
ಅಸ್ಸಾಂನ ಜೋರ್ಹಾಟ್‌ನಿಂದ ಟೇಕಾಫ್ ಆದ, 13 ಮಂದಿ ಇದ್ದ, IAF ವಿಮಾನ ನಾಪತ್ತೆ
Team Udayavani, Jun 3, 2019, 4:18 PM IST

ಹೊಸದಿಲ್ಲಿ : ಎಂಟು ಚಾಲಕ ಸಿಬಂದಿಗಳು ಮತ್ತು ಇತರ ಐವರು ಸೇರಿದಂತೆ ಒಟ್ಟು 13 ಜನರಿದ್ದ ಭಾರತೀಯ ವಾಯು ಪಡೆಯ ಸರಕು ಸಾಗಣೆಯ ಎಎನ್-32 ವಿಮಾನ ಅಸ್ಸಾಮಿನ ಜೋರ್ಹಾಟ್ ವಾಯುನೆಲೆಯಿಂದ ಇಂದು ಸೋಮವಾರ ಮಧ್ಯಾಹ್ನ 12.25ರ ಸುಮಾರಿಗೆ ಟೇಕಾಫ್ ಆದ 35 ನಿಮಿಷಗಳ ಒಳಗೆ ಭೂ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಡಿದುಕೊಂಡಿತೆಂದು ಅಧಿಕೃತ ಮೂಲಗಳು ತಿಳಿಸಿವೆ.
ನಾಪತ್ತೆಯಾಗಿರುವ ವಿಮಾನವನ್ನು ಪತ್ತೆ ಹಚ್ಚಲು ಭಾರತೀಯ ವಾಯು ಪಡೆ ತನ್ನೆಲ್ಲ ಸಂಪನ್ಮೂಲಗಳನ್ನು ಕ್ರಿಯಾಶೀಲಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಎಎನ್-32 ವಿಮಾನ ಅರುಣಾಚಲ ಪ್ರದೇಶದ ಮೆಂಚುಕಾ ವಾಯು ಪಟ್ಟಿಯಲ್ಲಿ ಇಳಿಯುವುದಿತ್ತು. ಆದರೆ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಅದು ಸಂಪರ್ಕ ಕಡಿದುಕೊಂಡಿತೆಂದು ಮೂಲಗಳು ಹೇಳಿವೆ.
ಎಎನ್-32 ವಿಮಾನ ಮೆಂಚುಕಾ ಅಡ್ವಾನ್ಸ್ ಲ್ಯಾಂಡಿಂಗ್ ಗ್ರೌಂಡ್ ತಲುಪದಿದ್ದಾಗ ಐಎಎಫ್ ಕೂಡಲೇ ಶೋಧ ಕಾರ್ಯಾಚರಣೆ ಆರಂಭಿಸಿತು.
ಅಂತೆಯೇ ಒಂದು ಸುಖೋಯಿ-30 ಯುದ್ಧ ವಿಮಾನ ಮತ್ತು ಸಿ-130 ವಿಶೇಷ ಕಾರ್ಯಾಚರಣೆ ವಿಮಾನವನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಯಿತು.
2016ರಲ್ಲಿ ಇನ್ನೊಂದು ಎನ್-32 ಸರಕು ಸಾಗಣೆ ವಿಮಾನ ಚೆನ್ನೈನಿಂದ ಪೋರ್ಟ್ ಬ್ಲೇರ್ ಗೆ ಟೇಕಾಫ್ ಆಗಿದ್ದ ಸ್ವಲ್ಪವೇ ಹೊತ್ತಿನಲ್ಲಿ ಕಣ್ಮರೆಯಾಗಿತ್ತು. ಆ ವಿಮಾನದಲ್ಲಿ ಏಳು ಮಂದಿ ಇದ್ದರು. ವಿಮಾನ ನಾಪತ್ತೆಯ ಬಳಿಕ ವ್ಯಾಪಕ ಶೋಧ ಕಾರ್ಯ ನಡೆಸಿದರೂ ವಿಮಾನ ಮತ್ತು ಅದರೊಳಗಿದ್ದವರು ಪತ್ತೆಯಾಗಿರಲಿಲ್ಲ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಮಗುವನ್ನು ಉಳಿಸಲು ಆಗುವುದಿಲ್ಲ.. ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡ ದಂಪತಿ

ನಾರೀಶಕ್ತಿಗೆ ಜೈಕಾರ: ಮಿಲಿಟರಿಯಲ್ಲಿ ನಾರೀಶಕ್ತಿ, ಸ್ತಬ್ಧಚಿತ್ರಗಳಲ್ಲೂ “ನಾರಿ’

ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಇಂದು ಪರೀಕ್ಷಾ ಪೇ ಚರ್ಚಾ

ದೇಶದಲ್ಲಿ ಆ್ಯಂಡ್ರಾಯ್ಡ್ ವ್ಯವಸ್ಥೆ ಬದಲು: ಸುಪ್ರೀಂಕೋರ್ಟಲ್ಲಿ ಹಿನ್ನಡೆ ಬಳಿಕ ಈ ಬೆಳವಣಿಗೆ

ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಿದರೆ, ದ ಕಾಶ್ಮೀರ್ ಫೈಲ್ಸ್ ಪ್ರದರ್ಶನ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
