ಮೊದಲ ರಫೇಲ್‌ ವಿಮಾನ ಪಡೆದ ಭಾರತ

Team Udayavani, Sep 21, 2019, 5:00 AM IST

ಹೊಸದಿಲ್ಲಿ: ಫ್ರಾನ್ಸ್‌ನಿಂದ ಖರೀದಿಸಲಾದ 36 ರಫೇಲ್‌ ಯುದ್ಧ ವಿಮಾನಗಳ ಪೈಕಿ ಮೊದಲ ವಿಮಾನವನ್ನು ಭಾರತ ಸ್ವೀಕರಿಸಿದೆ. ಗುರುವಾರ ಫ್ರಾನ್ಸ್‌ಗೆ ತೆರಳಿದ್ದ ಡೆಪ್ಯುಟಿ ಚೀಫ್ ಏರ್‌ ಮಾರ್ಷಲ್‌ ಚೌಧರಿ, ರಫೇಲ್‌ ಯುದ್ಧವಿಮಾನವನ್ನು ಅಧಿಕೃತವಾಗಿ ಸ್ವೀಕರಿಸಿದ್ದಾರೆ.

ಈ ವಿಮಾನವನ್ನು ಆರ್‌ಬಿ01 ಎಂದು ಕರೆಯಲಾಗಿದ್ದು, ಏರ್‌ ಮಾರ್ಷಲ್‌ ಆರ್‌.ಕೆ.ಎಸ್‌ ಭದೌರಿಯಾ ಸಹಿಯನ್ನು ಒಳಗೊಂಡಿದೆ. ಗುರುವಾರವಷ್ಟೇ ವಾಯುಪಡೆಯ ಮುಂದಿನ ಮುಖ್ಯಸ್ಥರನ್ನಾಗಿ ಭದೌರಿಯಾ ಅವರನ್ನು ನೇಮಿಸಲಾಗಿದ್ದು, ಭಾರತ, ಫ್ರಾನ್ಸ್‌ ಮಧ್ಯೆ ರಫೇಲ್‌ ಯುದ್ಧ ವಿಮಾನ ಒಪ್ಪಂದ ಅಂತಿಮ ಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಅಷ್ಟೇ ಅಲ್ಲ, ಅವರೇ ರಫೇಲ್‌ ಯುದ್ಧ ವಿಮಾನದ ಹಾರಾಟವನ್ನೂ ನಡೆಸಿದ್ದರು. ಅಕ್ಟೋಬರ್‌ 8ರಂದು ವಾಯುಪಡೆಗೆ ರಫೇಲ್‌ ಅನ್ನು ನಿಯೋಜಿಸಲಾಗುತ್ತದೆ ಯಾದರೂ ಭಾರತಕ್ಕೆ ಈ ವಿಮಾನಗಳು 2020ರ ಮೇ ತಿಂಗಳಲ್ಲಿ ಆಗಮಿಸುತ್ತವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ