Udayavni Special

ಪಾಕ್‌ಗೆ ಭಾರತ, ಅಮೆರಿಕ ಎಚ್ಚರಿಕೆ


Team Udayavani, Sep 7, 2018, 6:00 AM IST

36.jpg

ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ಇದೇ ಮೊದಲ ಬಾರಿಗೆ ನಡೆಸಿದ 2+2 ಮಾತುಕತೆಯಲ್ಲಿ ಪಾಕಿಸ್ತಾನಕ್ಕೆ ಉಗ್ರರನ್ನು ಮಟ್ಟಹಾಕುವಂತೆ ಎಚ್ಚರಿಕೆ ನೀಡಲಾಗಿದೆ. 2008ರ ಮುಂಬೈ ದಾಳಿ ನಡೆದು 10 ವರ್ಷಗಳಾಗಿರುವ ಹಿನ್ನೆಲೆಯಲ್ಲಿ, ಪಠಾಣ್‌ಕೋಟ್‌, ಉರಿಯಲ್ಲಿ ಆತ್ಮಹತ್ಯಾ ದಾಳಿ ಹಾಗೂ ಇತರ ಗಡಿಯಾಚೆಗಿನ ಉಗ್ರ ದಾಳಿಯ ಸಂಚುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಲಾಗಿದೆ. ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಮಾತುಕತೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೊಂಪೊ ಮತ್ತು ರಕ್ಷಣಾ ಸಚಿವ ಜೇಮ್ಸ್‌ ಮ್ಯಾಟಿಸ್‌ ಭಾಗವಹಿಸಿದ್ದರು. ಈ ವೇಳೆ ಹಲವು ಒಪ್ಪಂದಗಳಿಗೆ ಉಭಯ ದೇಶಗಳ ಅಧಿಕಾರಿಗಳು ಸಹಿ ಹಾಕಿದ್ದಾರೆ. ಅಲ್ಲದೆ ಉಭಯ ದೇಶಗಳ ರಕ್ಷಣೆ ಮತ್ತು ವಿದೇಶಾಂಗ ಸಚಿವಾಲಯಗಳಿಗೆ ಹಾಟ್‌ಲೆನ್‌ ಸ್ಥಾಪನೆಗೂ ಸಮ್ಮತಿ ನೀಡಲಾಗಿದೆ.

ಘೋಷಿತ ಅಥವಾ ಶಂಕಿತ ಉಗ್ರರ ಮಾಹಿತಿ ಹಂಚಿಕೆ ಪ್ರಯತ್ನಗಳನ್ನು ಇನ್ನಷ್ಟು ಸುಧಾರಿಸುವುದು ಮತ್ತು ಉಗ್ರರನ್ನು ಹಸ್ತಾಂತರಿಸುವಲ್ಲಿ ವಿಶ್ವಸಂಸ್ಥೆ ಭದ್ರತಾ ಸಮಿತಿಯ ನಿಲುವಳಿಗೆ ಬದ್ಧವಾಗುವ ನಿಟ್ಟಿನಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಉಭಯ ದೇಶಗಳ ಸಚಿವರು ನಿರ್ಧರಿಸಿದ್ದಾರೆ.

ಚೀನಾ ಸಬ್‌ಮರೀನ್‌ಗಳ ನೇರ ದೃಶ್ಯಾವಳಿ ಲಭ್ಯ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಂವಹನ ಒಪ್ಪಂದ ಕಾಮ್‌ಕಾಸಾ ಗೆ ಉಭಯ ದೇಶಗಳು ಸಮ್ಮತಿ ವ್ಯಕ್ತಪಡಿಸಿವೆ. ಈ ಒಪ್ಪಂದ ಭಾರತೀಯ ಜಲ ಗಡಿ ರಕ್ಷಣೆಯಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಹಿಂದೂ ಮಹಾಸಾಗರದಲ್ಲಿ ಚೀನಾ ಸಬ್‌ಮರೀನ್‌ಗಳು ಪ್ರವೇಶಿಸಿದರೆ ತಕ್ಷಣವೇ ಆ ಸಬ್‌ಮರೀನ್‌ನ ಸಮಗ್ರ ವಿವರಗಳನ್ನು ಭಾರತಕ್ಕೆ ಒದಗಿಸುತ್ತದೆ. ಅಷ್ಟೇ ಅಲ್ಲ, ಚೀನಾ ಸಬ್‌ಮರೀನ್‌ನ ನೇರ ದೃಶ್ಯಾವಳಿ ಕೂಡ ಭಾರತಕ್ಕೆ ಲಭ್ಯವಾಗಲಿದೆ. ಈ ತಂತ್ರಜ್ಞಾನವು ಅಮೆರಿಕ ಸ್ಯಾಟಲೈಟ್‌ಗಳ ಮೂಲಕ ಭಾರತಕ್ಕೆ ಲಭ್ಯವಾಗಲಿದೆ. ಅಷ್ಟೇ ಅಲ್ಲ, ಗಡಿಯಲ್ಲಿ ಶತ್ರುಗಳ ಮಾಹಿತಿ ಕೂಡ ಭಾರತಕ್ಕೆ ನಿಖರವಾಗಿ ಲಭ್ಯವಾಗಲಿದೆ. ನೌಕಾಪಡೆ ಖರೀದಿಸಲಿರುವ ಸೀ ಗಾರ್ಡಿಯನ್‌ ಡ್ರೋನ್‌ಗಳಿಗೆ ಅತ್ಯಾಧುನಿಕ ಮತ್ತು ನಿಖರವಾದ ಜಿಪಿಎಸ್‌ ಹಾಗೂ ಐಎಫ್ಎಫ್ ಸೌಲಭ್ಯ ಅಳವಡಿಸಲೂ ನಿರ್ಧರಿಸಲಾಗಿದೆ. ಈ ಸೇವೆಯನ್ನು ಅಮೆರಿಕ ಒದಗಿಸಲಿದ್ದು, ಈ ಡ್ರೋನ್‌ಗಳನ್ನು ಶತ್ರು ದೇಶಗಳು ದಿಕ್ಕುತಪ್ಪಿಸುವುದು ಅಸಾಧ್ಯವಾಗಿದೆ.

ಕ್ಷಿಪಣಿ ಖರೀದಿ ಸಲೀಸು?
ರಷ್ಯಾದಿಂದ ಎಸ್‌-400 ಟ್ರೈಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಬಗ್ಗೆ ಭಾರತ ಅಮೆರಿಕ ಮನವೊಲಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ. ರಷ್ಯಾ ಜತೆಗೆ ಭಾರತ ಹೊಂದಿರುವ ಬಾಂಧವ್ಯ ಇತರ ರಾಷ್ಟ್ರಗಳ ಜತೆಗಿನ ಭಿನ್ನ ಮತ್ತು ದಕ್ಷಿಣ ಏಷ್ಯಾ ವ್ಯಾಪ್ತಿಯಲ್ಲಿನ ಪ್ರಾದೇಶಿಕ ಭದ್ರತೆಯನ್ನು ಮುಂದಿಟ್ಟುಕೊಂಡು ಅಮೆರಿಕದ ಮುಂದೆ ಭಾರತ ಮಾಡಿದ ಲಾಬಿ ಯಶಸ್ವಿಯಾಗಿದೆ ಎಂದು “ನ್ಯೂಸ್‌ 18′ ವರದಿ ಮಾಡಿದೆ.

ಇರಾನ್‌ ವಿಚಾರ
ಇರಾನ್‌ನಿಂದ ತೈಲ ಆಮದು ವಿಚಾರದ ಬಗ್ಗೆ ಪ್ರಾಸ್ತಾವಿಕವಾಗಿ ಚರ್ಚೆಯಾಗಿದೆ ಎಂದು ಹೇಳಲಾಗಿದೆ. ಹೆಸರು ಬಹಿರಂಗ ಪಡಿಸಲಿಚ್ಛಿದ ಅಮೆರಿಕ ವಿದೇಶಾಂಗ ಖಾತೆಯ ಹಿರಿಯ ಅಧಿಕಾರಿಯೊಬ್ಬರು “ದ ಬಿಸಿನೆಸ್‌ ಸ್ಟಾಂಡರ್ಡ್‌’ ಪತ್ರಿಕೆಗೆ ಮಾಹಿತಿ ನೀಡಿ ಭಾರತ ಮತ್ತು ಅಮೆರಿಕ ಅಧಿಕಾರಿಗಳು ಈ ನಿಟ್ಟಿನಲ್ಲಿ ಪರಸ್ಪರ ಮಾತುಕತೆ ನಡೆಸಲು ಒಪ್ಪಿಕೊಂಡಿವೆ. 

ಟಾಪ್ ನ್ಯೂಸ್

ರೈತರು ಪ್ರತಿಭಟನೆ ಮಾಡುತ್ತಿರುವ ಸಿಂಘುವಿನಲ್ಲಿ ಗುಂಡಿನ ದಾಳಿ

ಖಝಃಝಃಖಝಖಝ

ಮಹಿಳಾ ದಿನಾಚರಣೆ : 23 ವರ್ಷಗಳ ನಂತರ ಭಾರತೀಯ ನೌಕಾಪಡೆಗೆ ಮಹಿಳೆಯರ ನೇಮಕ

Bank of baroda mahila shakti account

ಮಹಿಳೆಯರಿಗೆ ‘ಬ್ಯಾಂಕ್ ಆಫ್ ಬರೋಡಾ’ದಿಂದ ಮಹಿಳಾ ದಿನಾಚರಣೆಯ ವಿಶೇಷ ಆಫರ್..!

ಚಿಕ್ಕೋಡಿ ಪುರಸಭೆಯಲ್ಲಿ ವಿದ್ಯಾರ್ಥಿನಿಯರಿಂದ ಒಂದು ದಿನ ಅಧಿಕಾರ ನಿರ್ವಹಣೆ

ಚಿಕ್ಕೋಡಿ ಪುರಸಭೆಯಲ್ಲಿ ವಿದ್ಯಾರ್ಥಿನಿಯರಿಂದ ಒಂದು ದಿನ ಅಧಿಕಾರ ನಿರ್ವಹಣೆ

Mahadayi

ರಾಜ್ಯ ಬಜೆಟ್-2021 : ಕಳಸಾ-ಬಂಡೂರಿ ಯೋಜನೆಗೆ ಭರ್ಜರಿ ಅನುದಾನ ಘೋಷಣೆ  

ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ, ಕುರಿ, ಕೋಳಿ ತಳಿ ಸಂವರ್ಧನೆಗೆ ಹೊಸ ಯೋಜನೆ ಘೋಷಣೆ

ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ, ಕುರಿ, ಕೋಳಿ ತಳಿ ಸಂವರ್ಧನೆಗೆ ಹೊಸ ಯೋಜನೆ ಘೋಷಣೆ

Special Article On Womens

ಪುರುಷನೆ ಅಪರಾಧಿ, ಮಹಿಳೆಯೆ ಸಂತ್ರಸ್ತೆ ಎಂಬ ಮನಃಸ್ಥಿತಿಯಿಂದ ಹೊರಬರುವುದು ಅನಿವಾರ್ಯ.!?







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತರು ಪ್ರತಿಭಟನೆ ಮಾಡುತ್ತಿರುವ ಸಿಂಘುವಿನಲ್ಲಿ ಗುಂಡಿನ ದಾಳಿ

ಖಝಃಝಃಖಝಖಝ

ಮಹಿಳಾ ದಿನಾಚರಣೆ : 23 ವರ್ಷಗಳ ನಂತರ ಭಾರತೀಯ ನೌಕಾಪಡೆಗೆ ಮಹಿಳೆಯರ ನೇಮಕ

ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ; ಟಿಎಂಸಿ ಕೈವಾಡ: ಬಿಜೆಪಿ ಆರೋಪ

ಬಿಜೆಪಿ ಮುಖಂಡನ ಮೇಲೆ ಗುಂಡಿನ ದಾಳಿ; ಟಿಎಂಸಿ ಕೈವಾಡ: ಬಿಜೆಪಿ ಆರೋಪ

ಗಡಿ ಕಾವಲಿಗೆ ಉಪಗ್ರಹದ ಬಲ : ಮಾ.28ರಂದು ಇಸ್ರೋದಿಂದ ಗೇಮ್‌ಚೇಂಜರ್‌ ಉಪಗ್ರಹ ಉಡಾವಣೆ

ಗಡಿ ಕಾವಲಿಗೆ ಉಪಗ್ರಹದ ಬಲ : ಮಾ.28ರಂದು ಇಸ್ರೋದಿಂದ ಗೇಮ್‌ಚೇಂಜರ್‌ ಉಪಗ್ರಹ ಉಡಾವಣೆ

ಸೋಮವಾರದಿಂದ ಬಜೆಟ್‌ ಅಧಿವೇಶನದ 2ನೇ ಹಂತ ಕಲಾಪ ಆರಂಭ

ಸೋಮವಾರದಿಂದ ಬಜೆಟ್‌ ಅಧಿವೇಶನದ 2ನೇ ಹಂತ ಕಲಾಪ ಆರಂಭ

MUST WATCH

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

udayavani youtube

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

ಹೊಸ ಸೇರ್ಪಡೆ

ಜಿಲ್ಲೆಯಲ್ಲಿ ಮಹಿಳಾಮಣಿಗಳದ್ದೇ ದರ್ಬಾರು, ಹೋರಾಟದಲ್ಲೂ ಮುಂದು

ಜಿಲ್ಲೆಯಲ್ಲಿ ಮಹಿಳಾಮಣಿಗಳದ್ದೇ ದರ್ಬಾರು, ಹೋರಾಟದಲ್ಲೂ ಮುಂದು

ರೈತರು ಪ್ರತಿಭಟನೆ ಮಾಡುತ್ತಿರುವ ಸಿಂಘುವಿನಲ್ಲಿ ಗುಂಡಿನ ದಾಳಿ

ಸಶಸ್ತ್ರ ಮೀಸಲು ಪಡೆ ಟೀಂ ಚಾಂಪಿಯನ್‌

ಸಶಸ್ತ್ರ ಮೀಸಲು ಪಡೆ ಟೀಂ ಚಾಂಪಿಯನ್‌

ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ

ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ

ಮಾಣಿಯಲ್ಲಿ ಕಾರು-ಪಿಕಪ್ ಢಿಕ್ಕಿ: ಚಾಲಕನಿಗೆ ಗಾಯ

ಮಾಣಿಯಲ್ಲಿ ಕಾರು-ಪಿಕಪ್ ಢಿಕ್ಕಿ: ಚಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.