ಯಾವುದೇ ಭದ್ರತಾ ಸವಾಲು ಎದುರಿಸಲು ಭಾರತ ಸಿದ್ದ; ಪ್ರಧಾನಿ ಮೋದಿ

Team Udayavani, Aug 15, 2017, 11:48 AM IST

ಹೊಸದಿಲ್ಲಿ : ನೆಲ, ಜಲ, ವಾಯು ಮಾರ್ಗದ ಮೂಲಕ ಎದುರಾಗಬಲ್ಲ ಯಾವುದೇ ರೀತಿಯ ಭದ್ರತಾ ಸವಾಲುಗಳನ್ನು ಎದುರಿಸಲು ಭಾರತ ಸರ್ವಶಕ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಚೀನವನ್ನಾಗಲೀ, ಡೋಕ್‌ಲಾಂ ನಲ್ಲಿ ಸಾಗಿರುವ ಉಭಯ ದೇಶಗಳ ಸೇನೆಯ ಮುಖಾಮುಖೀಯನ್ನಾಗಲೀ, ನೇರವಾಗಿ ಪ್ರಸ್ತಾವಿಸದೆ, ಪ್ರಧಾನಿ ಮೋದಿ, ದೇಶದ ಭದ್ರತೆಯು ಸರಕಾರದ ಅದ್ಯತೆಯಾಗಿದೆ; ಅಂತೆಯೇ ಸರಕಾರ ತನ್ನ ಯೋಧರನ್ನು ಪರಿಣಾಮಕಾರಿ ಗಡಿ ರಕ್ಷಣೆಗಾಗಿ ನಿಯೋಜಿಸಿದೆ ಎಂದು ಹೇಳಿದರು. 

ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡುತ್ತಾ ಪ್ರಧಾನಿ ಮೋದಿ ಅವರು, ಕಳೆದ ವರ್ಷಸೇನೆ ಕೈಗೊಂಡಿದ್ದ ಸರ್ಜಿಕಲ್‌ ದಾಳಿಯನ್ನು ಉಲ್ಲೇಖೀಸಿ ಇಡಿಯ ವಿಶ್ವವೇ ಭಾರತೀಯ ಸೇನೆಯ ಕ್ಷಮತೆ ಮತ್ತು ತಾಕತ್ತು ಏನೆಂಬುದನ್ನು ಅರಿತುಕೊಂಡಿದೆ ಎಂದು ಹೇಳಿದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ