ಜಮ್ಮು ಕಾಶ್ಮೀರದಲ್ಲಿ IAF ಹೆಲಿಕಾಪ್ಟರ್ ಪತನ: ಚಾಲಕ ಸಿಬಂದಿ ಪಾರು
Team Udayavani, May 23, 2018, 3:10 PM IST
ಹೊಸದಿಲ್ಲಿ : ಭಾರತೀಯ ವಾಯು ಪಡೆಯ ಚೀತಾ ಹೆಲಿಕಾಪ್ಟರ್ ಜಮ್ಮು ಕಾಶ್ಮೀರದ ನಾಥಾ ತುದಿಯಲ್ಲಿ ಇಂದು ಬುಧವಾರ ಪತನಗೊಂಡಿದೆ.
ಐಎಎಫ್ ಮೂಲಗಳನ್ನು ಉಲ್ಲೇಖೀಸಿ ವರದಿ ಮಾಡಿರುವ ಪಿಟಿಐ, ಹೆಲಿಕಾಪ್ಟರ್ ಒಳಗಿದ್ದ ಎಲ್ಲ ಚಾಲಕ ಸಿಬಂದಿಗಳು ಸುರಕ್ಷಿತವಾಗಿ ಪಾರಾಗಿದ್ದಾರೆ; ಆದರೆ ಈ ದುರ್ಘಟನೆಯ ನಿಖರ ಕಾರಣವೇನೆಂದು ಗೊತ್ತಾಗಿಲ್ಲ ಎಂದು ಹೇಳಿದೆ.
ಕಳೆದ ಎ.3ರಂದು ಪ್ರಬಲ ಬೀಸುಗಾಳಿಯ ಪ್ರತಿಕೂಲ ಸನ್ನಿವೇಶದಲ್ಲಿ ಇಳಿಯಲು ಯತ್ನಿಸಿದ್ದ ಐಎಎಫ್ ಸರಕು ಸಾಗಣೆ ಹೆಲಿಕಾಪ್ಟರ್ ಕೇದಾರನಾಥ ದೇವಾಲಯದ ಸಮೀಪ ಪತನಗೊಂಡಿತ್ತು. ಅದಾಗಿ ಎರಡೇ ತಿಂಗಳಲ್ಲಿ ಈ ದುರಂತ ಸಂಭವಿಸಿದೆ.
ನಾಥಾ ತುದಿಯಲ್ಲಿಂದು ಪತನಗೊಂಡ ಎಂಐ 17 ಹೆಲಿಕಾಪ್ಟರ್ ಭಾರತೀಯ ಸೇನೆಗೆ ಆಹಾರ ಸಾಮಗ್ರಿಗಳನ್ನು ಒಯ್ಯುತ್ತಿತ್ತು. ಹೆಲಿಕಾಪ್ಟರ್ ಇಳಿಯುತ್ತಿದ್ದಂತೆಯೇ ಅದು ಕಬ್ಬಿಣದ ಗರ್ಡರ್ಗೆ ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ಹೆಲಿಕಾಪ್ಟರ್ ಒಳಗಿದ್ದ ಆರು ಮಂದಿಗೆ ಗಾಯಗಳಾದವು ಎಂದು ವರದಿಗಳು ತಿಳಿಸಿವೆ.