ಟ್ರಂಪ್‌ – ಕಿಂ ಸಭೆ ಸಾಧ್ಯವಾದರೆ ಸಾರ್ಕ್‌ ಏಕೆ ಅಸಾಧ್ಯ ? ನೇಪಾಲ

Team Udayavani, Jan 11, 2019, 6:36 AM IST

ಹೊಸದಿಲ್ಲಿ : ಟ್ರಂಪ್‌ ಮತ್ತು ಕಿಂ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸುತ್ತಾರಾದರೆ, ಈಗ ನಿಂತುಹೋಗಿರುವ ಸಾಕ್‌ ಶೃಂಗ ಸಭೆ ಮತ್ತೆ ಏಕೆ ಆರಂಭವಾಗಬಾರದು  ಎಂದು ನೇಪಾಲ ಪ್ರಶ್ನಿಸಿದೆ. 

ಸಾರ್ಕ್‌ ಶೃಂಗವನ್ನು ಮತ್ತೆ ಪುನರಾರಂಭಿಸಬೇಕೆಂದು ಬಲವಾಗಿ ಆಗ್ರಹಿಸಿರುವ ನೇಪಾಲ, ಸದಸ್ಯ ರಾಷ್ಟ್ರಗಳು ತಮ್ಮೊಳಗಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಮಾತುಕತೆಯಿಂದ ನಿವಾರಿಸಿಕೊಳ್ಳಬೇಕು; ಸಾರ್ಕ್‌ ಸಮೂಹದ ದೇಶಗಳು ಸಂಘಟಿತರಾಗಿ ಭಯೋತ್ಪಾದನೆಯನ್ನು ಎದುರಿಸುವ ಸಂಕಲ್ಪ ತಳೆಯಬೇಕು ಮತ್ತು ಪ್ರಮುಖ ಪ್ರಾದೇಶಿಕ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಮಾರ್ಗೋಪಾಯಗಳನ್ನು ಕಂಡು ಕೊಳ್ಳಬೇಕು ಎಂದು ಹೇಳಿದೆ. 

ನೇಪಾಲಿ ವಿದೇಶ ಸಚಿವ ಪ್ರದೀಪ್‌ ಕುಮಾರ್‌ ಗ್ಯಾವಳಿ ಅವರು ಕಳೆದ ವರ್ಷ ಸಿಂಗಾಪುರದಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯ ನಾಯಕ ಕಿಂ ಜೋಂಗ್‌ ಉನ್‌ ಅವರೊಳಗಿನ ಐತಿಹಾಸಿಕ ಮಾತುಕತೆಯನ್ನು  ಮುಕ್ತ ಪ್ರಶಂಸೆಯೊಂದಿಗೆ ಉಲ್ಲೇಖೀಸಿದರಲ್ಲದೆ, ಸಾರ್ಕ್‌ ಸಮೂಹದ ಸದಸ್ಯ ರಾಷ್ಟ್ರಗಳು ತಮ್ಮೊಳಗಿನ ಯಾವತ್ತೂ ಭಿನ್ನಮತ, ಸಮಸ್ಯೆಗಳನ್ನು ಮಾತುಕತೆಯಿಂದ ಬಗೆ ಹರಿಸಿಕೊಳ್ಳಬೇಕು ಎಂದು ಹೇಳಿದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ