ಚೀನ ಉತ್ಪನ್ನಗಳ ಆಮದು ತೆರಿಗೆ ಹೆಚ್ಚಳ?
Team Udayavani, Aug 12, 2020, 5:59 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಚೀನದ ಮೇಲೆ ಭಾರತ ತನ್ನ ಆರ್ಥಿಕ ನಿರ್ಬಂಧಗಳ ಅಸ್ತ್ರವನ್ನು ತೀವ್ರಗೊಳಿಸುತ್ತಿದೆ. ಚೀನದಿಂದ ಆಮದಾಗುವ 20 ಉತ್ಪನ್ನಗಳ ಮೇಲಿನ ಸೀಮಾ ಸುಂಕ ಹೆಚ್ಚಿಸುವ ಬಗ್ಗೆ ಕೇಂದ್ರ ಸರಕಾರ ಚಿಂತಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಸೀಮಾ ಸುಂಕ ಹೆಚ್ಚಳಗೊಳ್ಳುವ ಉತ್ಪನ್ನಗಳಲ್ಲಿ ಲ್ಯಾಪ್ಟಾಪ್ಗಳು, ಕೆಮರಾಗಳು, ಜವುಳಿ ಕೂಡ ಸೇರಿವೆ. ಅಲ್ಯುಮಿನಿಯಂ, ಉಕ್ಕು ಉತ್ಪನ್ನಗಳ ಆಯಾತಕ್ಕೆ ಪರವಾನಿಗೆ ಕಡ್ಡಾಯಗೊಳಿಸುವ ನಿಯಮ ಜಾರಿಗೆ ಕೇಂದ್ರ ಚಿಂತಿಸಿದೆ ಎನ್ನಲಾಗಿದೆ.
ಈ ಕ್ರಮದಿಂದ ಚೀನದಿಂದ ಆಮದಾಗುತ್ತಿರುವ ವಸ್ತುಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಮೂಲಗಳು ಹೇಳಿವೆ. ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡುವ ಉದ್ದೇಶವೂ ಇದರ ಹಿಂದಿದೆ.
ಕೆಲವು ದಿನಗಳಿಂದ ತಾನು ಮುಕ್ತ ವ್ಯಾಪಾರ ಒಪ್ಪಂದ ಹೊಂದಿರುವ ರಾಷ್ಟ್ರಗಳಿಂದ ಆಮದು ಪ್ರಮಾಣ ಹೆಚ್ಚಾಗಿರುವುದನ್ನು ಭಾರತ ಗಮನಿಸಿದೆ. ಚೀನವು ಈ ದೇಶಗಳಿಂದ ತನ್ನ ವಸ್ತುಗಳನ್ನು ಭಾರತಕ್ಕೆ ಕಳುಹಿಸುತ್ತಿರುವ ಸುಳಿವು ಸರಕಾರಕ್ಕೆ ಸಿಕ್ಕಿದೆ. ಆದ್ದರಿಂದಲೇ ಹಂತಹಂತವಾಗಿ ವಿವಿಧ ರೀತಿಯ ನಿರ್ಬಂಧಗಳನ್ನು ಹೇರಲು ಆರಂಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ