ಮಣಿಪುರ ಸುರಂಗ ನಿರ್ವಹಣೆಗೆ ಪ್ರಥಮ ಬಾರಿಗೆ AI ಬಳಸುವ ರೈಲ್ವೆ
Team Udayavani, May 19, 2018, 12:20 PM IST
ಹೊಸದಿಲ್ಲಿ : ಇದೇ ಮೊದಲ ಬಾರಿಗೆ ರೈಲ್ವೆ ಇಲಾಖೆ ಇಂಪಾಲದಲ್ಲಿನ 10.28 ಕಿ.ಮೀ. ಉದ್ದ ಸುರಂಗದ ನಿರ್ವಹಣೆ, ಮೇಲುಸ್ತುವಾರಿ, ವಾಯು ನಿಯಂತ್ರಣ ವ್ಯವಸ್ಥೆ, ಸಿಗ್ನಲ್ ವ್ಯವಸ್ಥೆ ಸೇರಿದಂತೆ ಹಲವು ಮುಖ್ಯ ಕೆಲಸಗಳಿಗೆ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ದಿಮತ್ತೆ) ಬಳಸಿಕೊಳ್ಳಲಿದೆ.
ಜಿರಿಬಾಮ್ನಿಂದ ಮಣಿಪುರ ರಾಜಧಾನಿಯನ್ನು ತಲುಪುವ 110 ಕಿ.ಮೀ. ಇಂಪಾಲ ರೈಲು ಮಾರ್ಗದಲ್ಲಿ ಈ ಸುದೀರ್ಘ ಸುರಂಗವಿದೆ.
ರೈಲ್ವೆ ಇಲಾಖೆ ಸುರಂಗ ನಿರ್ವಹಣೆಗೆ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ಮುಂದಾಗಿರುವುದು ಇದೇ ಪ್ರಥಮ. ಹಾಗಿದ್ದರು ರೈಲ್ವೇ ಇಲಾಖೆ ರಿಯಲ್ ಟೈಮ್ ನೆಲೆಯಲ್ಲಿ ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು, ಸಂಭಾವ್ಯ ದುರಂತಗಳನ್ನು, ವಿಳಂಬಗಳನ್ನು ಪತ್ತೆ ಹಚ್ಚುವುದಕ್ಕೆ ಮತ್ತು ಅವುಗಳನ್ನು ಕೂಡಲೇ ಸರಿಪಡಿಸುವುದಕ್ಕೆ ಕೃತಕ ಬುದ್ಧಿಮತ್ತೆಯನ್ನು ಈಗಾಗಲೇ ಬಳಸುತ್ತಿದೆ.