ಉತ್ತಮ ಬಾಂಧವ್ಯ ಪಾಕಿಸ್ತಾನ ಕ್ಕೆ ಬಿಟ್ಟಿದ್ದು: ಸಚಿವ ಮುರಳೀಧರನ್‌

ನೆರವು ನೀಡುವ ಕಾರಣ ಭಯೋತ್ಪಾದನಾ ಧನ ಸಹಾಯ ನಿಗ್ರಹ ಪಡೆ ಪಾಕಿಸ್ತಾನವನ್ನು ಗ್ರೇ ಲಿಸ್ಟ್‌ ನಲ್ಲಿ ಇರಿಸಿದೆ

Team Udayavani, Sep 18, 2020, 3:33 PM IST

ಉತ್ತಮ ಬಾಂಧವ್ಯ ಪಾಕಿಸ್ತಾನ ಕ್ಕೆ ಬಿಟ್ಟಿದ್ದು: ಸಚಿವ ಮುರಳೀಧರನ್‌

ನವದೆಹಲಿ:ಭಾರತದ ಜತೆಗೆ ಉತ್ತಮ ಬಾಂಧವ್ಯ ಹೊಂದಬೇಕೇ, ಬೇಡವೇ ಎನ್ನುವುದು ಪಾಕಿಸ್ತಾನ ಸರ್ಕಾರಕ್ಕೆ ಬಿಟ್ಟಿದ್ದು. ಉಗ್ರವಾದ, ಹಿಂಸೆ ಮುಕ್ತ ವಾತಾವರಣದಲ್ಲಿ ಮಾತ್ರವೇ ಶಾಂತಿ ಮಾತುಕತೆ ಸಾಧ್ಯ ಎಂದು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಗೆ ತಿಳಿಸಿದೆ.

ಪಾಕಿಸ್ತಾನದ ಬಗ್ಗೆ ಸರ್ಕಾರ ಹೊಂದಿರುವ ನಿರ್ಣಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀ ಧರನ್‌, ಪ್ರಾದೇಶಿಕ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ನಡೆಸುತ್ತಿರುವ ಪ್ರಚೋದನಾಕಾರಿ ಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಲಾಗುತ್ತಿದೆ.

ಭಾರತದ ನಿರಂತರ ಪ್ರಯತ್ನದಿಂದಲೇ ಜಮಾತ್‌ ಉದ್‌-ದಾವಾ, ಲಷ್ಕರ್‌-ಎ-ತೊಯ್ಬಾ, ಜೈಶ್‌-ಎ-ಮೊಹಮ್ಮದ್‌, ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಗಳ ವಿರುದ್ಧ ಜಗತ್ತಿನ ರಾಷ್ಟ್ರಗಳು ಪ್ರಬಲವಾಗಿ ಧ್ವನಿ ಎತ್ತುವಂತಾಯಿತು. ಉಗ್ರ ಸಂಘಟನೆಗಳಿಗೆ ವಿತ್ತೀಯ ನೆರವು ನೀಡುವ ಕಾರಣ ಭಯೋತ್ಪಾದನಾ ಧನ ಸಹಾಯ ನಿಗ್ರಹ ಪಡೆ ಪಾಕಿಸ್ತಾನವನ್ನು ಗ್ರೇ ಲಿಸ್ಟ್‌ ನಲ್ಲಿ ಇರಿಸಿದೆ ಎಂದರು.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಗೌರವಾರ್ಥ ಅಮೆರಿಕದ ಹ್ಯೂಸ್ಟನ್‌ನಲ್ಲಿ ಆಯೋಜಿಸಲಾಗಿದ್ದ “ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಸರ್ಕಾರದ ವತಿಯಿಂದ ವೆಚ್ಚ ಮಾಡಲಾಗಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿದರು.

ಗಿಲ್ಗಿಟ್‌- ಬಾಲ್ಟಿಸ್ತಾನ್‌ “ಪೂರ್ಣ ಪ್ರಮಾಣದ ಪ್ರಾಂತ್ಯ’?
ಗಿಲ್ಗಿಟ್‌- ಬಾಲ್ಟಿಸ್ತಾನ್‌ಗಳು ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಕೇಂದ್ರಾಡಳಿತ ಪ್ರದೇಶಕ್ಕೆ ಒಳಪಟ್ಟಿದ್ದು, ದೇಶದ ಅವಿಭಾಜ್ಯ ಅಂಗ ಎಂದು ಭಾರತ ಹೇಳಿಕೊಂಡು ಬರುತ್ತಿದ್ದರೂ, ಪಾಕ್‌ ಭಿನ್ನರಾಗ ಎತ್ತಿದೆ.

ಗಿಲ್ಗಿಟ್‌- ಬಾಲ್ಟಿಸ್ತಾನ್‌ಗಳನ್ನು ಪೂರ್ಣ ಪ್ರಮಾಣದ ಪಾಂತ್ಯ ಎಂದು ಘೋಷಿಸಲು ಪಾಕ್‌ ಸರ್ಕಾರ ಸಕಲ ತಯಾರಿ ಆರಂಭಿಸಿದೆ.ಪಾಕ್‌ ಆಕ್ರಮಿತ ಗಿಲ್ಗಿಟ್‌-ಬಾಲ್ಟಿಸ್ತಾನ್‌ಗೆ ಪ್ರಧಾನಿ ಇಮ್ರಾನ್‌ ಖಾನ್‌ ಶೀಘ್ರವೇ ಭೇಟಿ ನೀಡಲಿದ್ದಾರೆ.

ಎಲ್ಲ ಸಾಂವಿಧಾನಿಕ ಹಕ್ಕುಗಳನ್ನೊಳಗೊಂಡಂತೆ ಪೂರ್ಣ ಪ್ರಮಾಣದ ಪ್ರಾಂತ್ಯವೆಂದು ಘೋಷಿಸಲಿದ್ದಾರೆ ಎಂದು ಕಾಶ್ಮೀರ ಮತ್ತು ಗಿಲ್ಗಿಟ್‌- ಬಾಲ್ಟಿಸ್ತಾನ್‌ ವ್ಯವಹಾರ ಸಚಿವ ಅಲಿ ಅಮಿನ್‌ ಗಂದಾಪುರ್‌ ತಿಳಿಸಿದ್ದಾರೆ. ಗಿಲ್ಗಿಟ್‌- ಬಾಲ್ಟಿಸ್ತಾನ್‌ನ ಬೇಡಿಕೆಗೆ ತಕ್ಕಂತೆ ಆ ಭಾಗದಲ್ಲಿ ರಾಷ್ಟ್ರೀಯ ಅಸೆಂಬ್ಲಿ ಮತ್ತು ಸಂಸದ ಕ್ಷೇತ್ರಗಳನ್ನು ರಚಿಸಲಾಗುತ್ತದೆ. ಸಾಂವಿಧಾನಿಕ ಹಕ್ಕುಗಳ ಅಡಿಯಲ್ಲಿ ಸಮರ್ಪಕ ಪ್ರಾತಿನಿಧ್ಯ ನೀಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಟಾಪ್ ನ್ಯೂಸ್

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

subhash chandra bose

ನೇತಾಜಿ ಸುಭಾಷ್‌ ಚಂದ್ರ ಭೋಸ್ ಪ್ರೇರಣಾತ್ಮಕ ನುಡಿಗಳು

goa

ಗೋವಾದಲ್ಲಿ ಶಾಸಕರು ಪಕ್ಷ ಬದಲಾಯಿಸಿದ್ದು ಭಾರತದಲ್ಲೇ ದಾಖಲೆ !

netaji subhash chandra bose

ಸುಭಾಷ್‌ ಚಂದ್ರ ಬೋಸ್‌.. ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಶಕ್ತಿ

15forest

ಸಾಗರ: ಅಪಘಾತದಲ್ಲಿ ಗಾಯಗೊಂಡಿದ್ದ ಅರಣ್ಯಾಧಿಕಾರಿ ಸಾವು

21ನೇ ಶತಮಾನದಲ್ಲೂ ಪ್ರಸ್ತುತ ನೇತಾಜಿ ವಿಚಾರಧಾರೆಗಳು 

21ನೇ ಶತಮಾನದಲ್ಲೂ ಪ್ರಸ್ತುತ ನೇತಾಜಿ ವಿಚಾರಧಾರೆಗಳು ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dsadsar3r

ಪಾರ್ಸೇಕರ್, ಪರ್ರಿಕರ್ ನಿರ್ಣಯದಿಂದ ಗೋವಾ ಬಿಜೆಪಿಗೆ ಪರಿಣಾಮವಿಲ್ಲ: ತಾನಾವಡೆ

ಗೋವಾ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಗೆ ಆಲ್ ಇಂಡಿಯಾ ರಿಪಬ್ಲಿಕನ್ ಪಾರ್ಟಿ ಬೆಂಬಲ

ಗೋವಾ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಗೆ ಆಲ್ ಇಂಡಿಯಾ ರಿಪಬ್ಲಿಕನ್ ಪಾರ್ಟಿ ಬೆಂಬಲ

1-ffa

ಬಿಹಾರದ ಶಾಲೆಯಲ್ಲಿ ಹುಡುಗರಿಗೂ ‘ಸ್ಯಾನಿಟರಿ ನ್ಯಾಪ್ಕಿನ್’ ವಿತರಣೆ !

aravind

ದೆಹಲಿ ಸಚಿವರನ್ನು ಬಂಧಿಸಲು ಇಡಿ ಸಿದ್ಧತೆ : ಕೇಜ್ರಿವಾಲ್ ಆಕ್ರೋಶ

1-sadsdsa

ಕೋಲ್ಕತಾ : ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

MUST WATCH

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

udayavani youtube

ಶೃಂಗೇರಿ ಮಠದ ಆವರಣದಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ

ಹೊಸ ಸೇರ್ಪಡೆ

18land

ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಭೂಮಿಪೂಜೆ

ಹಿರಿಯರ ದಿನಚರಿಯಲ್ಲಿ ಸಾಮಾಜಿಕ ಚಟುವಟಿಕೆಯ ಮಹತ್ವ

ಹಿರಿಯರ ದಿನಚರಿಯಲ್ಲಿ ಸಾಮಾಜಿಕ ಚಟುವಟಿಕೆಯ ಮಹತ್ವ

ಕೋವಿಡ್‌-19ನಿಂದ ಚೇತರಿಸಿಕೊಂಡ ಬಳಿಕ ಹಲ್ಲುಜ್ಜುವ ಬ್ರಶ್‌ ಯಾಕೆ ಬದಲಾಯಿಸಬೇಕು?

ಕೋವಿಡ್‌-19ನಿಂದ ಚೇತರಿಸಿಕೊಂಡ ಬಳಿಕ ಹಲ್ಲುಜ್ಜುವ ಬ್ರಶ್‌ ಯಾಕೆ ಬದಲಾಯಿಸಬೇಕು?

17road

ಚತುಷ್ಪಥಕ್ಕಾಗಿ ಕೇಂದ್ರ ಸಚಿವರಿಗೆ ಮನವಿ: ಬೆಳ್ಳುಬ್ಬಿ

1-dsa

ರಿಜ್ವಾನ್,ಬ್ಯೂಮಾಂಟ್ ಐಸಿಸಿ 2021 ವರ್ಷದ ಟಿ 20 ಶ್ರೇಷ್ಠ ಆಟಗಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.