 ಮಾದರಿಯ ಮಧ್ಯಮ ಗಾತ್ರದ ಸರಕು ಸಾಗಣೆಯ 56 ವಿಮಾನಗಳ ತಯಾರಿಕೆ.
ಇವುಗಳಲ್ಲಿ, ಟಾಟಾ-ಏರ್ ಬಸ್ ಸಹ ಯೋ ಗದಲ್ಲಿ ಅಂದಾಜು 11,930 ಕೋಟಿ ರೂ. ವೆಚ್ಚದಲ್ಲಿ ಒಟ್ಟು 56 “ಸಿ-295′ ಮಾದರಿ ವಿಮಾನಗಳ ತಯಾರಿಕೆ ಈ ವರ್ಷದಲ್ಲೇ ಶುರುವಾಗಲಿದೆ ಎಂದು “ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಇವು, 1960ರಿಂದ ಐಎಎಫ್ನಲ್ಲಿ ಬಳಕೆಯಲ್ಲಿರುವ ಅವ್ರೊ ಸರಕು ಸಾಗಣೆ ವಿಮಾನಗಳಿಗೆ ವಿಶ್ರಾಂತಿ ನೀಡಲಿವೆ.
ಆದರೆ, 114 ಯುದ್ಧ ವಿಮಾನಗಳ ತಯಾರಿಕೆ ಹಾಗೂ ಐಎಎಫ್ಗೆ ಅವುಗಳ ಸೇರ್ಪಡೆಗೆ ಕನಿಷ್ಠ 5 ವರ್ಷವಾದರೂ ಬೇಕು ಎಂದು ಹೇಳಲಾಗಿದೆ. ಈ ವಿಮಾನಗಳ ತಯಾರಿಕೆಗೆ ಇತ್ತೀಚೆಗೆ ಬಿಡ್‌ಗಳನ್ನು ಆಹ್ವಾನಿಸಲಾಗಿದ್ದು, ಸದ್ಯಕ್ಕೆ ಅವುಗಳ ಪರಾಮರ್ಶೆ ನಡೆದಿದೆ. ಪರಾಮರ್ಶನಾ ವರದಿಯು ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಕೈ ಸೇರಲಿದ್ದು, ಆನಂತರ ಅದು “ಭದ್ರತೆಗಾಗಿನ ಸಂಪುಟ ಸಮಿತಿ’ಗೆ ರವಾನೆಯಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ