ಇಂದಿನಿಂದ 1 ವರ್ಷ ಜಿ20ಗೆ ಭಾರತವೇ ದೊರೆ; ದೇಶಾದ್ಯಂತ ಹಲವು ಕಾರ್ಯಕ್ರಮಗಳ ಆಯೋಜನೆ

"ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಧ್ಯೇಯ

Team Udayavani, Dec 1, 2022, 7:40 AM IST

g 20 india lead

ನವದೆಹಲಿ:ಭಾರತಕ್ಕೆ ಇದೊಂದು ಐತಿಹಾಸಿಕ ಕ್ಷಣ. ಡಿ.1ರ ಗುರುವಾರ ಭಾರತವು ಅಧಿಕೃತವಾಗಿ ಪ್ರತಿಷ್ಠಿತ ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. ಒಂದಿಡೀ ವರ್ಷ “ಜಿ-20 ಸಾರಥ್ಯ’ ಭಾರತದ ಕೈಯ್ಯಲ್ಲಿರಲಿದ್ದು, ಮುಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ 2 ದಿನಗಳ ಶೃಂಗವನ್ನೂ ಆಯೋಜಿಸಲಿದೆ. ಇದು ದೇಶದಲ್ಲಿ ನಡೆಯಲಿರುವ ಅತಿದೊಡ್ಡ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿರಲಿದೆ.

ಈ ಶೃಂಗವು “ಅಭೂತಪೂರ್ವ ಮತ್ತು ವಿಶಿಷ್ಟವಾದ ಭಾರತೀಯ ಅಸ್ಮಿತೆ’ಯನ್ನು ಹೊಂದಿರಲಿದ್ದು, ಬ್ರ್ಯಾಂಡ್‌ ಇಂಡಿಯಾವನ್ನು ಜಗತ್ತಿಗೇ ತೋರಿಸಿಕೊಡುವ ಪ್ರಯತ್ನ ಇದಾಗಿರಲಿದೆ ಎಂದು ಮೂಲಗಳು ತಿಳಿಸಿವೆ. ಈ ವಾರಾಂತ್ಯದಲ್ಲಿ ಜಿ20ಯ ಸದಸ್ಯ ರಾಷ್ಟ್ರಗಳು ಮತ್ತು ಅತಿಥಿ ರಾಷ್ಟ್ರಗಳು ಉದಯಪುರದಲ್ಲಿ ಸಭೆ ಸೇರುವ ಸಾಧ್ಯತೆಯಿದೆ.

2023ರ ಶೃಂಗದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ, ಅರುಣಾಚಲ ಪ್ರದೇಶ, ಲಡಾಖ್‌ ಸೇರಿದಂತೆ ದೇಶಾದ್ಯಂತ ಸುಮಾರು 200 ಪ್ರದೇಶಗಳಲ್ಲಿ ಸಿದ್ಧತಾ ಸಭೆಗಳು ನಡೆಯಲಿವೆ.

ಚರ್ಚೆಗೆ ಬರಲಿರುವ ವಿಷಯಗಳು
ಭಯೋತ್ಪಾದನೆ ನಿಗ್ರಹ, ಆರ್ಥಿಕ ಚೇತರಿಕೆ, ಪೂರೈಕೆ ಸರಪಳಿಯಲ್ಲಿನ ಅಡ್ಡಿ ಸರಿಪಡಿಸುವುದು, ಎಲ್ಲರನ್ನೊಳಗೊಂಡ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿಯ ಗುರಿ ಸಾಧಿಸುವುದು, ಹವಾಮಾನ ಬದಲಾವಣೆ, ವಿವಿಧ ದೇಶಗಳ ಸಾಲದ ಸಮಸ್ಯೆ, ಬ್ರೆಟ್ಟನ್‌ ವುಡ್ಸ್‌ ಇನ್‌ಸ್ಟಿಟ್ಯೂಷನ್ಸ್‌, ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನಂಥ ಸಂಸ್ಥೆಗಳಲ್ಲಿ ಸುಧಾರಣೆ, ರಷ್ಯಾ-ಉಕ್ರೇನ್‌ ಯುದ್ಧದಿಂದಾಗಿ ವಿಭಜನೆಗೊಂಡಿರುವ ದೇಶಗಳನ್ನು ಬೆಸೆಯುವ ಸೇತುವಾಗಿ ಕೆಲಸ ಮಾಡುವುದು ಮತ್ತಿತರ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.

ಇಂದು ಏನೇನು ಕಾರ್ಯಕ್ರಮ?
– ದೇಶದ ಎಫ್ಎಂ ರೇಡಿಯೋಗಳಿಗೆಂದೇ ವಿಶೇಷವಾದ ಜಿ-20 ಜಿಂಗಲ್‌ ಅನಾವರಣ
– ದೇಶದ 100 ಸ್ಮಾರಕಗಳಲ್ಲಿ “ಜಿ20 ಲೋಗೋ’ದ ವಿಶೇಷ ಲೈಟಿಂಗ್‌ ವ್ಯವಸ್ಥೆ
– ಶೃಂಗಕ್ಕೆ ಸಂಬಂಧಿಸಿದ ವಿಶೇಷ ಆಡಿಯೋ-ವಿಡಿಯೋ ಕ್ಲಿಪ್‌ಗ್ಳ ಬಿಡುಗಡೆ
– ಜಿ-20 ಲೋಗೋದೊಂದಿಗೆ ಸೆಲ್ಫಿ ಎಂಬ ಸ್ಪರ್ಧೆ
– ನಾಗಾಲ್ಯಾಂಡ್‌ನ‌ ಜನಪ್ರಿಯ ಹಾರ್ನ್ಬಿಲ್‌ ಉತ್ಸವದ ಪ್ರದರ್ಶನ
– ಪುರಿಯಲ್ಲಿ ಮರಳುಶಿಲ್ಪಿಗಳಿಂದ ಜಿ-20 ಲೋಗೋದ ಮರಳುಶಿಲ್ಪ ರಚನೆ
– ಶಾಲೆಗಳಲ್ಲಿ ಜಿ20 ಕುರಿತ ವಿವಿಧ ಕಾರ್ಯಕ್ರಮಗಳ ಆಯೋಜನೆ
– 75 ಕಾಲೇಜು, ವಿವಿಗಳ ವಿದ್ಯಾರ್ಥಿಗಳೊಂದಿಗೆ ವಿದೇಶಾಂಗ ಸಚಿವ ಜೈಶಂಕರ್‌ ಸಂವಾದ

 

ಟಾಪ್ ನ್ಯೂಸ್

1-wwqeq

ಮಂಗಳೂರು : ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

china baloon

ಭಾರತ,ಜಪಾನ್‌ ಮೇಲೂ ಚೀನೀ ಬಲೂನ್ ಹಾರಾಟ : ವಾಷಿಂಗ್ಟನ್‌ ಪೋಸ್ಟ್‌ನಿಂದ ಆತಂಕಕಾರಿ ವರದಿ

money 1

ಹಣದುಬ್ಬರದ ವಿರುದ್ಧದ ಹೋರಾಟ : ರೆಪೋ ದರ ಹೆಚ್ಚಿಸಿದ ಆರ್‌ಬಿಐ

1-adadsad

ನಾಲಗೆಯ ಮೇಲೆ ನಿಯಂತ್ರಣವಿರಬೇಕು’: ಮಹುವಾ ಮೊಯಿತ್ರಾಗೆ ಹೇಮಾ ಮಾಲಿನಿ

thumb-5

ಗರ್ಭಿಣಿ ಎಂದು ಘೋಷಿಸಿದ್ದ ಕೇರಳದ ತೃತೀಯಲಿಂಗಿ ದಂಪತಿಗಳಿಗೆ ಮಗುವಿನ ಜನನ!

thumb-4

ಜೋ ಬಿಡೆನ್ ಅವರ ಪತ್ನಿ ಕಮಲಾ ಹ್ಯಾರಿಸ್ ರ ಪತಿಯನ್ನು ಚುಂಬಿಸಿದರೇ?

ಕೆಲಸಕ್ಕೆ ಕರೆಸಿಕೊಂಡು 5 ತಿಂಗಳಿನಿಂದ ಬಾಲಕಿಗೆ ಹಲ್ಲೆ,ದೌರ್ಜನ್ಯ: ದಂಪತಿ ಬಂಧನ

ಕೆಲಸಕ್ಕೆ ಕರೆಸಿಕೊಂಡು 5 ತಿಂಗಳಿನಿಂದ ಬಾಲಕಿಗೆ ಹಲ್ಲೆ,ದೌರ್ಜನ್ಯ: ದಂಪತಿ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

china baloon

ಭಾರತ,ಜಪಾನ್‌ ಮೇಲೂ ಚೀನೀ ಬಲೂನ್ ಹಾರಾಟ : ವಾಷಿಂಗ್ಟನ್‌ ಪೋಸ್ಟ್‌ನಿಂದ ಆತಂಕಕಾರಿ ವರದಿ

1-adadsad

ನಾಲಗೆಯ ಮೇಲೆ ನಿಯಂತ್ರಣವಿರಬೇಕು’: ಮಹುವಾ ಮೊಯಿತ್ರಾಗೆ ಹೇಮಾ ಮಾಲಿನಿ

ಕೆಲಸಕ್ಕೆ ಕರೆಸಿಕೊಂಡು 5 ತಿಂಗಳಿನಿಂದ ಬಾಲಕಿಗೆ ಹಲ್ಲೆ,ದೌರ್ಜನ್ಯ: ದಂಪತಿ ಬಂಧನ

ಕೆಲಸಕ್ಕೆ ಕರೆಸಿಕೊಂಡು 5 ತಿಂಗಳಿನಿಂದ ಬಾಲಕಿಗೆ ಹಲ್ಲೆ,ದೌರ್ಜನ್ಯ: ದಂಪತಿ ಬಂಧನ

modi jacket

ಸ್ಪೆಷಲ್‌ ಜಾಕೆಟ್‌ ಧರಿಸಿ ಲೋಕಸಭೆಯಲ್ಲಿ ಕಾಣಿಸಿಕೊಂಡ ಪ್ರಧಾನಿ ಮೋದಿ

thumb-2

ಝೂಮ್‌ ಕಂಪನಿಯಿಂದ 1,300 ಉದ್ಯೋಗ ಕಡಿತ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

1-wwqeq

ಮಂಗಳೂರು : ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

china baloon

ಭಾರತ,ಜಪಾನ್‌ ಮೇಲೂ ಚೀನೀ ಬಲೂನ್ ಹಾರಾಟ : ವಾಷಿಂಗ್ಟನ್‌ ಪೋಸ್ಟ್‌ನಿಂದ ಆತಂಕಕಾರಿ ವರದಿ

tdy-15

ಜಾಹೀರಾತು ಪ್ರದರ್ಶನಕ್ಕೆ ಶೀಘ್ರ ಅನುಮತಿ?

tdy-14

ವೇತನ ಸಿಗದ್ದಕ್ಕೆ ಆತ್ಮಹತ್ಯೆಗೆ ಶರಣಾದ ನೌಕರನ ಅಂತ್ಯಕ್ರಿಯೆ ಕಾರ್ಯ ಗೌಪ್ಯ!

ನಶೆಯಲ್ಲಿದ್ದ ಗೆಳತಿಯರ ಮೇಲೆ ಅತ್ಯಾಚಾರ

ನಶೆಯಲ್ಲಿದ್ದ ಗೆಳತಿಯರ ಮೇಲೆ ಅತ್ಯಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.