ಜೇಟ್ಲಿ ಹೇಳಿಕೆ ಕೀಳುಮಟ್ಟದ್ದು ಎಂದ ಯಶವಂತ್ ಸಿನ್ಹಾ
Team Udayavani, Oct 1, 2017, 6:55 AM IST
ಹೊಸದಿಲ್ಲಿ: “ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಹೇಳಿಕೆಯು ಅತ್ಯಂತ ಕೀಳುಮಟ್ಟದ್ದು. ನನ್ನ ಕೆಲಸದ ಬಗ್ಗೆ ಅವರು ಮಾಡಿರುವ ಟೀಕೆಗಳು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮಾಡಿದ ಅವಮಾನವಿದ್ದಂತೆ.’ ಹೀಗೆಂದು ಹೇಳಿರುವುದು ನೋಟು ಅಮಾನ್ಯ ಕುರಿತು ಮೋದಿ ಸರಕಾರವನ್ನು ಟೀಕಿಸಿ ಸುದ್ದಿಯಾದ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ.
ಸಿನ್ಹಾ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಮಾತನಾಡಿದ್ದ ಸಚಿವ ಜೇಟ್ಲಿ ಅವರು, “ಯಶವಂತ ಸಿನ್ಹಾ ಅವರು ಸರಿಯಾಗಿ ಕೆಲಸ ಮಾಡದ ಕಾರಣಕ್ಕಾಗಿಯೇ ಸಚಿವ ಸ್ಥಾನ ಕಳೆದುಕೊಂಡಿರಲಿಲ್ಲವೇ’ ಎಂದು ಪ್ರಶ್ನಿಸಿದ್ದರು.