ಎ. 1ರಿಂದ ಎಲ್ಲೆಡೆ ಬಿಎಸ್6 ಇಂಧನ ಲಭ್ಯ
Team Udayavani, Feb 20, 2020, 11:59 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಪರಿಸರ ಮಾಲಿನ್ಯ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸರಕಾರವು ಎ. 1ರಿಂದ ಬಿಎಸ್6 ಇಂಧನವನ್ನು ಕಡ್ಡಾಯಗೊಳಿಸಿದ್ದು, ದೇಶದ ಎಲ್ಲ ಪೆಟ್ರೋಲ್ ಬಂಕ್ಗಳಲ್ಲಿ ಈ ಮಾದರಿಯ ಇಂಧನ ಸಿಗಲಿದೆ ಎಂದು ಪೆಟ್ರೋಲ್ ಬಂಕ್ಗಳ ಮಾಲಕರು ತಿಳಿಸಿದ್ದಾರೆ.
ಕರ್ನಾಟಕ, ಗೋವಾ ಮತ್ತು ಕೇರಳದ ಹೆಚ್ಚಿನ ಪೆಟ್ರೋಲ್ ಬಂಕ್ಗಳಿಗೆ ಮಂಗಳೂರಿನ ಎಂಆರ್ಪಿಎಲ್ನಿಂದ ಇಂಧನ ಸರಬರಾಜು ಆಗುತ್ತಿದ್ದು, ಇಲ್ಲಿ ಈಗಾಗಲೇ ಹೊಸ ಮಾದರಿಯಂತೆ ಇಂಧನ ಉತ್ಪಾದಿಸಲಾಗುತ್ತಿದೆ.
ಆದುದರಿಂದ ಎಚ್ಪಿಸಿಎಲ್, ಬಿಪಿಸಿಎಲ್, ಐಒಸಿ ಸಹಿತ ಎಲ್ಲ ಪೆಟ್ರೋಲ್ ಬಂಕ್ಗಳಲ್ಲಿ ಹೊಸ ಮಾದರಿಯ ಪೆಟ್ರೋಲ್ ಲಭ್ಯವಿರಲಿದೆ.