Udayavni Special

ಧೂಳಿನ ಬಿರುಗಾಳಿಗೆ 109 ಮಂದಿ ಸಾವು

Team Udayavani, May 4, 2018, 5:40 AM IST

Storm-4-5.jpg

ಹೊಸದಿಲ್ಲಿ: ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳ ಹಲವು ಭಾಗಗಳಲ್ಲಿ ಬುಧವಾರ ಸಂಜೆಯಿಂದ ಬೀಸಿದ ಧೂಳುಮಿಶ್ರಿತ ಬಿರುಗಾಳಿಯಲ್ಲಿ ಕನಿಷ್ಠ 109 ಮಂದಿ ಅಸುನೀಗಿ, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬಿರುಗಾಳಿಯ ತೀವ್ರತೆಗೆ ಎರಡೂ ರಾಜ್ಯಗಳಲ್ಲಿ ಮನೆ, ಕಟ್ಟಡಗಳು ಕುಸಿದು ಬಿದ್ದಿದ್ದು, ನೂರಾರು ಮರಗಳು ಧರೆಗುರುಳಿವೆ. ವಿದ್ಯುತ್‌, ದೂರವಾಣಿ ಕಂಬಗಳು ಮುರಿದು ಬಿದ್ದಿವೆ. ಇದರಿಂದ ಪಂಜಾಬ್‌, ಹರಿಯಾಣ, ಮಧ್ಯಪ್ರದೇಶಗಳ ಕೆಲವು ಭಾಗಗಳಲ್ಲಿ ವಿದ್ಯುತ್‌ ಪೂರೈಕೆಗೆ ತೊಂದರೆಯಾಗಿದೆ.

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಬುಧವಾರ ಸಂಜೆ 6.30ರ ಬಳಿಕ ಬಿರುಗಾಳಿ ಬೀಸಲಾರಂಭಿಸಿತು. ಆರಂಭದಲ್ಲಿ ಅದು ಅಷ್ಟೊಂದು ತೀವ್ರವಾಗಿರಲಿಲ್ಲ. ಸಮಯ ಕಳೆದಂತೆ ಅದು ಬಿರುಸಾಗತೊಡಗಿತು. ಗಾಳಿಯ ಜತೆಗೆ ಕೆಲವು ಸ್ಥಳಗಳಲ್ಲಿ ಗುಡುಗು ಸಿಡಿಲಿನಿಂದ ಕೂಡಿ ಧಾರಾಕಾರ ಮಳೆಯೂ ಸುರಿದಿದೆ. ಇದರ ಜತೆಗೆ ಆಲಿಕಲ್ಲು ಮಳೆಯೂ ಆಗಿದೆ. ಹೀಗಾಗಿ 10 ಜಿಲ್ಲೆಗಳಲ್ಲಿ ಒಟ್ಟು 64 ಮಂದಿ ಅಸುನೀಗಿದ್ದರೆ, 47 ಮಂದಿ ಗಾಯಗೊಂಡಿದ್ದಾರೆ. ಆಗ್ರಾ ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಅಂದರೆ 36 ಮಂದಿ ಅಸುನೀಗಿ, 35 ಮಂದಿ ಗಾಯಗೊಂಡಿದ್ದಾರೆ. ಇದರ ಜತೆಗೆ ಇತರ 9 ಜಿಲ್ಲೆಗಳಲ್ಲಿ ಕೂಡ ಗಮನಾರ್ಹ ಹಾನಿ ಉಂಟಾಗಿದೆ. ಕರ್ನಾಟಕ ಚುನಾವಣ ಪ್ರಚಾರದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮುಖ್ಯ ಕಾರ್ಯದರ್ಶಿ ಜತೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಕೂಡ ಬಿರುಗಾಳಿ ಆರ್ಭಟಿಸಿದೆ. ಮನೆಗಳ ಛಾವಣಿ ಹಾರಿಹೋಗಿವೆ. ಹಲವು ಮನೆಗಳು ಕುಸಿದು ಬಿದ್ದಿವೆ.

ರಾಜಸ್ಥಾನ 33 ಮಂದಿ ಸಾವು

ರಾಜಸ್ಥಾನದ ಮೂರು ಜಿಲ್ಲೆಗಳಲ್ಲಿ ಬೀಸಿದ ಗಾಳಿಯಿಂದಾಗಿ 33 ಮಂದಿ ಅಸುನೀಗಿ, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಧೋಲ್ಪುರ, ಭರತ್‌ಪುರ, ಅಲ್ವಾರ್‌ ಹಾನಿಗೀಡಾದ ಜಿಲ್ಲೆಗಳು. ಮುಖ್ಯಮಂತ್ರಿ ವಸುಂಧರಾ ರಾಜೆ ಟ್ವೀಟ್‌ ಮಾಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲು ಸೂಚನೆ ನೀಡಿದ್ದಾರೆ. ಭರತ್‌ಪುರದಲ್ಲಿ 12 ಮಂದಿ ಸಾವಿಗೀಡಾಗಿದ್ದಾರೆ.

ಮತ್ತೂಂದು ಬಿರುಗಾಳಿ?
ಭಾರತೀಯ ಹವಾಮಾನ ಇಲಾಖೆ ಗುರುವಾರ ಹೊರಡಿಸಿರುವ ಮತ್ತೂಂದು ಎಚ್ಚರಿಕೆಯ ಪ್ರಕಾರ, ಮುಂದಿನ 48 ಗಂಟೆಗಳ ಒಳಗಾಗಿ ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿ ಮತ್ತೂಂದು ಧೂಳಿನ ಬಿರುಗಾಳಿ ಬೀಸಲಿದೆ. ಉ.ಪ್ರ., ರಾಜಸ್ಥಾನದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಪ್ರಧಾನಿ ಸಂತಾಪ

ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಧೂಳಿನ ಬಿರುಗಾಳಿಯಿಂದ 109 ಮಂದಿ ಅಸುನೀಗಿದ ಬಗ್ಗೆ ಪ್ರಧಾನಿ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಧೂಳಿನ ಬಿರುಗಾಳಿಯಿಂದ ಸಾವು ನೋಟು ಉಂಟಾದ ಬಗ್ಗೆ ದುಃಖವಿದೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ. ಅಗಲಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಕಾರಣವೇನು?
– ಅತ್ಯಂತ ಹೆಚ್ಚಿನ ಪ್ರಮಾಣದ ತಾಪಮಾನ ಹಾಗೂ ಪಶ್ಚಿಮ ಭಾಗದಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ ಉಂಟಾದ ಬಿರುಗಾಳಿ, ತೇವಾಂಶ ಧೂಳಿನ ಬಿರುಗಾಳಿಗೆ ಕಾರಣವಾಗಿದೆ ಎನ್ನುತ್ತಾರೆ ಭಾರತೀಯ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ಕುಲದೀಪ್‌ ಶ್ರೀವಾಸ್ತವ

– ರಾಜಸ್ಥಾನದ ಕೆಲ ಭಾಗಗಳಲ್ಲಿನ ಗರಿಷ್ಠ ಉಷ್ಣತೆ 45 ಡಿಗ್ರಿ ಸೆಲ್ಷಿಯಸ್‌ ವರೆಗೆ ತಲುಪಿತ್ತು. ಹೀಗಾಗಿ ಅಲ್ಲಿನ ಉತ್ತರ ಭಾಗದಲ್ಲಿ ಒಂದು ರೀತಿಯ ಒತ್ತಡದ ವಾತಾವರಣ ಕಂಡುಬಂದಿತ್ತು. 

– ಹೆಚ್ಚಿನ ಪ್ರಮಾಣದ ತಾಪಮಾನ ತೇವಾಂಶ ಹೆಚ್ಚಾಗುವಂತೆ ಮಾಡುತ್ತದೆ. ಇದರ ಜತೆಗೆ ಮೋಡಗಳಿಂದಾಗಿ ಧಾರಾಕಾರ ಮಳೆ ಮತ್ತು ಬಿರುಗಾಳಿ ಉಂಟಾಗುತ್ತವೆ.

– ಏಕಾಏಕಿ ಈ ರೀತಿ ಉಂಟಾಗುತ್ತದೆ ಎನ್ನುತ್ತಾರೆ ಸ್ಕೈಮೆಟ್‌ ಹವಾಮಾನ ಸಂಸ್ಥೆಯ ಮುಖ್ಯ ಹವಾಮಾನ ತಜ್ಞ ಮಹೇಶ್‌ ಪಲಾವಟ್‌.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿಚಾರಣೆಗೆ ಕರೆದಿದ್ದಾರಷ್ಟೇ, ನಾನು ಅಪರಾಧಿಯಲ್ಲ: ಸಿಸಿಬಿ ವಿಚಾರಣೆಗೆ ಮಂಗಳೂರಿನತ್ತ ಅನುಶ್ರೀ

ವಿಚಾರಣೆಗೆ ಕರೆದಿದ್ದಾರಷ್ಟೇ, ನಾನು ಅಪರಾಧಿಯಲ್ಲ: ಸಿಸಿಬಿ ವಿಚಾರಣೆಗೆ ಮಂಗಳೂರಿನತ್ತ ಅನುಶ್ರೀ

ಮಾರುಕಟ್ಟೆಗೆ ಬಂದ ರೈತರನ್ನು ಹೊರಹಾಕಿದ ಪೊಲೀಸರು! ರೈತರ ಹೋರಾಟದಲ್ಲಿ ರೈತರಿಗೆ ಸಂಕಷ್ಟ!

ಮಾರುಕಟ್ಟೆಗೆ ಬಂದ ರೈತರನ್ನು ಹೊರಹಾಕಿದ ಪೊಲೀಸರು! ರೈತರ ಹೋರಾಟದಲ್ಲಿ ರೈತರಿಗೆ ಸಂಕಷ್ಟ!

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

ಚೀನ ಸೇನೆ ಕಾಲ್ತೆಗೆಯುವ ತನಕ ಹೆಜ್ಜೆ ಹಿಂದಿಡಲ್ಲ: ಭಾರತ ಪಟ್ಟು

ಚೀನ ಸೇನೆ ಕಾಲ್ತೆಗೆಯುವ ತನಕ ಹೆಜ್ಜೆ ಹಿಂದಿಡಲ್ಲ: ಭಾರತ ಪಟ್ಟು

IPL 2020: ಇಂದು ಡೆಲ್ಲಿ- ಚೆನ್ನೈಕದನ ಕುತೂಹಲ

IPL 2020: ಇಂದು ಡೆಲ್ಲಿ- ಚೆನ್ನೈಕದನ ಕುತೂಹಲ

ಕಳೆದುಕೊಳ್ಳುವುದರಲ್ಲಿ ಸಂತೋಷವೇ ದೊಡ್ಡದು!

ಕಳೆದುಕೊಳ್ಳುವುದರಲ್ಲಿ ಸಂತೋಷವೇ ದೊಡ್ಡದು!

ಚಿಂತನೆ: ಕೃಷಿ ಕ್ಷೇತ್ರದ ಬಂಧನವೋ ಸುಧಾರಣೆಯೋ?

ಚಿಂತನೆ: ಕೃಷಿ ಕ್ಷೇತ್ರದ ಬಂಧನವೋ ಸುಧಾರಣೆಯೋ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

ಚೀನ ಸೇನೆ ಕಾಲ್ತೆಗೆಯುವ ತನಕ ಹೆಜ್ಜೆ ಹಿಂದಿಡಲ್ಲ: ಭಾರತ ಪಟ್ಟು

ಚೀನ ಸೇನೆ ಕಾಲ್ತೆಗೆಯುವ ತನಕ ಹೆಜ್ಜೆ ಹಿಂದಿಡಲ್ಲ: ಭಾರತ ಪಟ್ಟು

ಶಿಸ್ತಿನ ಜೀವನದಿಂದ ಫಿಟ್ನೆಸ್‌ ಸಾಧನೆ: ‘Fit India Dialogue’ ಹೆಸರಲ್ಲಿ ಮೋದಿ ಸಂವಾದ

ಶಿಸ್ತಿನ ಜೀವನದಿಂದ ಫಿಟ್ನೆಸ್‌ ಸಾಧನೆ: ‘Fit India Dialogue’ ಹೆಸರಲ್ಲಿ ಮೋದಿ ಸಂವಾದ

500ರೂ. ಕಳ್ಳತನ ಮಾಡಿದ್ದಾನೆ ಎಂದು ಸ್ನೇಹಿತನ ತಾಯಿಯೇ 14ವರ್ಷದ ಹುಡುಗನನ್ನು ಹೊಡೆದು ಕೊಂದಳು

500ರೂ. ಕಳ್ಳತನ ಮಾಡಿದ್ದಾನೆ ಎಂದು ಸ್ನೇಹಿತನ ತಾಯಿಯೇ 14ವರ್ಷದ ಹುಡುಗನನ್ನು ಹೊಡೆದು ಕೊಂದಳು

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಆರೋಗ್ಯ ಸ್ಥಿತಿ ಗಂಭೀರ: ICUಗೆ ದಾಖಲು

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಆರೋಗ್ಯ ಸ್ಥಿತಿ ಗಂಭೀರ: ICUಗೆ ದಾಖಲು

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavaniಹೊಸ ಸೇರ್ಪಡೆ

ವಿಚಾರಣೆಗೆ ಕರೆದಿದ್ದಾರಷ್ಟೇ, ನಾನು ಅಪರಾಧಿಯಲ್ಲ: ಸಿಸಿಬಿ ವಿಚಾರಣೆಗೆ ಮಂಗಳೂರಿನತ್ತ ಅನುಶ್ರೀ

ವಿಚಾರಣೆಗೆ ಕರೆದಿದ್ದಾರಷ್ಟೇ, ನಾನು ಅಪರಾಧಿಯಲ್ಲ: ಸಿಸಿಬಿ ವಿಚಾರಣೆಗೆ ಮಂಗಳೂರಿನತ್ತ ಅನುಶ್ರೀ

ಶೀಘ್ರ ವಿಕಿಪೀಡಿಯಾ ಬದಲು: ಹೊಸ ಡಿಸೈನ್ ನಲ್ಲಿ ಬರಲಿದೆ ವಿಕಿಪೀಡಿಯಾ

ಶೀಘ್ರ ವಿಕಿಪೀಡಿಯಾ ಬದಲು: ಹೊಸ ಡಿಸೈನ್ ನಲ್ಲಿ ಬರಲಿದೆ ವಿಕಿಪೀಡಿಯಾ

ಮಾರುಕಟ್ಟೆಗೆ ಬಂದ ರೈತರನ್ನು ಹೊರಹಾಕಿದ ಪೊಲೀಸರು! ರೈತರ ಹೋರಾಟದಲ್ಲಿ ರೈತರಿಗೆ ಸಂಕಷ್ಟ!

ಮಾರುಕಟ್ಟೆಗೆ ಬಂದ ರೈತರನ್ನು ಹೊರಹಾಕಿದ ಪೊಲೀಸರು! ರೈತರ ಹೋರಾಟದಲ್ಲಿ ರೈತರಿಗೆ ಸಂಕಷ್ಟ!

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್: ರಾಜ್ಯದಲ್ಲಿ ಹೆದ್ದಾರಿ ತಡೆ, ಜೈಲ್ ಭರೋ ಚಳವಳಿ

ಚೀನ ಸೇನೆ ಕಾಲ್ತೆಗೆಯುವ ತನಕ ಹೆಜ್ಜೆ ಹಿಂದಿಡಲ್ಲ: ಭಾರತ ಪಟ್ಟು

ಚೀನ ಸೇನೆ ಕಾಲ್ತೆಗೆಯುವ ತನಕ ಹೆಜ್ಜೆ ಹಿಂದಿಡಲ್ಲ: ಭಾರತ ಪಟ್ಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.