ಇಂಟರ್ನಲ್ಸ್ ಆಧರಿಸಿ ಐಸಿಎಸ್ಇ ಫಲಿತಾಂಶ?
Team Udayavani, Jun 16, 2020, 9:10 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ಜುಲೈನಲ್ಲಿ ನಡೆಯಬೇಕಿರುವ ಪರೀಕ್ಷೆಗಳನ್ನು ನಡೆಸಬೇಕೇ ಬೇಡವೇ ಎಂಬ ಬಗ್ಗೆ ವಿದ್ಯಾರ್ಥಿಗಳಿಂದಲೇ ಪ್ರತಿಕ್ರಿಯೆ ಪಡೆದು ನಿರ್ಧರಿಸುತ್ತೇವೆ. ಇದರ ಜತೆಗೆ 2019-20ರ ಶೈಕ್ಷಣಿಕ ವರ್ಷದ ಆಂತರಿಕ ಪರೀಕ್ಷೆಗಳಲ್ಲಿ (ಇಂಟರ್ನಲ್ಸ್) ತೋರಿದ ಸಾಮರ್ಥ್ಯಯದ ಅನುಸಾರ ಫಲಿತಾಂಶ ಪ್ರಕಟಿಸಬೇಕೇ ಎಂಬ ಬಗ್ಗೆಯೂ ಅಭಿಪ್ರಾಯ ಸಂಗ್ರಹಿಸುವುದಾಗಿ ಹೈಕೋರ್ಟ್ಗೆ ಐಸಿಎಸ್ಇ ತಿಳಿಸಿದೆ. 10, 11ನೇ ತರಗತಿ ಪರೀಕ್ಷೆಗಳನ್ನು ಜು. 2ರಿಂದ ನಡೆಸಲು ಮಂಡಳಿ ತೀರ್ಮಾನಿಸಿತ್ತು. ಅದರ ವಿರುದ್ಧ ಅರವಿಂದ್ ತಿವಾರಿ ಎಂಬ ವಿದ್ಯಾರ್ಥಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದ. ಕೋವಿಡ್ ಅಧಿಕವಾಗಿರುವ, ಈ ಸಂದರ್ಭದಲ್ಲಿ ಪರೀಕ್ಷೆ ಎದುರಿಸುವ ಬಗ್ಗೆ ಭೀತಿ ಇರುವುದಾಗಿ ತಿಳಿಸಿದ್ದ. ಜೊತೆಗೆ, ಆಂತರಿಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ತೋರಿದ ಪ್ರಗತಿಯನ್ನೇ ಮಾನದಂಡವಾಗಿಸಿ ಫಲಿತಾಂಶ ಪ್ರಕಟಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದ.