ಮುಂಬೈ : ಬಾಯ್ಫ್ರೆಂಡ್ ಜತೆ ಪತ್ನಿ ಪರಾರಿ: ಪತಿ ದೂರು
Team Udayavani, Jan 18, 2021, 11:53 PM IST
ಥಾಣೆ: 35 ವರ್ಷದ ವಿವಾಹಿತೆ ತನ್ನ ಬಾಯ್ಫ್ರೆಂಡ್ ಜೊತೆ ಓಡಿಹೋದ ಘಟನೆ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಇಲ್ಲಿನ ಸಾಕಿ ನಾಕಾ ಪ್ರದೇಶದಲ್ಲಿ ನಾಲ್ವರು ಪುಟ್ಟ ಮಕ್ಕಳೊಂದಿಗೆ ವಾಸವಿದ್ದ ಮಹಿಳೆ, ತನ್ನ 5 ವರ್ಷದ ಮಗನೊಂದಿಗೆ ಓಡಿ ಹೋಗಿದ್ದಾಳೆ ಎಂದು ಕಲ್ಯಾಣ್ ಠಾಣಾ ಪೊಲೀಸರು ತಿಳಿಸಿದ್ದಾರೆ.
ಸೆಕ್ಯುರಿಟಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದ ಪತಿ, ಕೆಲವು ಸಂಬಂಧಿಕರ ಜತೆಗೆ ಶಿರಡಿಗೆ ತೆರಳಿದ್ದರು. ಮನೆಯಲ್ಲಿ ಪತ್ನಿ, ಮೂವರು ಹೆಣ್ಮಕ್ಕಳು ಮತ್ತು ಒಬ್ಬ ಮಗನ್ನು ಬಿಟ್ಟು ಹೋಗಿದ್ದರು.
ಮರುದಿನ ಪತಿ, ಮನೆಗೆ ಮರಳಿದಾಗ ಪತ್ನಿ ಮತ್ತು ಮಗ ನಾಪತ್ತೆಯಾದ ವಿಚಾರ ದೃಢಪಟ್ಟಿದೆ. ಮಗಳನ್ನು ಕೇಳಿದಾಗ ಆಕೆ, “ಅಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾಳೆ’ ಎಂದು ಹೇಳಿದ್ದಾಳೆ. ಆದರೆ, ಸಂಬಂಧಿಕರನ್ನು ವಿಚಾರಿಸಿದಾಗ ಪತ್ನಿ ಅಲ್ಲೂ ಇರಲಿಲ್ಲ. ನಂತರ ಬಾಯ್ಫ್ರೆಂಡ್ ಜತೆ ಆಕೆ ಓಡಿಹೋಗಿರುವ ವಿಚಾರ ತಿಳಿದು ಆತಂಕಗೊಂಡ ಪತಿ, ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಬಾಯ್ಫ್ರೆಂಡ್ ವಿರುದ್ಧ ಕಿಡ್ನ್ಯಾಪಿಂಗ್ ಕೇಸ್ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ