ಮುಜಫರನಗರ: ಮೈದುನನಿಂದ ಅತ್ಯಾಚಾರ;ಡೈವೋರ್ಸ್ ನೀಡಿದ ಪತಿ ಇಮಾಮ್
Team Udayavani, Oct 29, 2018, 11:21 AM IST
ಮುಜಫರನಗರ, ಉತ್ತರ ಪ್ರದೇಶ : ದಿಲ್ಲಿಯಲ್ಲಿನ ಮಸೀದಿಯೊಂದರ ಇಮಾಮ್ ಆಗಿರುವ ವ್ಯಕ್ತಿಯೋರ್ವರ ಪತ್ನಿಯನ್ನು ಆಕೆಯ ಮೈದುನನೇ ಅತ್ಯಾಚಾರ ಗೈದ ಘಟನೆ ವರದಿಯಾಗಿದೆ.
ಇಲ್ಲಿಗೆ ಸಮೀಪದ ಧಾಂಡೇದಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರದ ಘಟನೆಯನ್ನು ಅನುಸರಿಸಿ ರೇಪ್ ಸಂತ್ರಸ್ತೆಯು ತನ್ನ ಇಮಾಮ್ ಪತಿಯಿಂದ ವಿಚ್ಛೇದನ ನೊಟೀಸ್ ಪಡೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರಿ ಮೈದುನನ ದುಷ್ಕೃತ್ಯಕ್ಕೆ ಪ್ರತಿರೋಧ ಒಡ್ಡಿದ್ದ ಮಹಿಳೆಯನ್ನು ಆರೋಪಿ ಮೈನುದ್ದೀನ್ ಅಮಾನುಷವಾಗಿ ಹೊಡೆದು ಹಲ್ಲೆ ಮಾಡಿ ರೇಪ್ ಎಸಗಿದ್ದಾನೆ ಎಂದು ಎಸ್ಎಚ್ಓ ಜೀತೇಂದ್ರ ಕುಮಾರ್ ತಿಳಿಸಿದ್ದಾರೆ.
ನಿನ್ನೆ ಭಾನುವಾರ ಈ ಘಟನೆ ನಡೆದಿದ್ದಾಗ ಮಹಿಳೆಯ ಪತಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿಸಿರುವ ಎಸ್ಎಚ್ಓ, ರೇಪ್ ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ರೇಪ್ ಸಂತ್ರಸ್ತೆಯ ಸಹೋದರನು ಕೊಟ್ಟಿರುವ ದೂರಿನ ಪ್ರಕಾರ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.ಇಮಾಮ್ ಜತೆಗೆ ಸಂತ್ರಸ್ತೆಗೆ ಕಳೆದ ವರ್ಷ ಮದುವೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು