70,612 ಕೋ.ರೂ. ಆದಾಯ ತೆರಿಗೆ ರೀಫಂಡ್
Team Udayavani, Sep 13, 2021, 6:20 AM IST
ಹೊಸದಿಲ್ಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯು ಇದೇ ಎ. 1ರಿಂದ ಸೆ. 6ರ ನಡುವಣ ಅವಧಿಯಲ್ಲಿ 26.09 ಲಕ್ಷಕ್ಕೂ ಅಧಿಕ ತೆರಿಗೆದಾರರ 70,120 ಕೋ.ರೂ.ಗಳಿಗೂ ಅಧಿಕ ಆದಾಯ ತೆರಿಗೆ ರೀಫಂಡ್ ಮಾಡಿದೆ.
ಈ ಪೈಕಿ 24,70,612 ಆದಾಯ ತೆರಿಗೆ ಪ್ರಕರಣಗಳಲ್ಲಿ 16,753 ಕೋ.ರೂ. ಮತ್ತು 1,38,801 ಕಾರ್ಪೊರೇಟ್ ತೆರಿಗೆ ಪ್ರಕರಣಗಳಲ್ಲಿ 53,367 ಕೋ.ರೂ. ರೀಫಂಡ್ ಮಾಡಲಾಗಿದೆ ಎಂದು ಐಟಿ ಇಲಾಖೆ ಹೇಳಿದೆ.