ಭಾರತಕ್ಕೆ ಬಂದ ಐಎಂಎ ವಂಚಕ ಮನ್ಸೂರ್‌ ಖಾನ್‌ ಇಡಿ ವಶಕ್ಕೆ

ರಾತ್ರೋರಾತ್ರಿ ಭಾರತಕ್ಕೆ ಬಂದಿಳಿದ ಮನ್ಸೂರ್

Team Udayavani, Jul 19, 2019, 8:42 AM IST

ಹೊಸದೆಹಲಿ: ದೇಶ ಬಿಟ್ಟು ಪರಾರಿಯಾಗಿದ್ದ ಬಹುಕೋಟಿ ಐಎಂಎ ಜ್ಯುವೆಲ್ಲರಿ ವಂಚಕ ಮನ್ಸೂರ್‌ ಖಾನ್‌ ರಾತ್ರೋರಾತ್ರಿ ಭಾರತಕ್ಕೆ ಮರಳಿದ್ದಾನೆ.

ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮನ್ಸೂರ್‌ ನನ್ನು ಎಸ್‌ ಐಟಿ ಮತ್ತು ಇಡಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಬೆಂಗಳೂರಿನ ಐಎಂಎ ಜ್ಯುವೆಲ್ಲರಿ ಮಾಲಕನಾಗಿದ್ದ ಮೊಹಮ್ಮದ್‌ ಮನ್ಸೂರ್‌ ಖಾನ್ ಸಾವಿರಾರು ಜನರಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ.

ಸದ್ಯ ಮನ್ಸೂನ್‌ ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಿದ್ದಾರೆ.  ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿ ಎಂಟಿಎನ್‌ ಎಲ್‌ ಕಟ್ಟಡಕ್ಕೆ ಕರೆದೊಯ್ಯಲಾಗಿದೆ.

ತಿಂಗಳ ಹಿಂದೆ ವಿದೇಶಕ್ಕೆ ಪರಾರಿಯಾಗಿದ್ದ ಮನ್ಸೂನ್‌, ನಂತರ ವಿಡಿಯೋ ಮೂಲಕ ತನಗಿರುವ ಜೀವ ಬೆದರಿಕೆ, ತಾನು ಭಾರತಕ್ಕೆ ಬಂದರೆ ನನಗೆ ಜೀವ ಭಯವಿದೆ ಎಂದು ಹೇಳಿಕೆ ನೀಡಿದ್ದ.

ಜುಲೈ 15ರಂದು ಮತ್ತೊಂದು ವಿಡಿಯೋ ಮಾಡಿದ್ದ ಖಾನ್‌, “ನನಗೆ ಅನಾರೋಗ್ಯ ಕಾಡುತ್ತಿದೆ. ಹೃದಯ ಸಂಬಂಧಿ ಅನಾರೋಗ್ಯವಿದೆ. ಹಾಗಾಗಿ ನಾನು ಭಾರತಕ್ಕೆ ಬರುತ್ತಿದ್ದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಂಬಿಕೆಯಿದೆ” ಎಂದಿದ್ದ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ