ಕಾಸು ಕೊಟ್ಟರೆ ಸಾಕು, ತಿಹಾರ್‌ ಜೈಲು ವಾಸದ ಅನುಭವ

Team Udayavani, Mar 2, 2018, 8:15 AM IST

20.jpg

ನವದೆಹಲಿ: ದೇಶದ ಅತಿದೊಡ್ಡ ಹಾಗೂ ಅತಿ ಭದ್ರತೆಯ ಜೈಲು ಎಂದೇ ಹೆಸರಾಗಿರುವ ತಿಹಾರ್‌ ಜೈಲಿನ ಒಳಗೆ ಹೇಗಿರಬಹುದು ಎಂದು ಒಮ್ಮೆಯಾದರೂ ಯೋಚಿಸಿದ್ದಿದೆಯೇ? ಉಗ್ರ ಯಾಸೀನ್‌ ಭಟ್ಕಳ್‌, ಭೂಗತ ಪಾತಕಿ ಛೋಟಾ ರಾಜನ್‌, ಶಹಾಬುದ್ದೀನ್‌ ಮುಂತಾದ ಕ್ರಿಮಿನಲ್‌ಗ‌ಳಿರುವಂಥ ಈ ಜೈಲಿನೊಳಕ್ಕೆ ಹೋಗಿ ಅನುಭವ ಪಡೆಯಬೇಕೆಂಬ ಆಸೆಯಿದೆಯೇ? ನಿಮ್ಮ ಆಸೆ ಕೆಲವೇ ತಿಂಗಳಲ್ಲಿ ಈಡೇರಲಿದೆ. ಹಾಗಂತ, ಜೈಲಿನೊಳಕ್ಕೆ ಹೋಗಲು ನೀವು ಕೈದಿಯೇ ಆಗಬೇಕಾಗಿಲ್ಲ. ಸದ್ಯದಲ್ಲೇ ತಿಹಾರ್‌ ಜೈಲಿನ 400 ಎಕರೆ ಪ್ರದೇಶದೊಳಗೆ “ಫೀಲ್‌ ಲೈಕ್‌ ಜೈಲ್‌’ ಎಂಬ ಹೆಸರಿನ ಹೊಸ ಸೌಲಭ್ಯವೊಂದು ಆರಂಭವಾಗಲಿದೆ. ಈ ಹೆಸರನ್ನು ತಮಾಷೆಯಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ, ನೀವು ಜೈಲಿನೊಳಕ್ಕೆ ಕೈದಿಯಾಗಿ ಹೋಗ ದಿದ್ದರೂ, ಕೈದಿಯಂತೆಯೇ ಇರಬೇಕಾಗುತ್ತದೆ.

ಹೌದು, ತಿಹಾರ್‌ ಜೈಲು ಇನ್ನು ಮುಂದೆ ಅತಿಥಿಗಳಿಗಾಗಿಯೂ ತೆರೆದಿರುತ್ತದೆ. ಪ್ರವೇಶ ಶುಲ್ಕ ನೀಡಿ ಯಾರು ಬೇಕಿದ್ದರೂ “ಜೈಲು ವಾಸ’ ಅನುಭವಿಸಬಹುದು. ಆದರೆ, ಒಳಹೋದ ಬಳಿಕ ನೀವೂ ಕೈದಿಗಳಂತೆಯೇ ವಸ್ತ್ರಗಳನ್ನು ತೊಡಬೇಕು. ಅಷ್ಟೇ ಅಲ್ಲ, ಕೈದಿಗಳು ಮಾಡುವಂಥ ಕೆಲಸಗಳನ್ನು ಅಂದರೆ, ತೋಟಗಾರಿಕೆ, ಮರಗೆಲಸದಂಥ ಕೂಲಿ ಕೆಲಸಗಳನ್ನು ಮಾಡಬೇಕು. ಜೊತೆಗೆ, ಅಲ್ಲಿ ಇರುವಷ್ಟು ದಿನ ಮೊಬೈಲ್‌ ಫೋನ್‌ ಮತ್ತು ಇತರ ಯಾವುದೇ ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ಬಳಸುವಂತಿಲ್ಲ. ಅವುಗಳನ್ನು ಒಳಗೆ ಕೊಂಡೊಯ್ಯಲೂ ಅವಕಾಶವಿಲ್ಲ.

ಕೈದಿಗಳ ಕೈರುಚಿ: ಜೈಲಿನೊಳಗೆ ಇರುವಷ್ಟು ದಿನಗಳೂ ಕೈದಿಗಳೇ ತಯಾರಿಸಿದ ಆಹಾರವನ್ನೇ ಸೇವಿಸಬೇಕು. ಆದರೆ, ಭದ್ರತೆಯ ಕಾರಣಕ್ಕಾಗಿ ಕೈದಿಗಳ ಜತೆ ನೇರ ಸಂಪರ್ಕಕ್ಕೆ ಬರುವಂತಿಲ್ಲ ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಯೋಜನೆಯ ರೂಪುರೇಷೆಗಳು ಸಿದ್ಧವಾಗುತ್ತಿವೆ. ಯೋಜನೆ ಸಂಪೂರ್ಣ ಸಿದ್ಧವಾಗುತ್ತಿದ್ದಂತೆ, ಈ ಕಾರ್ಯಕ್ರಮ ಆರಂಭಿಸುವ ದಿನಾಂಕವನ್ನು ಹಾಗೂ ಪ್ರವೇಶ ಶುಲ್ಕ ಇನ್ನಿತರ ಮಾಹಿತಿಗಳನ್ನು ತಿಳಿಸುತ್ತೇವೆ ಎಂದೂ ಅವರು ಹೇಳಿದ್ದಾರೆ. ಬಂದೀಖಾನೆಯ ಮುಖ್ಯಕಚೇರಿ ಬಳಿಯೇ ಈ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಇಲ್ಲಿ ಕೈದಿಗಳಾಗಿ ಅನುಭವ ಪಡೆಯಲಿಚ್ಛಿಸುವವರ ಹಿನ್ನೆಲೆಯನ್ನು ಪರಿಶೀಲಿಸಿಯೇ ಜೈಲಿನೊಳಗೆ ಬರಲು ಅವರಿಗೆ ಅವಕಾಶ ನೀಡಲಾಗುವುದು ಎಂದು ಮತ್ತೂಬ್ಬ ಅಧಿಕಾರಿ ಹೇಳಿದ್ದಾರೆ. 

ತೆಲಂಗಾಣದಲ್ಲೇ ಜೈಲು ಮ್ಯೂಸಿಯಂ: ತೆಲಂಗಾಣ ಸರ್ಕಾರ ಕೂಡ ತನ್ನ ರಾಜ್ಯದ ಸಂಗರೆಡ್ಡಿಯಲ್ಲಿನ 220 ವರ್ಷಗಳಷ್ಟು ಪ್ರಾಚೀನವಾದ ಜೈಲೊಂದರಲ್ಲಿ ಇದೇ ಮಾದರಿಯ ಯೋಜನೆ ಆರಂಭಿಸಿತ್ತು. 2016ರ ಜೂನ್‌ನಲ್ಲಿ ಇದನ್ನು ವಸ್ತು ಸಂಗ್ರಹಾಲಯವನ್ನಾಗಿ ಬದಲಾಯಿಸಲಾಯಿತು. ರಾಜ್ಯ ಸರ್ಕಾರದ ಪ್ರವಾಸೋದ್ಯಮದ ಭಾಗವಾಗಿ ಇದನ್ನು ಸಾರ್ವಜನಿಕರಿಗೆ ಮುಕ್ತವಾಗಿಸಲಾಯಿತು. ಇಲ್ಲಿಗೆ ಭೇಟಿ ನೀಡಲು ಬಯಸುವವರು ದಿನಕ್ಕೆ 500 ರೂ. ಪ್ರವೇಶ ಶುಲ್ಕ ಪಾವತಿಸಬೇಕಿತ್ತು. ಕಳೆದ ತಿಂಗಳಷ್ಟೇ, ಮಲೇಷ್ಯಾದ ಇಬ್ಬರು ಪ್ರವಾಸಿಗರು ಇಲ್ಲಿಗೆ ಬಂದು, ಭಾರತೀಯ ಜೈಲುಗಳು ಹೇಗಿರುತ್ತವೆ ಎಂಬ ಅನುಭವವನ್ನು ಪಡೆದು ಹೋಗಿದ್ದರು.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.