ಬಂದಿದೆ ರೋಗ ನಿರೋಧಕ ಸೀರೆ! ಸೀರೆಯ ಆರಂಭಿಕ ದರ-3,000 ರೂ.
ಸದ್ಯ ಭೋಪಾಲ್ ಮತ್ತು ಇಂದೋರ್ನಲ್ಲಿ ಮಾರಾಟ; 1 ಸೀರೆ ತಯಾರಿಕೆಗೆ ಬೇಕಾಗುವ ದಿನಗಳು: 5-6
Team Udayavani, Aug 15, 2020, 7:01 PM IST
ಭೋಪಾಲ್: ಕೋವಿಡ್ ಸೋಂಕಿನ ಈ ಸಂದರ್ಭ ದಲ್ಲಿ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವತ್ತ ಜನರು ಗಮನ ನೆಟ್ಟಿರುವಾಗಲೇ ಮಧ್ಯ ಪ್ರದೇಶದಲ್ಲಿ ವಿಶೇಷವಾದ ಹರ್ಬಲ್ ಸೀರೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
ಈ ಸೀರೆಗಳಿಗೆ “ಆಯುರ್ವಸ್ತ್ರ’ ಎಂದು ನಾಮ ಕರಣ ಮಾಡಲಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂಥ ಅಂಶಗಳುಳ್ಳ ಗಿಡಮೂಲಿಕೆಗಳನ್ನು ಬಳಸಿ ಇವುಗಳನ್ನು ಸಿದ್ಧಪಡಿಸಲಾಗಿದೆಯಂತೆ. ಕೇವಲ ಸೀರೆ ಮಾತ್ರವಲ್ಲದೆ, ಇತರೆ ಬಟ್ಟೆಬರೆಗಳನ್ನು ಕೂಡ ಇದೇ ಮಾದರಿಯಲ್ಲಿ ತಯಾರಿಸಿ ಮಾರಾಟ ಮಾಡುತ್ತಿದ್ದೇವೆ ಎಂದು ಮಧ್ಯಪ್ರದೇಶ ಕೈಮಗ್ಗ ಮತ್ತು ಕರಕುಶಲ ನಿಗಮ ಹೇಳಿದೆ.
ತಯಾರಿಕೆ ಹೇಗೆ?: ಲವಂಗ, ಏಲಕ್ಕಿ, ಜಾಪತ್ರಿ, ದಾಲಿcನ್ನಿ, ಕಾಳುಮೆಣಸು, ಜೀರಿಗೆ, ಪಲಾವ್ ಎಲೆ ಮತ್ತಿತರ ಮಸಾಲೆ ಪದಾರ್ಥಗಳನ್ನು ಪುಡಿ ಮಾಡಿ, 48 ಗಂಟೆಗಳಿಗೂ ಹೆಚ್ಚು ಕಾಲ ನೀರಿನಲ್ಲಿ ನೆನೆಸಿಡಲಾಗುತ್ತದೆ. ದೊಡ್ಡ ಕುಲುಮೆಯಲ್ಲಿ ಇದನ್ನು ಕುದಿಸಿದಾಗ ಆವಿ ಬರಲು ಶುರುವಾಗುತ್ತದೆ. ಆ ಆವಿಯನ್ನು ಕೆಲ ಗಂಟೆಗಳ ಕಾಲ ಬಟ್ಟೆಗಳ ಮೇಲೆ ಹಾಯಿಸ ಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಮೇಲೆ ಆ ಬಟ್ಟೆ
ಗಳಿಂದ ಮಾಸ್ಕ್, ಸೀರೆ ಅಥವಾ ಇತರೆ ಉಡುಪು ಗಳನ್ನು ತಯಾರಿಸಲಾಗುತ್ತದೆ.
6 ದಿನ ಬೇಕು: ರೋಗ ನಿರೋಧಕ ಶಕ್ತಿಯುಳ್ಳ ಒಂದು ಸೀರೆ ತಯಾರಿಸಲು 5 ರಿಂದ 6 ದಿನಗಳು ಬೇಕಾಗುತ್ತದೆ. ಅಲ್ಲದೆ, ಅದರಲ್ಲಿನ ರೋಗನಿ ರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ 4ರಿಂದ 5 ಬಾರಿ ಸೀರೆಯನ್ನು ತೊಳೆಯುವವರೆಗೂ ಇರುತ್ತದೆ. ಸೋಂಕುಗಳ ವಿರುದ್ಧ ಹೋರಾಡಲು ಇದ್ದಂಥ ಶತಮಾನಗಳಷ್ಟು ಹಳೆಯ ವಿಧಾನವಿದು ಎಂದು ಜವಳಿ ತಜ್ಞ ವಿನೋದ್ ಮಲೇವಾರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ