ಬಾಲಾಕೋಟ್‌ ದಾಳಿಯಿಂದ ಬದಲಾಗಿರುವ ಐಎಸ್‌ಐ ತಂತ್ರಗಾರಿಕೆ; ಗುಪ್ತಚರ ವರದಿ

Team Udayavani, Jul 1, 2019, 5:54 PM IST

ಹೊಸದಿಲ್ಲಿ : ಭಾರತೀಯ ವಾಯು ಪಡೆ ಪಾಕಿಸ್ಥಾನದ ಬಾಲಾಕೋಟ್‌ ನಲ್ಲಿನ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ತರಬೇತಿ ಶಿಬಿರಗಳನ್ನು ಬಾಂಬ್‌ ಹಾಕಿ ಧ್ವಂಸ ಮಾಡಿದ ಹಲವು ತಿಂಗಳ ತರುವಾಯ ಇದೀಗ ಪಾಕಿಸ್ಥಾನದ ಗುಪ್ತಚರ ದಳ ಐಎಸ್‌ಐ, ಭಾರತ ವಿರುದ್ಧದ ತನ್ನ ಕಾರ್ಯಾಚರಣೆಯ ತಂತ್ರಗಾರಿಕೆಯನ್ನು ಬದಲಾಯಿಸಿದೆ ಎಂಬ ಮಾಹಿತಿಗಳನ್ನು ಭಾರತೀಯ ಗುಪ್ತಚರ ದಳ ಕಲೆ ಹಾಕಿದೆ.

ಭಾರತ ಭವಿಷ್ಯದಲ್ಲಿ ಪಾಕ್‌ ಮೇಲೆ ಇನ್ನೂ ದೊಡ್ಡ ಮಟ್ಟದ ದಾಳಿಯನ್ನು ನಡೆಸಬಹುದು ಎಂಬ ಗುಮಾನಿ ಈಗ ಪಾಕ್‌ ಬೇಹು ಸಂಸ್ಥೆ ಐಎಸ್‌ಐಗೆ ತೀವ್ರವಾಗಿ ಕಾಡುತ್ತಿದೆ. ಅಂತೆಯೇ ಅದು ಭಾರತದೊಂದಿಗೆ ತನ್ನ ಗಡಿಯ ಉದ್ದಕ್ಕೂ ಪ್ರಬಲ ವಿಚಕ್ಷಣೆ, ಕಟ್ಟೆಚ್ಚರ ಮತ್ತು ಪಾಕ್‌ಸೇನಾ ಘಟಕಗಳ ವ್ಯೂಹಾತ್ಮಕ ನಿಯೋಜನೆಯೇ ಮೊದಲಾದ ತಂತ್ರಗಾರಿಕೆಯನ್ನು ಐಎಸ್‌ಐ ನಡೆಸುತ್ತಿದೆ ಎಂಬ ಗುಪ್ತಚರ ಮಾಹಿತಿಗಳು ಲಭಿಸಿವೆ.

ನಿಜಕ್ಕಾದರೆ ಭಾರತೀಯ ವಾಯು ಪಡೆ ಪಾಕ್‌ ಗಡಿ ನಿಯಂತ್ರಣ ರೇಖೆ ದಾಟಿ ಬಹುದೂರದ ವರೆಗೆ ಮುನ್ನುಗ್ಗಿ ಬಂದು ಬಾಲಾಕೋಟ್‌ ಮೇಲೆ ಬಾಂಬ್‌ ದಾಳಿ ನಡೆಸಿದ ಸಂದರ್ಭದಲ್ಲಿ ಆ ಬಗ್ಗೆ ಒಂದಿನಿತೂ ಸುಳಿವು ಪಡೆಯದ ಪಾಕ್‌ ಸೇನೆ ಮತ್ತು ಐಎಸ್‌ಐ ತೀವ್ರ ಟೀಕೆ, ಖಂಡನೆಗೆ ಗುರಿಯಾಗಿದ್ದವು. ಭಾರತೀಯ ವಾಯು ಪಡೆಯ ಮೇಲೆ ತಿರುಗಿ ದಾಳಿ ನಡೆಸುವ ಅವುಗಳ ಯತ್ನಗಳು ಕೂಡ ಫ‌ಲಿಸಿರಲಿಲ್ಲ; ಪರಿಣಾಮವಾಗಿ ಪಾಕ್‌ ಸೇನೆ ಮತ್ತು ಐಎಸ್‌ಐ ಕೈಕೈ ಹಿಸುಕಿಕೊಳ್ಳುವ ಸ್ಥಿತಿಗೆ ಗುರಿಯಾಗಿದ್ದವು ಎಂದು ಗುಪ್ತಚರ ದಳ ಹೇಳಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ