ಕಾಶ್ಮೀರ: ಪಾಕ್‌ ಈಗ ಅಕ್ಷರಶಃ ಏಕಾಂಗಿ

ಸೌದಿಯನ್ನು ಎದುರು ಹಾಕಿಕೊಂಡ ಇಮ್ರಾನ್‌ಖಾನ್‌ ಸರ್ಕಾರ

Team Udayavani, Aug 12, 2020, 5:50 AM IST

ಕಾಶ್ಮೀರ: ಪಾಕ್‌ ಈಗ ಅಕ್ಷರಶಃ ಏಕಾಂಗಿ

ನವದೆಹಲಿ: ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಭಾರತದ ಮೇಲೆ ಒತ್ತಡ ಹೇರಲು ಯತ್ನಿಸಿ ವಿಫ‌ಲವಾಗಿದ್ದ ಪಾಕಿಸ್ತಾನ ಮತ್ತೂಂದು ಮುಖಭಂಗಕ್ಕೆ ಈಡಾಗಿದೆ.

ಸೌದಿ ಅರೇಬಿಯಾದ ಪ್ರಾಮುಖ್ಯತೆ ಇರುವ ಆರ್ಗನೈಸೇಷನ್‌ ಆಫ್ ಇಸ್ಲಾಮಿಕ್‌ ಕೊ-ಆಪರೇಷನ್‌ (ಒಐಸಿ) ರಾಷ್ಟ್ರಗಳ ಸಹಾನುಭೂತಿಯನ್ನು ಪಡೆಯುವಲ್ಲಿಯೂ ಅದು ವಿಫ‌ಲವಾಗಿದೆ. ಅತ್ತ, ಸೌದಿ ಅರೇಬಿಯಾ, ಕಾಶ್ಮೀರ ವಿಚಾರದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಕೈ ಜೋಡಿಸುವುದಿಲ್ಲ ಎಂದು ಸೌದಿ ಖಡಾಖಂಡಿತವಾಗಿ ಹೇಳಿದ್ದು, ಈ ವಿಚಾರದಲ್ಲಿ ಸಹಾಯ ಮಾಡಲು ಪಾಕಿಸ್ತಾನದ ಆಪ್ತ ಮಿತ್ರ ಚೀನಾ ಕೂಡ ನಿರಾಕರಿಸಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳ ರಾಜನೀತಿಯಲ್ಲಿ ಮೂಗು ತೂರಿಸುವುದಿಲ್ಲ ಎಂದು ಡ್ರ್ಯಾಗನ್‌ ಹೇಳಿದ್ದು, ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಕ್ಷರಶಃ ಏಕಾಂಗಿಯನ್ನಾಗಿಸಿದೆ.

ಸೌದಿ ಜೊತೆ ವಿರಸ: ಕಾಶ್ಮೀರ ವಿಚಾರದಲ್ಲಿ ಇಸ್ಲಾಂ ದೇಶಗಳ ಸಹಾನುಭೂತಿ ಪಡೆಯಲು ಒಐಸಿ ಸದಸ್ಯ ರಾಷ್ಟ್ರಗಳ ಸಭೆ ಕರೆದು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿ, ಪಾಕಿಸ್ತಾನ, ಕೆಲವು ತಿಂಗಳುಗಳಿಂದ ಸೌದಿ ಅರೇಬಿಯಾ ಬೆನ್ನು ಬಿದ್ದಿತ್ತು. ಆದರೆ, ಸೌದಿ ಅದಕ್ಕೆ ಸೊಪ್ಪು ಹಾಕಲಿಲ್ಲ.

ಈ ಹಿನ್ನೆಲೆಯಲ್ಲಿ, ಇತ್ತೀಚೆಗೆ ಹೇಳಿಕೆ ನೀಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್‌ ಖುರೇಷಿ, “”ಕಾಶ್ಮೀರದ ವಿಚಾರದಲ್ಲಿ ಸೌದಿ ಸರ್ಕಾರ ನಮಗೆ ಬೆಂಬಲ ನೀಡದಿದ್ದರೆ ಪಾಕಿಸ್ತಾನಕ್ಕೇನೂ ನಷ್ಟವಿಲ್ಲ. ಪಾಕಿಸ್ತಾನವೇ ಒಐಸಿ ರಾಷ್ಟ್ರಗಳ ಬೃಹತ್‌ ಸಮ್ಮೇಳನವನ್ನು ಆಯೋಜಿಸಿ, ಅವುಗಳ ಬೆಂಬಲ ಕೇಳಲಿದೆ” ಎಂದಿದ್ದರು. ಇದನ್ನು ಟೀಕಿಸಿದ ಪಾಕಿಸ್ತಾನದ ಅನೇಕ ರಾಜಕೀಯ ತಜ್ಞರು, “”ಸೌದಿಯನ್ನು ಎದುರು ಹಾಕಿಕೊಂಡರೆ ಮುಂದಾಗುವ ಅನಾ ಹುತಗಳ ಬಗ್ಗೆ ಖುರೇಷಿ ಆಲೋಚಿಸಬೇಕಿತ್ತು” ಎಂದರು.

ಖುರೇಷಿಯವರ ಹೇಳಿಕೆಯಿಂದ ಸಿಟ್ಟಿಗೆದ್ದಿರುವ ಸೌದಿ, ಇತ್ತೀಚೆಗೆ ಸೌದಿಯ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ, ಪಾಕಿಸ್ತಾನಕ್ಕೆ 1.4 ಲಕ್ಷ ಕೋಟಿ ರೂ.ಗಳ ಸಹಾಯ ಧನ ನೀಡುವ ಬಗ್ಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸಲು ಚಿಂತನೆ ನಡೆಸಿದೆ.

ಇದರಿಂದ ಎಚ್ಚೆತ್ತಿರುವ ಇಮ್ರಾನ್‌ ಖಾನ್‌ ಸರ್ಕಾರ, ಸೌದಿಯಿಂದ ತಾನು ಹಿಂದೆ ಪಡೆದಿದ್ದ ತೈಲ ಸಂಬಂಧಿ ಸಾಲದಲ್ಲಿ ಸುಮಾರು 7,400 ಕೋಟಿ ರೂ. ಹಣವನ್ನು ಅವಧಿ ಪೂರ್ವದಲ್ಲೇ ತೀರಿ ಸಿದೆ. ಆ ಮೂಲಕ ಸೌದಿ ಸರ್ಕಾರದ ಮೆಚ್ಚುಗೆ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿ ಸಿವೆ. ಅಂತೂ ಇಂತು ಕಾಶ್ಮೀರ ವಿಚಾರದಲ್ಲಿ ಎಡಬಿಡಂಗಿಯಂತೆ ವರ್ತಿಸಿ ಪಾಕಿಸ್ತಾನ ತನ್ನ ಸ್ವಧರ್ಮೀಯ ದೇಶಗಳಿಂದಲೇ ಇಕ್ಕಟ್ಟಿಗೆ ಸಿಲುಕಿರುವುದು ಸತ್ಯ.

ಟಾಪ್ ನ್ಯೂಸ್

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

ಎಲ್ಲ ಶಾಲಾ ಕಾಲೇಜುಗಳಲ್ಲಿ ಸುಭಾಷಚಂದ್ರ ಭೋಸ್‌ರ 125 ನೇ ಜಯಂತಿ ಆಚರಣೆ: ಸಿಎಂ

ಎಲ್ಲ ಶಾಲಾ ಕಾಲೇಜುಗಳಲ್ಲಿ ಸುಭಾಷಚಂದ್ರ ಭೋಸ್‌ರ 125 ನೇ ಜಯಂತಿ ಆಚರಣೆ: ಸಿಎಂ

ಪಶ್ಚಿಮ ಬಂಗಾಳದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ನಾರಾಯಣ ದೇವನಾಥ್‌ ನಿಧನ

ಪಶ್ಚಿಮ ಬಂಗಾಳದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ನಾರಾಯಣ ದೇವನಾಥ್‌ ನಿಧನ

ಛತ್ತೀಸ್‌ಗಡ: ಪ್ರತ್ಯೇಕ ಎನ್‌ಕೌಂಟರ್‌; ಐವರು ನಕ್ಸಲರ ಹತ್ಯೆ

ಛತ್ತೀಸ್‌ಗಡ: ಪ್ರತ್ಯೇಕ ಎನ್‌ಕೌಂಟರ್‌; ಐವರು ನಕ್ಸಲರ ಹತ್ಯೆ

ವಿಚ್ಛೇದನ ಹಾದಿಯಲ್ಲಿ ತೆಲುಗು ಚಿತ್ರರಂಗದ ಹಿರಿಯ ನಟ ಚಿರಂಜೀವಿ ಪುತ್ರಿ ಶ್ರೀಜಾ?

ವಿಚ್ಛೇದನ ಹಾದಿಯಲ್ಲಿ ತೆಲುಗು ಚಿತ್ರರಂಗದ ಹಿರಿಯ ನಟ ಚಿರಂಜೀವಿ ಪುತ್ರಿ ಶ್ರೀಜಾ?

ಮಾಸ್ಕ್ ಹಾಕಬೇಕೆಂದು ನನಗೆ ಅನಿಸಿಲ್ಲ, ಹಾಕಲ್ಲ: ಸಚಿವ ಕತ್ತಿ ಉಡಾಫೆ

ಮಾಸ್ಕ್ ಹಾಕಬೇಕೆಂದು ನನಗೆ ಅನಿಸಿಲ್ಲ, ಹಾಕಲ್ಲ: ಸಚಿವ ಕತ್ತಿ ಉಡಾಫೆ ಉತ್ತರ

ಶ್ರೀರಾಮ, ಶ್ರೀಕೃಷ್ಣರಂತೆ ಪಿಎಂ ಮೋದಿ ದೇವರ ಅವತಾರ: ಸಚಿವ ಕಮಲ್‌ ಪಟೇಲ್‌

ಶ್ರೀರಾಮ, ಶ್ರೀಕೃಷ್ಣರಂತೆ ಪಿಎಂ ಮೋದಿ ದೇವರ ಅವತಾರ: ಸಚಿವ ಕಮಲ್‌ ಪಟೇಲ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

ಪಶ್ಚಿಮ ಬಂಗಾಳದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ನಾರಾಯಣ ದೇವನಾಥ್‌ ನಿಧನ

ಪಶ್ಚಿಮ ಬಂಗಾಳದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ನಾರಾಯಣ ದೇವನಾಥ್‌ ನಿಧನ

ಛತ್ತೀಸ್‌ಗಡ: ಪ್ರತ್ಯೇಕ ಎನ್‌ಕೌಂಟರ್‌; ಐವರು ನಕ್ಸಲರ ಹತ್ಯೆ

ಛತ್ತೀಸ್‌ಗಡ: ಪ್ರತ್ಯೇಕ ಎನ್‌ಕೌಂಟರ್‌; ಐವರು ನಕ್ಸಲರ ಹತ್ಯೆ

ಶ್ರೀರಾಮ, ಶ್ರೀಕೃಷ್ಣರಂತೆ ಪಿಎಂ ಮೋದಿ ದೇವರ ಅವತಾರ: ಸಚಿವ ಕಮಲ್‌ ಪಟೇಲ್‌

ಶ್ರೀರಾಮ, ಶ್ರೀಕೃಷ್ಣರಂತೆ ಪಿಎಂ ಮೋದಿ ದೇವರ ಅವತಾರ: ಸಚಿವ ಕಮಲ್‌ ಪಟೇಲ್‌

ಬರೋಬ್ಬರಿ 5 ಬಾರಿ ಕೋವಿಡ್‌ ಲಸಿಕೆ ಪಡೆದ ವೈದ್ಯೆ!

ಬರೋಬ್ಬರಿ 5 ಬಾರಿ ಕೋವಿಡ್‌ ಲಸಿಕೆ ಪಡೆದ ವೈದ್ಯೆ!

MUST WATCH

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

ಹೊಸ ಸೇರ್ಪಡೆ

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

ಎಲ್ಲ ಶಾಲಾ ಕಾಲೇಜುಗಳಲ್ಲಿ ಸುಭಾಷಚಂದ್ರ ಭೋಸ್‌ರ 125 ನೇ ಜಯಂತಿ ಆಚರಣೆ: ಸಿಎಂ

ಎಲ್ಲ ಶಾಲಾ ಕಾಲೇಜುಗಳಲ್ಲಿ ಸುಭಾಷಚಂದ್ರ ಭೋಸ್‌ರ 125 ನೇ ಜಯಂತಿ ಆಚರಣೆ: ಸಿಎಂ

ಜಕಲಕಜಹಗ್ದಸ

ರೈತನಿಗೆ ಮಾಜಿ ಶಾಸಕರಿಂದ ಧನಸಹಾಯ

ೆ9ಒಕಜಹಗ್ದಸ

ನಾಗೇಂದ್ರಗಡದಲ್ಲಿ ಚಿರತೆ ದಾಳಿಗೆ ಆಕಳು ಬಲಿ

eರತಯುಇಕಲಕ

ರಾಜಾ ಹಂಡೆ ಹನುಮಪ್ಪ ನಾಯಕನ ವೃತ್ತ ಅನಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.