ಪಾಕ್ ಮೇಲೆ ವಾಯು ದಾಳಿ: ವಿದೇಶಿ ರಾಯಭಾರಿಗಳಿಗೆ ಭಾರತ ಮಾಹಿತಿ
Team Udayavani, Feb 26, 2019, 11:40 AM IST
ಹೊಸದಿಲ್ಲಿ : ಪಾಕಿಸ್ಥಾನದಲ್ಲಿನ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಬೃಹತ್ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಇಂದು ಮಂಗಳವಾರ ನಡೆಸಿದ ಪ್ರಬಲ ವಾಯು ದಾಳಿಯ ಮಾಹಿತಿಯನ್ನು ಭಾರತ ಎಲ್ಲ ಪ್ರಮುಖ ದೇಶಗಳ ರಾಯಭಾರಿಗಳಿಗೆ ನೀಡಿತೆಂದು ಅಧಿಕೃತ ಮೂಲಗಳು ತಿಳಿಸಿವೆ.
ವಿದೇಶ ಕಾರ್ಯದರ್ಶಿ ವಿಜಯ್ ಗೋಖಲೆ ಮತ್ತು ಇತರ ಕಾರ್ಯದರ್ಶಿಗಳು, ಅಮೆರಿಕ, ರಶ್ಯ, ಚೀನ, ಫ್ರಾನ್ಸ್ ಮತ್ತು ಬ್ರಿಟನ್ ಸೇರಿದಂತೆ ಎಲ್ಲ ಪ್ರಮುಖ ದೇಶಗಳ ರಾಯಭಾರಿಗಳಿಗೆ ಭಾರತೀಯ ವಾಯು ಪಡೆಯ ವೈಮಾನಿಕ ದಾಳಿಯ ವಿವರಗಳನ್ನು ನೀಡಿದರು.
ಶ್ರೀಲಂಕಾ, ಮಾಲ್ದೀವ್ಸ್, ಅಫ್ಘಾನಿಸ್ಥಾನ, ಭೂತಾನ್, ಟರ್ಕಿ ಮತ್ತು ಇಂಡೋನೇಶ್ಯ ರಾಯಭಾರಿಗಳಿಗೂ ವಾಯು ದಾಳಿಯ ಮಾಹಿತಿ ನೀಡಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್