ಭಾರತ-ಫ್ರಾನ್ಸ್ ಗಗನಯಾನ ಕಾರ್ಯ ತಂಡ ಪ್ರಕಟ
Team Udayavani, Sep 6, 2018, 12:00 PM IST
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದ್ದ ಇಸ್ರೋ ದ ಪ್ರಥಮ ಮಾನವ ಬಾಹ್ಯಾಕಾಶ ಅಭಿಯಾನದ ಅಂಗವಾಗಿ ಭಾರತ ಮತ್ತು ಫ್ರಾನ್ಸ್ ಇಂದು ಗುರುವಾರ “ಗಗನಯಾನ’ ಕಾರ್ಯ ತಂಡವನ್ನು ಪ್ರಕಟಿಸಿವೆ.
ಬೆಂಗಳೂರು ಸ್ಪೇಸ್ ಎಕ್ಸ್ಪೋ ಆರನೇ ಆವೃತ್ತಿಯ ಸಂದರ್ಭದಲ್ಲಿ ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಜೀನ್ ವೇಸ್ ಲೀ ಗಾಲ್ ಅವರು ಗಗನಯಾನ ಕಾರ್ಯ ತಂಡವನ್ನು ಪ್ರಕಟಿಸಿದರು.
2022ರೊಳಗೆ ಭಾರತವು ಮೂವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯನ್ನು ಹೊಂದಿದೆ.