ಗಾರ್ಬಾಕ್ಕೆ ಬಂದಿದ್ದ ಹಿಂದೂಯೇತರರು ಪೊಲೀಸರ ವಶಕ್ಕೆ
Team Udayavani, Oct 2, 2022, 8:30 PM IST
ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಲಾಗಿದ್ದ ಗಾರ್ಬಾ ನೃತ್ಯ ಕಾರ್ಯಕ್ರಮಕ್ಕೆ ಮೂವರು ಹಿಂದೂಯೇತರ ಧರ್ಮದವರು ಗುರುತು ಮರೆಸಿಕೊಂಡು ಬಂದಿದ್ದು, ಅವರನ್ನು ಬಜರಂಗ ದಳದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೂವರು ವ್ಯಕ್ತಿಗಳು ಹಿಂದೂಗಳಲ್ಲ ಎಂದು ತಿಳಿದ ತಕ್ಷಣ ಅಲ್ಲಿದ್ದ ಜನರು ಅವರಿಗೆ ಥಳಿಸಲು ಮುಂದಾಗಿದ್ದಾರೆ.
ಬಜರಂಗದಳದ ಕಾರ್ಯಕರ್ತರು ಅವರನ್ನು ರಕ್ಷಿಸಿ, ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ. ಲವ್ ಜಿಹಾದ್ ಮಾಡಲೆಂದೇ ಇವರು ಕಾರ್ಯಕ್ರಮಕ್ಕೆ ಬಂದಿದ್ದಿರಬಹುದು ಎಂದು ಬಜರಂಗದಳ ಆರೋಪಿಸಿದೆ