ಪುಲ್ವಾಮಾ ಘಟನೆ ಖಂಡಿಸದ ನಿಮ್ಮನ್ನು ಇನ್ನೂ ನಂಬಬೇಕೆ? ಪಾಕ್ ಗೆ ಶಾ

Team Udayavani, Mar 1, 2019, 9:30 AM IST

ನವದೆಹಲಿ:ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ದಾಳಿ ನಡೆಸಿ 40 ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ ಘಟನೆ ಬಗ್ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಯಾವ ಹೇಳಿಕೆಯನ್ನೂ ನೀಡದೆ ತೆಪ್ಪಗೆ ಕುಳಿತಿದ್ದು ಯಾಕೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದ್ದಾರೆ.

ಪುಲ್ವಾಮಾದಲ್ಲಿ ನಡೆಸಿದ ಭಯೋತ್ಪಾದನಾ ಘಟನೆಯನ್ನು ಯಾಕೆ ಖಂಡಿಸಲಿಲ್ಲ ಎಂಬುದರ ಬಗ್ಗೆ ಇಮ್ರಾನ್ ವಿವರಣೆ ನೀಡಬೇಕು ಎಂದು ಶಾ ಒತ್ತಾಯಿಸಿದ್ದಾರೆ.

ಇಮ್ರಾನ್ ಖಾನ್ ಹೇಳಿಕೆಯ ಪ್ರಕಾರ, ಭಾರತದ ಜೊತೆ ಶಾಂತಿ ಮಾತುಕತೆಗೆ ತಯಾರಾಗಿದ್ದರಂತೆ. ಒಂದು ವೇಳೆ ಭಾರತ ಸೂಕ್ತ ಸಾಕ್ಷ್ಯವನ್ನು ಕೊಟ್ಟರೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಂದು ತಿಳಿಸಿದ್ದರು. ಆದರೆ ನಾನು ಒಂದು ಮಾತನ್ನು ಹೇಳುತ್ತೇನೆ, ಸಾಕ್ಷ್ಯ ನೀಡಿಕೆ ಬಗ್ಗೆ ನಂತರ ಮಾತನಾಡುವ, ಆದರೆ ಪುಲ್ವಾಮಾ ದಾಳಿ ಬಗ್ಗೆ ಎರಡು ಶಬ್ದವನ್ನೂ ಕೂಡಾ ಖಾನ್ ಯಾಕೆ ಮಾತನಾಡಿಲ್ಲ ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.

ಉಗ್ರರ ದಾಳಿಯನ್ನು ಖಂಡಿಸದ, ತಮ್ಮದೇ ನೆಲದಲ್ಲಿ ಅಟ್ಟಹಾಸಗೈಯುತ್ತಿರುವ ಉಗ್ರರ ಬಗ್ಗೆ ಕ್ರಮ ಕೈಗೊಳ್ಳದ ಪಾಕ್ ಪ್ರಧಾನಿ ಖಾನ್ ಮಾತನ್ನು ಹೇಗೆ ನಂಬುವುದು? ಅವರು ಮಾತನಾಡುವುದನ್ನು ನಾವು ಸುಮ್ಮನೆ ಕೇಳಿಸಿಕೊಳ್ಳಬೇಕೆ? ನಾವು ಕೂಡಾ ಅವರ ದೃಷ್ಟಿಕೋನವನ್ನು ವಿಮರ್ಶಿಸುವುದು ಬೇಡವೇ ಎಂದು ಶಾ ಖಡಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ