IAF: ವಿಂಗ್ ಕಮಾಂಡರ್ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವಾಯು ಸೇನೆ ಮಹಿಳಾ ಅಧಿಕಾರಿ
Team Udayavani, Sep 10, 2024, 6:29 PM IST
ಹೊಸದಿಲ್ಲಿ: ಭಾರತೀಯ ವಾಯು ಸೇನೆಯ (Indian Air Force) ಮಹಿಳಾ ಫ್ಲೈಯಿಂಗ್ ಆಫೀಸರ್ ( Flying Officer) ಒಬ್ಬರು ಜಮ್ಮು ಕಾಶ್ಮೀರ ವಾಯು ಸೇನಾ ನಿಲ್ದಾಣದ ವಿಂಗ್ ಕಮಾಂಡರ್ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
ವಿಂಗ್ ಕಮಾಂಡರ್ ವಿರುದ್ದ ಅತ್ಯಾಚಾರ, ಮಾನಸಿಕ ಹಿಂಸೆ ಮತ್ತು ಸತತ ಹಿಂಬಾಲಿಸುವಿಕೆ ಆರೋಪಗಳನ್ನು ಮಹಿಳಾ ಅಧಿಕಾರಿ ಮಾಡಿದ್ದಾರೆ. ಘಟನೆಯ ಬಗ್ಗೆ ಭಾರತೀಯ ವಾಯು ಸೇನೆಯು ಆಂತರಿಕ ತನಿಖೆಗೆ ಆದೇಶ ನೀಡಿದೆ ಎಂದು ವರದಿ ತಿಳಿಸಿದೆ.
ವಿಂಗ್ ಕಮಾಂಡರ್ ವಿರುದ್ಧ ಮಹಿಳಾ ಅಧಿಕಾರಿ ನೀಡಿದ ದೂರಿನ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 376 (2) ಅಡಿಯಲ್ಲಿ ಬುದ್ಗಾಮ್ ಪೊಲೀಸ್ ಠಾಣೆಯಲ್ಲಿ ವಿಂಗ್ ಕಮಾಂಡರ್ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.
2023ರ ಡಿಸೆಂಬರ್ 31ರ ರಾತ್ರಿ ಈ ಅತ್ಯಾಚಾರ ಘಟನೆ ನಡೆದಿದೆ. ಅಧಿಕಾರಿಗಳ ಮೆಸ್ ನಲ್ಲಿ ನಡೆದಿದ್ದ ಹೊಸ ವರ್ಷದ ಪಾರ್ಟಿಯ ವೇಳೆ ತನ್ನ ಕೊಠಡಿಯಲ್ಲಿ ಅಧಿಕಾರಿ ಅತ್ಯಾಚಾರ ನಡೆಸಿದ್ದ ಎಂದು ಮಹಿಳಾ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.
2021ರಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ಆಗ ಮಹಿಳಾ ಪೈಲಟ್ ಒಬ್ಬರು ತನ್ನ ಫ್ಲೈಟ್ ಕಮಾಂಡರ್ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಜಮ್ಮು ಕಾಶ್ಮೀರ ಹೈಕೋರ್ಟ್ ಮೆಟ್ಟಿಲೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Digital arrest; ದಂಧೆ ನಡೆಸುತ್ತಿದ್ದ ತೈವಾನ್ ನ ನಾಲ್ವರು ಸೇರಿ 17 ಮಂದಿ ಬಂಧನ
Modi ಮಾನನಷ್ಟ ಕೇಸ್: ತರೂರ್ ವಿಚಾರಣೆಗೆ ತಡೆಯಾಜ್ಞೆ 4 ವಾರ ವಿಸ್ತರಿಸಿದ ಸುಪ್ರೀಂ
Uddhav Thackeray: ಮಾಜಿ ಸಿಎಂ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಆಸ್ಪತ್ರೆಗೆ ದಾಖಲು
Lawrence Bishnoi; ಗ್ಯಾಂಗ್ ನ ಹಿಟ್ ಲಿಸ್ಟ್ ನಲ್ಲಿ ಖ್ಯಾತ ಕಾಮಿಡಿಯನ್
Rain Alert: ತಮಿಳುನಾಡಿನ ನಾಲ್ಕು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಅ.15ರಂದು ರಜೆ… ಸಿಎಂ ಸಭೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.